For Quick Alerts
ALLOW NOTIFICATIONS  
For Daily Alerts

ಸದ್ಯದಲ್ಲೇ ಹೆಚ್ಚಾಗಲಿದೆ ನಿಮ್ಮ ತಿಂಗಳ ಸಂಬಳ: EPFನಲ್ಲಿ ಬದಲಾವಣೆ

|

ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಪ್ರತಿ ತಿಂಗಳು ಸಂಬಳ ಪಡೆಯುತ್ತಿರುವ ಎಲ್ಲಾ ಉದ್ಯೋಗಿಗಳ ತಿಂಗಳ ಸಂಬಳ ಏರಿಕೆಯಾಗಲಿದೆ. ಇದಕ್ಕೆ ಕಾರಣ ಇಪಿಎಫ್‌ನಲ್ಲಿ ಮುಂದಿನ ದಿನಗಳಲ್ಲಿ ಆಗಲಿರುವ ಬದಲಾವಣೆ.

ಮೊಬೈಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?ಮೊಬೈಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಉದ್ಯೋಗಿಗಳು ಭವಿಷ್ಯ ನಿಧಿ(ಇಪಿಎಫ್)ಗೆ ನೀಡುತ್ತಿರುವ 12 ಪರ್ಸೆಂಟ್ ಕೊಡುಗೆಯನ್ನು ಕಡಿಮೆಗೊಳಿಸುವ ಆಯ್ಕೆಯ ಅವಕಾಶವನ್ನು ನೀಡಲಿದ್ದು, ಇದರಿಂದ ಉದ್ಯೋಗಿಗಳು ಪ್ರತಿ ತಿಂಗಳು ಹೆಚ್ಚಿನ ಸಂಬಳ ಪಡೆಯಲಿದ್ದಾರೆ. ಸದ್ಯ ಈಗಿರುವ 12 ಪರ್ಸೆಂಟ್ ದೇಣಿಗೆ ಕಡಿಮೆ ಮಾಡಿದರೆ ತಿಂಗಳ ಸಂಬಳವು ಹೆಚ್ಚುತ್ತದೆ. ಆ ಮೂಲಕ ದೇಶದಲ್ಲಿನ ಮಂದಗತಿಯ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳಲಿ ಎಂಬ ಉದ್ದೇಶವೂ ಇದರ ಹಿಂದಿದೆ.

ಸದ್ಯದಲ್ಲೇ ಹೆಚ್ಚಾಗಲಿದೆ ನಿಮ್ಮ ತಿಂಗಳ ಸಂಬಳ: EPFನಲ್ಲಿ ಬದಲಾವಣೆ

ಇಪಿಎಫ್‌ನಲ್ಲಿ ಈ ಬದಲಾವಣೆ ತರಲು 5 ವರ್ಷಗಳಿಂದಲೇ ಯೋಜನೆ ಸಿದ್ದಗೊಳಿಸಲಾಗಿತ್ತು. ಆದ್ರೀಗ ಹೊಸ ಬದಲಾವಣೆ ತರಲು ಮುಂದಾಗಿದ್ದು, ಈ ವಾರ ಸಂಸತ್ತಿನಲ್ಲಿ ಮಂಡಿಸಲಿರುವ ಸಾಮಾಜಿಕ ಭದ್ರತಾ ಸಂಹಿತೆ ಮಸೂದೆ 2019 ವಿಧೇಯಕ ಮಂಡನೆಯಾಗುವ ಸಾಧ್ಯತೆ ಇದೆ. ಈ ವಿಧೇಯಕ ಅನುಮೋದನೆಗೊಂಡರೆ ಉದ್ಯೋಗಿಗಳು ಪ್ರತಿ ತಿಂಗಳು ಹೆಚ್ಚಿನ ಸಂಬಳ ಪಡೆಯಲಿದ್ದಾರೆ.

ಉದ್ಯೋಗಿಗಳ ಇಪಿಎಫ್ ಕೊಡುಗೆಯು ಉದ್ಯೋಗ ವಲಯಕ್ಕೆ ಅನುಗುಣವಾಗಿ 12 ಪರ್ಸೆಂಟ್‌ನಿಂದ 9 ಪರ್ಸೆಂಟ್ ಒಳಗೆ ಇಳಿಕೆಯಾಗುವ ಸಾಧ್ಯತೆ ಇದೆ. ಆದರೆ ಉದ್ಯೋಗದಾತರು(Employer) ಕೊಡುಗೆಯು ಈಗಿರುವ 12 ಪರ್ಸೆಂಟ್‌ನಲ್ಲಿ ಯಾವುದೇ ಬದಲಾವಣೆಯಿಲ್ಲ.

ಈಗಿನ ಇಪಿಎಫ್ ನಿಯಮಗಳೇನು?

ಈಗಿನ ಇಪಿಎಫ್ ನಿಯಮಗಳೇನು?

ನಿಮ್ಮ ಮೂಲ ವೇತನ (ಬೇಸಿಕ್ ಸ್ಯಾಲರಿ) ಮೇಲೆ 12 ಪರ್ಸೆಂಟ್ ಭಾಗವನ್ನು ಈ ಇಪಿಎಫ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಹಾಗೆಯೇ ಉದ್ಯೋಗದಾತರು ಕೂಡ ಅಷ್ಟೇ ಪ್ರಮಾಣದ ಹಣವನ್ನು ಅಥವಾ 12 ಪರ್ಸೆಂಟ್ ಭಾಗವನ್ನು ಇಪಿಎಫ್‌ನಲ್ಲಿ ಹೂಡಿಕೆ ಮಾಡುತ್ತಾರೆ.

