For Quick Alerts
ALLOW NOTIFICATIONS  
For Daily Alerts

ಶಿಕ್ಷಣ ಸಾಲ: ಬಾಕಿ ಉಳಿಸಿಕೊಂಡ ಸಾಲಗಾರರಲ್ಲಿ ನರ್ಸಿಂಗ್, ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಹೆಚ್ಚು!

|

ಡಿಸೆಂಬರ್ 2020ಕ್ಕೆ ಕೊನೆಗೊಂಡ ಅಂಕಿ-ಅಂಶಗಳ ಪ್ರಕಾರ ಶಿಕ್ಷಣ ಸಾಲ ಪಡೆದ ವಿದ್ಯಾರ್ಥಿಗಳ ಪೈಕಿ ನರ್ಸಿಂಗ್ ಹಾಗೂ ಎಂಜಿನಿಯರಿಂಗ್‌ಗಾಗಿ ಪಡೆದ ಶಿಕ್ಷಣ ಸಾಲವೇ ಹೆಚ್ಚಿನ ಅನುತ್ಪಾದಕ ಸಾಲ (ಎನ್‌ಪಿಎ) ಆಗಿ ಉಳಿದಿದೆ ಎಂಬುದು ತಿಳಿದು ಬಂದಿದೆ.

ರಾಜ್ಯ ಮಟ್ಟದ ಬ್ಯಾಂಕರ್ಸ್ ಕಮಿಟೀಸ್‌ (SLBCs) ಅಂಕಿ-ಅಂಶಗಳ ಪ್ರಕಾರ ಒಟ್ಟಾರೆ ಶಿಕ್ಷಣ ಸಾಲಗಳಲ್ಲಿ ಶೇಕಡಾ 9.7ರಷ್ಟು ಸಾಲವನ್ನು ತೀರಿಸಲಾಗಿಲ್ಲ. ಇದರಲ್ಲಿ ನರ್ಸಿಂಗ್ ಹಾಗೂ ಎಂಜಿನಿಯರಿಂಗ್ ವಿಭಾಗದಿಂದಲೇ ಹೆಚ್ಚಿದೆ.

ಅನುತ್ಪಾದಕ ಸಾಲ 8,263 ಕೋಟಿ ರೂಪಾಯಿ

ಅನುತ್ಪಾದಕ ಸಾಲ 8,263 ಕೋಟಿ ರೂಪಾಯಿ

ಡಿಸೆಂಬರ್‌ಗೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಒಟ್ಟಾರೆ 23.3 ಲಕ್ಷ ಅಕೌಂಟ್‌ಗಳಿಂದ 84,965 ಕೋಟಿ ರೂಪಾಯಿ ಶಿಕ್ಷಣ ಸಾಲವನ್ನು ಪಡೆಯಲಾಗಿದೆ. ಇದರಲ್ಲಿ 3.5 ಲಕ್ಷ ಅಕೌಂಟ್‌ಗಳನ್ನೊಳಗೊಂಡ 8,263 ಕೋಟಿ ರೂಪಾಯಿ ಅನುತ್ಪಾದಕ ಸಾಲ(ಎನ್‌ಪಿಎ) ಆಗಿದೆ.

ಒಟ್ಟಾರೆ ಶಿಕ್ಷಣ ಸಾಲ 84,965 ಕೋಟಿ ರೂಪಾಯಿ

ಒಟ್ಟಾರೆ ಶಿಕ್ಷಣ ಸಾಲ 84,965 ಕೋಟಿ ರೂಪಾಯಿ

ಒಟ್ಟಾರೆ ಶಿಕ್ಷಣ ಸಾಲ (84,965 ಕೋ.) ಪಡೆದವರಲ್ಲಿ ಯಾವ ವಿದ್ಯಾರ್ಥಿಗಳು ಎಷ್ಟು ಸಾಲ ಪಡೆದಿದ್ದಾರೆ ಎಂಬ ಶೇಕಡಾವಾರು ಮಾಹಿತಿ ಈ ಕೆಳಗಿಳಿದಿದೆ

