For Quick Alerts
ALLOW NOTIFICATIONS  
For Daily Alerts

ಎಲೋನ್ ಮಸ್ಕ್‌ ಒಂದೇ ದಿನದಲ್ಲಿ ಕಳೆದುಕೊಂಡಿದ್ದು 1 ಲಕ್ಷ ಕೋಟಿ ರೂಪಾಯಿ

|

ಬಿಟ್‌ಕಾಯಿನ್ ಕುರಿತಾಗಿ ಟ್ವೀಟ್ ಮಾಡಿದ ಬಳಿಕ ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್‌ರ ಕಂಪನಿಯ ಷೇರುಗಳು ಸೋಮವಾರ ಶೇ. 8.6 ರಷ್ಟು ಕುಸಿದಿದ್ದು, ಟೆಸ್ಲಾ ನಿವ್ವಳ ಮೌಲ್ಯವು 15.2 ಬಿಲಿಯನ್‌ನಷ್ಟು ಕುಸಿದಿದೆ. ಭಾರತೀಯ ರೂಪಾಯಿಗಳಲ್ಲಿ ಸುಮಾರು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟವುಂಟಾಗಿದ್ದು, ಮಸ್ಕ್‌ರ ವಿಶ್ವದ ಶ್ರೀಮಂತ ವ್ಯಕ್ತಿ ಪಟ್ಟ ಕೈ ಜಾರುತ್ತಿದೆ.

ಟೆಸ್ಲಾ ಕಂಪನಿಯ ಷೇರುಗಳ ಕುಸಿತಕ್ಕೆ ಪ್ರಮುಖ ಕಾರಣ ಎಲೋನ್ ಮಸ್ಕ್ ಒಂದೇ ಒಂದು ಟ್ವೀಟ್ ಆಗಿದೆ. ಬಿಟ್‌ಕಾಯಿನ್ ಮತ್ತು ಸಣ್ಣ ಪ್ರತಿಸ್ಪರ್ಧಿ ಈಥರ್‌ನ ಬೆಲೆಗಳು ಹೆಚ್ಚು ಎಂದು ತೋರುತ್ತದೆ ಎಂದು ಟ್ವೀಟ್ ಮಾಡಿದ ಬಳಿಕ ಟೆಸ್ಲಾ ಕಂಪನಿಯ ಷೇರುಗಳು ಕುಸಿತಕ್ಕೆ ಕಾರಣವಾಯಿತು.

ಎಲೋನ್ ಮಸ್ಕ್‌ ಒಂದೇ ದಿನದಲ್ಲಿ ಕಳೆದುಕೊಂಡಿದ್ದು 1 ಲಕ್ಷ ಕೋಟಿ ರೂ.

ಇತ್ತೀಚೆಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಜನವರಿ 2021 ರಲ್ಲಿ 1.5 ಬಿಲಿಯನ್ ಡಾಲರ್ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಖರೀದಿಸಿತ್ತು. ಈ ಘೋಷಣೆಯ ಬಳಿಕ ಬಿಟ್‌ಕಾಯಿನ್ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಇದಾಗಿ ಎರಡು ವಾರಗಳ ನಂತರ ಟೆಸ್ಲಾ ಕಂಪನಿಗಳ ಷೇರು ಕುಸಿತಕ್ಕೆ ಸಾಕ್ಷಿಯಾಗಿದೆ.

ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ವಿಶ್ವದ 500 ಶ್ರೀಮಂತ ವ್ಯಕ್ತಿಗಳಲ್ಲಿ ಎಲೋನ್ ಮಸ್ಕ್ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಅಮೆಜಾನ್ ಸಂಸ್ಥಾಪಕ ಜೆಫ್‌ ಬೇಜೋಸ್ ಅವರ ಫ್ಯೂಚರ್ಸ್ 3.7 ಬಿಲಿಯನ್ ಇಳಿಕೆಗೊಂಡು 186.3 ಬಿಲಿಯನ್‌ ಡಾಲರ್‌ಗೆ ತಲುಪಿದೆ.

English summary

Elon Musk Loses $15 Billion In A Day After Bitcoin Warning

Elon Musk is no longer the world’s richest person after Tesla Inc. shares slid 8.6 per cent on Monday, wiping $15.2 billion from his net worth.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X