UPA ಸರ್ಕಾರ ಇದ್ದಾಗ ಇದ್ದಂತಹ ಪ್ರಸ್ತಾವವೇನು?

UPA ಸರ್ಕಾರ ಇದ್ದಾಗ ಇದ್ದಂತಹ ಪ್ರಸ್ತಾವವೇನು?

ಮೂಲವೇತನವೂ ಸೇರಿದಂತೆ ಒಟ್ಟಾರೆ ಸಂಬಳದ ಮೇಲೆ 12 ಪರ್ಸೆಂಟ್ ಹಾಗೂ ಉದ್ಯೋಗದಾತರು ಅಷ್ಟೇ ಮೊತ್ತದ ಹಣವನ್ನು ಇಪಿಎಫ್‌ನಲ್ಲಿ ಹೂಡಿಕೆ ಮಾಡಬೇಕಾಗಿತ್ತು. ಇದರಿಂದ ಈಗಿರುವ ಕೊಡುಗೆಗಿಂತ ಹೆಚ್ಚಿನ ಮಟ್ಟದಲ್ಲಿ ಹಣವನ್ನು ಇಪಿಎಫ್‌ಗೆ ಹೂಡಿಕೆ ಮಾಡಲಾಗುತ್ತಿತ್ತು. ಹಾಗೆಯೇ ಕೈಗೆ ಸಿಗುತ್ತಿದ್ದ ಸಂಬಳ ಪ್ರಮಾಣದಲ್ಲಿ ಕಡಿಮೆಯಿತ್ತು.

ಪಿಎಫ್ ಉಳಿತಾಯ ಯಾಕೆ ಉತ್ತಮ?

ಪಿಎಫ್ ಉಳಿತಾಯ ಯಾಕೆ ಉತ್ತಮ?

ಪಿಎಫ್ ಕೊಡುಗೆ ಮೊತ್ತವು ಹಾಗೂ ಅದರ ಮೇಲೆ ಸಿಗುವ ಬಡ್ಡಿಗೆ ಯಾವುದೇ ರೀತಿಯ ತೆರಿಗೆ ಇಲ್ಲ. ಪಿಎಫ್ ಮೇಲೆ ಅತಿ ಹೆಚ್ಚು ಹೂಡಿಕೆಯು ಅತ್ಯಂತ ಉತ್ತಮವಾಗಿದೆ. ಏಕೆಂದರೆ ನಿವೃತ್ತರಾದ ಕಾಲಕ್ಕೆ ಉತ್ತಮ ಮೊತ್ತ ಹಿಂದುರಿಗಿ ಬರುತ್ತದೆ. ಇದರಿಂದ ಪಿಎಫ್ ಆಯ್ಕೆ ಉತ್ತಮ

ನಮ್ಮ ಸಲಹೆ ಏನು?

ನಮ್ಮ ಸಲಹೆ ಏನು?

ಈಗಿನ ಸರ್ಕಾರದ ಸಲಹೆ ಪ್ರಕಾರ ಸದ್ಯದ ಆರ್ಥಿಕ ಸನ್ನಿವೇಶದಲ್ಲಿ ನಿಮಗೆ ಕೈಗೆ ಸಿಗುವ ಸಂಬಳ ಹೆಚ್ಚಾಗಬಹುದು. ಆದರೆ ಅದು ನಿಮ್ಮದೇ ಹಣ. ಆ ಹಣವನ್ನು ನೀವು ಉಳಿತಾಯ ಮಾಡದೇ ಹೋದರೆ ನಿವೃತ್ತರಾದ ನಂತರ ಜೀವನ ಹೇಗೆ ಎಂಬುದನ್ನ ಯೋಚಿಸಿ. ನಮ್ಮ ಸಲಹೆ ಪಿಎಫ್ ದರವನ್ನು ಕಡಿಮೆ ಮಾಡಿಸದಿರುವುದು ಅತ್ಯುತ್ತಮ.

ಪಿಎಫ್ ನಲ್ಲಿ ಹೆಚ್ಚು ಹೂಡಿಕೆ ಮಾಡಬಹುದು!

ಪಿಎಫ್ ನಲ್ಲಿ ಹೆಚ್ಚು ಹೂಡಿಕೆ ಮಾಡಬಹುದು!

ನೀವು ಮೂಲ ವೇತನದಲ್ಲಿ ಶೇ. 12ಕ್ಕಿಂತ ಹೆಚ್ಚಿನ ಮೊತ್ತವನ್ನು ಇಪಿಎಫ್ ನಲ್ಲಿ ಹೂಡಿಕೆ ಮಾಡಬಹುದು. ಆದರೆ ಇದನ್ನು ವಿಪಿಎಫ್(voluntary provident fund) ಎಂದು ಕರೆಯಲಾಗುತ್ತದೆ. ನೀವು ಹೂಡಿಕೆ ಮಾಡುವ ಹೆಚ್ಚಿನ ಮೊತ್ತದ ಮೇಲೆ ಬಡ್ಡಿದರ ಪಡೆಯಬಹುದು. ಆದರೆ, ಉದ್ಯೋಗದಾತರು ಮಾತ್ರ ನಿಮ್ಮ ಮೂಲ ಸಂಬಳದಲ್ಲಿ ಕೇವಲ ಶೇ. 12ರಷ್ಟು ಮಾತ್ರ ಹೂಡಿಕೆ ಮಾಡುತ್ತಾರೆ. ಅದಕ್ಕಿಂತ ಹೆಚ್ಚು ಮಾಡುವುದಿಲ್ಲ.

English summary

EPFO Monthly Contribution To Be Cut Will Increase Salary

EPFO Change of rules will increase monthly salary of employees. Parliment this week, may allow employees to pay less than current 12 percent contribution.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X