For Quick Alerts
ALLOW NOTIFICATIONS  
For Daily Alerts

1 ವಾರದಲ್ಲಿ 27 ಬಿಲಿಯನ್ ಡಾಲರ್ ಕಳೆದುಕೊಂಡ ಎಲೋನ್ ಮಸ್ಕ್‌

|

ವಿಶ್ವದ ನಂಬರ್ ಶ್ರೀಮಂತ ಎಂದು ಗೆದ್ದು ಬೀಗಿ ಕೆಳಗೆ ಜಾರಿದ ಟೆಸ್ಲಾ ಸಂಸ್ಥಾಪಕ ಎಲೋನ್‌ ಮಸ್ಕ್‌ ಒಂದು ವಾರದಲ್ಲಿ ಬರೋಬ್ಬರಿ 27 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ.

2020 ರಲ್ಲಿ 150 ಬಿಲಿಯನ್ ಡಾಲರ್ ಗಳಿಸಿದ ಟೆಸ್ಲಾ ಸಿಇಒ ಎಲೋನ್ ಮಸ್ಕ್, ನಿವ್ವಳ ಮೌಲ್ಯದಲ್ಲಿ ತೀವ್ರ ಕುಸಿತ ಕಂಡಿದ್ದಾರೆ. ಟೆಸ್ಲಾ ಷೇರುಗಳು ಭಾರೀ ಕುಸಿದ ಪರಿಣಾಮ ಸೋಮವಾರದಿಂದ ಅವರು ಸುಮಾರು 27 ಬಿಲಿಯನ್ ಡಾಲರ್ ನಷ್ಟವನ್ನು ಕಂಡಿದ್ದಾರೆ.

1 ವಾರದಲ್ಲಿ 27 ಬಿಲಿಯನ್ ಡಾಲರ್ ಕಳೆದುಕೊಂಡ ಎಲೋನ್ ಮಸ್ಕ್‌

ಬ್ಲೂಮ್‌ಬರ್ಗ್‌ ಬಿಲಿಯನೇರ್ ಸೂಚ್ಯಂಕದ ಪ್ರಕಾರ 156.9 ಶತಕೋಟಿ ಡಾಲರ್ ಒಡೆಯ ಎಲೋನ್ ಮಸ್ಕ್‌ ಇನ್ನೂ ಜಗತ್ತಿನ ಎರಡನೇ ಶ್ರೀಮಂತರಾಗಿದ್ದು, ಇತ್ತೀಚೆಗೆ ಷೇರುಗಳ ಕುಸಿತದ ನಡುವೆಯು ಅಮೆಜಾನ್ ಸಂಸ್ಥಾಪಕ ಜೆಫ್ ಬೇಜೋಸ್‌ಗಿಂತ 20 ಬಿಲಿಯನ್ ಡಾಲರ್‌ ಹಿಂದಿದ್ದಾರೆ.

ಶುಕ್ರವಾರ ಟೆಸ್ಲಾ ಷೇರು ಶೇ. 3.8 ರಷ್ಟು ಕುಸಿದು 597.95 ಡಾಲರ್‌ಗೆ ತಲುಪಿದ್ದು, ಕಳೆದ ಎರಡು ತಿಂಗಳಲ್ಲಿ ಇದು ಅತ್ಯಂತ ಕಡಿಮೆ ಮಟ್ಟವಾಗಿದೆ. ಒಂದು ವಾರದಲ್ಲಿ, ಪ್ರಮುಖ ಎಲೆಕ್ಟ್ರಾನಿಕ ವಾಹನಗಳ ಉತ್ಪಾದಕ ಅದರ ಮೌಲ್ಯದಲ್ಲಿ ಶೇಕಡಾ 11 ರಷ್ಟು ಕುಸಿತ ಕಂಡಿದೆ. ಟೆಸ್ಲಾ ಕಂಪನಿಯ ಷೇರು ಕುಸಿದ ನಂತರ ಫೆಬ್ರವರಿ 23 ರಂದು ಮಸ್ಕ್ ಮತ್ತೆ ಎರಡನೇ ಸ್ಥಾನಕ್ಕೆ ಪಡೆದಿದ್ದರು.

English summary

Elon Musk's Net Worth Declines $27bn In One Week

Tesla chief executive Elon Musk, who gained a record $150 billion in the year 2020, has seen a sharp decline in net worth and he lost about $27 billion since Monday
Story first published: Saturday, March 6, 2021, 16:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X