ಮೆಡಿಕಲ್ ವಿದ್ಯಾರ್ಥಿಗಳು 10,147 ಕೋಟಿ ರೂಪಾಯಿ (11.9%)
ಎಂಜಿನಿಯರಿಂಗ್ ವಿದ್ಯಾರ್ಥಿಗಳು 33,316 ಕೋಟಿ ರೂಪಾಯಿ (39.2%)
ನರ್ಸಿಂಗ್‌ 3,675 ಕೋಟಿ ರೂಪಾಯಿ (4.3%)
ಎಂಬಿಎ 9,541 ಕೋಟಿ ರೂಪಾಯಿ (11.2%)
ಇತರೆ 28,286 ಕೋಟಿ ರೂಪಾಯಿ (33.2%)

 

ಯಾವ ಶಿಕ್ಷಣ ವಿಭಾಗದಲ್ಲಿ ಹೆಚ್ಚಿದೆ ಅನುತ್ಪಾದಕ ಸಾಲ?

ಯಾವ ಶಿಕ್ಷಣ ವಿಭಾಗದಲ್ಲಿ ಹೆಚ್ಚಿದೆ ಅನುತ್ಪಾದಕ ಸಾಲ?

ಬಾಕಿ ಇರುವ ಶಿಕ್ಷಣ ಸಾಲದ ಮೊತ್ತದಲ್ಲಿ ನರ್ಸಿಂಗ್‌ ವಿಭಾಗವೇ ಅಗ್ರಸ್ಥಾನದಲ್ಲಿದೆ. 8,263 ಕೋಟಿ ರೂಪಾಯಿ ಅನುತ್ಪಾದಕ ಸಾಲದಲ್ಲಿ ಯಾವ ವಿಭಾಗವು ಎಷ್ಟು ಸಾಲ ಹೊಂದಿದೆ ಎಂಬ ಮಾಹಿತಿ ಈ ಕೆಳಗಿದೆ.

ನರ್ಸಿಂಗ್ 14.1%
ಎಂಜಿನಿಯರಿಂಗ್ 12.1%
ಎಂಬಿಎ 7.1%
ಮೆಡಿಕಲ್ 6.2%
ಇತರೆ 8.4%
ಒಟ್ಟು 9.7%

 

ಅನುತ್ಪಾದಕ ಸಾಲಗಳಲ್ಲಿ ಶಿಕ್ಷಣದ ಪಾತ್ರ

ಅನುತ್ಪಾದಕ ಸಾಲಗಳಲ್ಲಿ ಶಿಕ್ಷಣದ ಪಾತ್ರ

ಕೃಷಿ ಮತ್ತು ಕೈಗಾರಿಕೆಯನ್ನು ಹೊರತುಪಡಿಸಿದರೆ ಅನುತ್ಪಾದಕ ಸಾಲಗಳಲ್ಲಿ ಶಿಕ್ಷಣ ಸಾಲವು ಪ್ರಮುಖ ಪಾಲನ್ನು ಹೊಂದಿದೆ. 2018, 2019, 2020ರ ಹಣಕಾಸು ವರ್ಷದಲ್ಲಿ ಕೈಗಾರಿಕಾ ವಲಯದ ಬಾಕಿ ಉಳಿಸಿಕೊಂಡ ಸಾಲವು ಕ್ರಮವಾಗಿ 21%, 16,7%, 13.6% ನಷ್ಟಿದೆ. ಇನ್ನು ಇದೇ ಹಣಕಾಸು ವರ್ಷಗಳಲ್ಲಿ ಕೃಷಿ 7.8%, 8.9%, 10.3% ಆಗಿದೆ.

ಈ ಎರಡು ಪ್ರಮುಖ ವಲಯಗಳ ನಂತರದಲ್ಲಿ ಶಿಕ್ಷಣ ಕ್ಷೇತ್ರವು 8.1%, 8.3%, 7.6% ನಷ್ಟಿದೆ. ಹೌಸಿಂಗ್ ಮತ್ತು ಆಟೊಮೊಬೈಲ್ ಕ್ಷೇತ್ರವು 2% ಗಿಂತ ಕಡಿಮೆಯಿದೆ.

 

English summary

Education Loan NPAs: Nursing Eng Students Bigger Defaulters

Nursing and engineering are among are the top contributors to education loan bad debt.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X