For Quick Alerts
ALLOW NOTIFICATIONS  
For Daily Alerts

ಎಂಟು ಪ್ರಮುಖ ಕೈಗಾರಿಕೆ ಪೈಕಿ 6ರ ಉತ್ಪಾದನೆ ಕುಸಿತ

|

ಭಾರತದ ಜಿಡಿಪಿ ಜುಲೈ- ಸೆಪ್ಟೆಂಬರ್ ತ್ರೈಮಾಸಿಕಕ್ಕೆ 4.5 ಪರ್ಸೆಂಟ್ ಗೆ ಕುಸಿದಿದೆ. ವರ್ಷದ ಹಿಂದೆ ಇದೇ ಅವಧಿಗೆ 7 ಪರ್ಸೆಂಟ್ ಇತ್ತು. ನವೆಂಬರ್ 29ನೇ ತಾರೀಕು ಬಿಡುಗಡೆಯಾದ ದತ್ತಾಂಶದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಇನ್ನು ಇದೇ ಅವಧಿಯಲ್ಲಿ ಎಂಟು ಮುಖ್ಯ ಕೈಗಾರಿಕೆಗಳ ಉತ್ಪಾದನೆಯು 5.8 ಪರ್ಸೆಂಟ್ ನಷ್ಟು ಇಳಿಕೆಯಾಗಿದೆ.

ಪ್ರಮುಖ ಮೂಲಸೌಕರ್ಯ ಕೈಗಾರಿಕೆಗಳ ಉತ್ಪಾದನೆಯು ಅಕ್ಟೋಬರ್ ನಲ್ಲಿ 5.8% ಕುಗ್ಗಿದೆ. 8 ಪ್ರಮುಖ ಕೈಗಾರಿಕೆಗಳ ಪೈಕಿ 6ರ ಉತ್ಪಾದನೆಯು ಅಕ್ಟೋಬರ್ ನಲ್ಲಿ ಕುಗ್ಗಿದೆ. ಕಲ್ಲಿದ್ದಲು ಉತ್ಪಾದನೆಯು 17.6%, ಕಚ್ಚಾ ತೈಲವು 5.1%, ನೈಸರ್ಗಿಕ ಅನಿಲವು 5.7%, ಸಿಮೆಂಟ್ ಉತ್ಪಾದನೆ -7.7%, ಉಕ್ಕು -1.6%, ವಿದ್ಯುಚ್ಛಕ್ತಿ -12.5% ಈ ಅವಧಿಯಲ್ಲಿ ಇಳಿದಿದೆ.

2ನೇ ತ್ರೈಮಾಸಿಕದಲ್ಲಿ ಜಿಡಿಪಿ ಮತ್ತೂ ಪಾತಾಳಕ್ಕೆ: 4.5 ಪರ್ಸೆಂಟ್‌ಗೆ ಇಳಿಕೆ2ನೇ ತ್ರೈಮಾಸಿಕದಲ್ಲಿ ಜಿಡಿಪಿ ಮತ್ತೂ ಪಾತಾಳಕ್ಕೆ: 4.5 ಪರ್ಸೆಂಟ್‌ಗೆ ಇಳಿಕೆ

ಅಕ್ಟೋಬರ್ ನಲ್ಲಿ ಪ್ರಗತಿ ಸಾಧಿಸಿದ ಏಕೈಕ ವಲಯ ರಸಗೊಬ್ಬರ. ವರ್ಷದಿಂದ ವರ್ಷಕ್ಕೆ ಪ್ರಗತಿ ಗಮನಿಸಿದರೆ 11.8% ಪ್ರಗತಿ ದಾಖಲಾಗಿದೆ. ರೀಫೈನರಿ ಉತ್ಪನ್ನಗಳು 0.4 ಪರ್ಸೆಂಟ್ ಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.3 ಪರ್ಸೆಂಟ್ ಇತ್ತು.

ಎಂಟು ಪ್ರಮುಖ ಕೈಗಾರಿಕೆ ಪೈಕಿ 6ರ ಉತ್ಪಾದನೆ ಕುಸಿತ

2018ರ ಅಕ್ಟೋಬರ್ ನಲ್ಲಿ ಎಂಟು ಪ್ರಮುಖ ವಲಯಗಳು 4.8% ವಿಸ್ತರಣೆ ಆಗಿತ್ತು. ಏಪ್ರಿಲ್ ಮತ್ತು ಅಕ್ಟೋಬರ್ ಮಧ್ಯೆ ಪ್ರಮುಖ ವಲಯಗಳ ವರ್ಷದಿಂದ ವರ್ಷದ ಬೆಳವಣಿಗೆಗೆ ಹೋಲಿಸಿದರೆ 0.2% ಕುಸಿದು, 5.4% ತಲುಪಿದೆ.

English summary

Eight Core Industries Output Declined By 5.8 Percent

GDP for Q2 down to 4.5 percent. As many as six of eight core industries saw a contraction in output in October.
Story first published: Friday, November 29, 2019, 18:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X