For Quick Alerts
ALLOW NOTIFICATIONS  
For Daily Alerts

ಟ್ವಿಟ್ಟರ್‌ ಉದ್ಯೋಗಿಗಳ ವಜಾ ಸಮರ್ಥಿಸಿದ ಎಲಾನ್ ಮಸ್ಕ್, ಹೇಳಿದ್ದೇನು?

|

ಭಾರತ ಸೇರಿದಂತೆ ಪ್ರಪಂಚದಾದ್ಯಂತ ಟ್ವಿಟ್ಟರ್‌ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ. ಭಾರತದಲ್ಲಿ 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಇದನ್ನು ಸಮರ್ಥನೆ ಮಾಡಿಕೊಂಡಿರುವ ಟ್ವಿಟ್ಟರ್‌ನ ನೂತನ ಮಾಲೀಕ ಎಲಾನ್ ಮಸ್ಕ್, ಬೇರೆ ಆಯ್ಕೆ ಇಲ್ಲ ಎಂದಿದ್ದಾರೆ.

ಸಂಸ್ಥೆಯು ಪ್ರತಿದಿನ ಮಿಲಿಯನ್ ಡಾಲರ್‌ಗಳನ್ನು ಕಳೆದುಕೊಳ್ಳುತ್ತಿದೆ. ನಷ್ಟ ಅನುಭವಿಸುತ್ತಿದೆ. ಈ ನಡುವೆ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆ ಇಲ್ಲ ಎಂದು ಎಲಾನ್ ಮಸ್ಕ್ ಹೇಳಿಕೊಂಡಿದ್ದಾರೆ.

ಭಾರತದಲ್ಲಿ 200ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾ ಮಾಡಿದ ಟ್ವಿಟ್ಟರ್!ಭಾರತದಲ್ಲಿ 200ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾ ಮಾಡಿದ ಟ್ವಿಟ್ಟರ್!

"ಟ್ವಿಟ್ಟರ್ ಪ್ರಸ್ತುತ ದುರದೃಷ್ಟವಶಾರ್ ದಿನಕ್ಕೆ 4 ಮಿಲಿಯನ್ ಡಾಲರ್‌ನಷ್ಟು ನಷ್ಟವನ್ನು ಅನುಭವಿಸುತ್ತಿದೆ. ಹೀಗಿರುವಾಗ ನಮಗೆ ಬೇರೆ ಯಾವುದೇ ಆಯ್ಕೆಯಿಲ್ಲ. ವಜಾ ಮಾಡಿದವರಿಗೆ 3 ತಿಂಗಳ ವೇತನವನ್ನು ನೀಡಲಾಗಿದೆ. ಕಾನೂನುಬದ್ಧವಾಗಿ ನಾವು ಎಷ್ಟು ನೀಡಬೇಕೋ ಅದಕ್ಕಿಂತ ಶೇಕಡ 50ರಷ್ಟು ಅಧಿಕ ನೀಡಲಾಗಿದೆ," ಎಂದು ವಿವರಿಸಿದ್ದಾರೆ.

ಸಂಸ್ಥೆಗೆ ಆಗಿರುವ ನಷ್ಟದ ವಿವರ

ಟ್ವಿಟ್ಟರ್ ಸಂಸ್ಥೆಯು ಜೂನ್ 30, 2022 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಸುಮಾರು 270 ಮಿಲಿಯನ್ ಯುಎಸ್ ಡಾಲರ್ ನಷ್ಟವನ್ನು ಕಂಡಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಟ್ವಿಟ್ಟರ್ ಸುಮಾರು 66 ಮಿಲಿಯನ್ ಯುಎಸ್ ಡಾಲರ್ ನಿವ್ವಳ ಲಾಭವನ್ನು ಘೋಷಣೆ ಮಾಡಿತ್ತು. ಆದರೆ ಈ ವರ್ಷ ನಷ್ಟವನ್ನು ಕಂಡಿದೆ. 2022 ರ ಜೂನ್ ತ್ರೈಮಾಸಿಕದಲ್ಲಿ ಟ್ವಿಟರ್‌ನ ಆದಾಯವು ಭಾರೀ ಕುಸಿದಿದೆ. ಒಂದು ವರ್ಷದ ಹಿಂದೆ ಜೂನ್‌ನಿಂದ ಅಂತ್ಯವಾಗುವ ತ್ರೈಮಾಸಿಕದಲ್ಲಿ ಟ್ವಿಟ್ಟರ್‌ನ ಆದಾಯವು 1,190 ಮಿಲಿಯನ್‌ ಯುಎಸ್ ಡಾಲರ್ ಆಗಿತ್ತು. ಆದರೆ ಆದಾಯವು ಈ ವರ್ಷದಲ್ಲಿ 1,176 ಮಿಲಿಯನ್‌ ಡಾಲರ್‌ಗೆ ಕುಸಿದಿದೆ. ಈಗ ಕಂಪನಿಯ ಜಾಗತಿಕವಾಗಿ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ.

