For Quick Alerts
ALLOW NOTIFICATIONS  
For Daily Alerts

ಎಐಸಿಸಿ ಖಜಾಂಚಿ ಅಹ್ಮದ್ ಪಟೇಲ್ ಮನೆಗೆ ಇಡಿ ಅಧಿಕಾರಿಗಳ ದೌಡು

|

ನವದೆಹಲಿ, ಜೂನ್ 27: ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ (ಎಸ್‌ಬಿಎಲ್) ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್‌ ಇಂಡಿಯಾ ಕಾಂಗ್ರೆಸ್ ಕಮಿಟಿ ಖಜಾಂಚಿ ಹಾಗೂ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಅವರ ನವದೆಹಲಿಯ ಮನೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೌಡಾಯಿಸಿದ್ದಾರೆ.

ಈ ಹಿಂದೆ ಪ್ರಕರಣದ ವಿಚಾರಣೆಗಾಗಿ ಇಡಿ ಅಹ್ಮದ್ ಪಟೇಲ್‌ಗೆ ನೋಟಿಸ್ ಕಳುಹಿಸತ್ತು. ಕೋವಿಡ್ ಕಾರಣದಿಂದಾಗಿ ಅವರು ವಿಚಾರಣೆಯನ್ನು ತಪ್ಪಿಸಿಕೊಂಡಿದ್ದರು. ಆದರೆ, ಇಂದು ಏಕಾಏಕಿ ಇಡಿ ಅಧಿಕಾರಿಗಳು ಅಹ್ಮದ್ ಪಟೇಲ್ ಹುಡುಕಿಕೊಂಡು ನೇರವಾಗಿ ಅವರ ಮನೆಗೇ ತರಳಿದ್ದಾರೆ.

ಹೂಡಿಕೆದಾರ ರಾಕೇಶ್ ಜುಂಜುನ್ವಾಲಾಗೆ ಸೆಬಿಯಿಂದ ಶೋಕಾಸ್ ನೋಟಿಸ್ ಜಾರಿಹೂಡಿಕೆದಾರ ರಾಕೇಶ್ ಜುಂಜುನ್ವಾಲಾಗೆ ಸೆಬಿಯಿಂದ ಶೋಕಾಸ್ ನೋಟಿಸ್ ಜಾರಿ

ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ (ಎಸ್‌ಬಿಎಲ್) ಹಾಗೂ ಸಂದೇಸರ ಗ್ರೂಪ್ ಮನಿ ಲಾಂಡರಿಂಗ್ ಪ್ರಕರಣ ಸುಮಾರು 15 ಸಾವಿರ ಕೋಟಿ ರುಪಾಯಿಯಷ್ಟು ದೊಡ್ಡದಾಗಿದೆ ಎಂದು ಇಡಿ ಈ ಹಿಂದೆ ಹೇಳಿತ್ತು. ಅಲ್ಲದೇ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಮಾಡಿದ ಪಿಎನ್‌ಬಿ ಹಗರಣಕ್ಕಿಂತ ದೊಡ್ಡದಾಗಿದೆ ಎಂದು ಹೇಳಿತ್ತು.

ಎಐಸಿಸಿ ಖಜಾಂಚಿ ಅಹ್ಮದ್ ಪಟೇಲ್ ಮನೆಗೆ ಇಡಿ ಅಧಿಕಾರಿಗಳ ದೌಡು

ಈ ಮೊದಲು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟೇಲ್ ಅವರ ಪುತ್ರ ಮತ್ತು ಸೊಸೆ ಅವರನ್ನು ಪ್ರಶ್ನಿಸಲಾಗಿತ್ತು ಇಡಿ ಮೂಲಗಳ ಪ್ರಕಾರ, ಎಸ್‌ಬಿಎಲ್ ಅಥವಾ ಸಂದೇಸರ್ ಸಮೂಹದ ತನಿಖೆ ಮತ್ತು ಅದರ ಪ್ರವರ್ತಕರಾದ ನಿತಿನ್ ಸಂದೇಸರ, ಚೇತನ್ ಸಂದೇಸರ ಮತ್ತು ದೀಪ್ತಿ ಸಂದೇಸರ ಅವರು ಭಾರತೀಯ ಬ್ಯಾಂಕುಗಳಿಗೆ ಸುಮಾರು 14,500 ಕೋಟಿ ರೂ.ಗಳಷ್ಟು ವಂಚಿಸಿದ್ದಾರೆ ಎನ್ನಲಾಗಿದೆ. ಈ ಕಂಪನಿಯಲ್ಲಿ ಅಹ್ಮದ್ ಪಟೇಲ್ ಅವರೂ ಪಾಲುದಾರರಾಗಿದ್ದಾರೆ.

English summary

ED Enters Congress Top Leader Ahmad Patel Residence About Sterling Biotech case

ED Enters Congress Top Leader Ahmad Patel Residence About SBL Scam
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X