 ಟ್ವಿಟ್ಟರ್‌ ಉದ್ಯೋಗಿಗಳ ವಜಾ ಸಮರ್ಥಿಸಿದ ಎಲಾನ್ ಮಸ್ಕ್, ಹೇಳಿದ್ದೇನು?

ಕೆಲವು ಉದ್ಯೋಗಿಗಳು ಶುಕ್ರವಾರದಿಂದಲೇ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಟ್ವಿಟ್ಟರ್ ಭಾರತದಲ್ಲಿ ತನ್ನ 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿದೆ. ಹೆಚ್ಚಾಗಿ ಇಂಜಿನಿಯರ್‌ಗಳು, ಮಾರಾಟ ಅಥವಾ ಮಾರ್ಕೆಟಿಂಗ್ ತಂಡದಲ್ಲಿದ್ದವರು, ಕಮ್ಯೂನಿಕೇಷನ್ ನಿರ್ವಹಣೆ ತಂಡದಲ್ಲಿದ್ದವರನ್ನು ವಜಾ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಟ್ವಿಟ್ಟರ್ ವರ್ಕ್ ಫೋರ್ಸ್ ಅರ್ಧದಷ್ಟು ಕಡಿತ ಮಾಡ್ತಾರಾ ಮಸ್ಕ್?ಟ್ವಿಟ್ಟರ್ ವರ್ಕ್ ಫೋರ್ಸ್ ಅರ್ಧದಷ್ಟು ಕಡಿತ ಮಾಡ್ತಾರಾ ಮಸ್ಕ್?

ಇನ್ನು ಎಲಾನ್ ಮಸ್ಕ್ ಸಂಸ್ಥೆಯ ಆದಾಯದಲ್ಲಿ ಗಮನಾರ್ಹ ಕುಸಿತಕ್ಕೆ ಸಾಮಾಜಿಕ ಕಾರ್ಯಕರ್ತರನ್ನು ದೂಷಿಸಿದ್ದಾರೆ. "ಟ್ವಿಟ್ಟರ್‌ನ ಆದಾಯದಲ್ಲಿ ಭಾರೀ ಕುಸಿತ ಉಂಟಾಗಿದೆ. ಜಾಹೀರಾತುದಾರರ ಮೇಲೆ ಸಾಮಾಜಿಕ ಕಾರ್ಯಕರ್ತರ ಗುಂಪು ಒತ್ತಡ ಹೇರುತ್ತಿರುವ ಕಾರಣದಿಂದಾಗಿ ಸಂಸ್ಥೆಯ ಆದಾಯ ಕುಸಿಯುತ್ತಿದೆ. ನಾವು ಸಾಮಾಜಿಕ ಕಾರ್ಯಕರ್ತರನ್ನು ಸಮಾಧಾನಪಡಿಸುವ ಎಲ್ಲ ಕಾರ್ಯವನ್ನು ಮಾಡಿದ್ದೇವೆ. ಆದರೆ ಜಾಹೀರಾತುದಾರರ ಮೇಲಿನ ಒತ್ತಡವು ಸಂಸ್ಥೆಯ ಆದಾಯದ ಮೇಲೆ ಪ್ರಭಾವ ಉಂಟು ಮಾಡಿದೆ," ಎಂದು ಎಲಾನ್ ಮಸ್ಕ್ ಹೇಳಿಕೊಂಡಿದ್ದಾರೆ.

English summary

Elon Musk Justifies Massive Layoffs At Twitter, Says No Choice

Amid massive layoffs at Twitter across the world, including in India, Elon Musk Justifies it and Says No Choice.
Story first published: Saturday, November 5, 2022, 18:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X