For Quick Alerts
ALLOW NOTIFICATIONS  
For Daily Alerts

ಯು ಪೇ ಅಸ್‍ನಿಂದ 4.1 ಮಿಲಿಯನ್ ಯುಎಸ್ ಡಾಲರ್ ಹೂಡಿಕೆ ಸಂಗ್ರಹ

|

ದೆಹಲಿ ಮೂಲದ ಬಿ2ಬಿ ಎಜುಟೆಕ್ ಕಂಪನಿಯಾಗಿರುವ ಯು ಪೇ ಅಸ್ , ಸೀರೀಸ್ ಬಿ ಫಂಡಿಂಗ್ ಸುತ್ತಿನಲ್ಲಿ 4.1 ಮಿಲಿಯನ್ ಅಮೆರಿಕಾ ಡಾಲರ್ ಹೂಡಿಕೆಯನ್ನು ಸಂಗ್ರಹಿಸಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಕುವೈತ್‌ನ ಯುನೈಟೆಡ್ ಎಜುಕೇಶನ್ ಕಂಪನಿ (ಯುಇಸಿ) ಈ ಸುತ್ತಿನ ನೇತೃತ್ವ ವಹಿಸಿದೆ.

13,000 ಪರಿಸರ ವ್ಯವಸ್ಥೆಯೊಂದಿಗೆ ಅತಿ ದೊಡ್ಡ ಪ್ಲಾಟ್‌ಫಾರ್ಮ್ ಆಗಿರುವ ಯು ಪೇ ಅಸ್, 5000 ಶಾಲೆಗಳ 4 ಮಿಲಿಯನ್ ವಿದ್ಯಾರ್ಥಿಗಳನ್ನು ತಲುಪುವಲ್ಲಿ ಪಾಲುದಾರಿಕೆಯನ್ನು ಹೊಂದಿದೆ. 2019-20 ರಲ್ಲಿ 72 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ. ಕಂಪನಿ ಆರಂಭವಾದ ಕೇವಲ 21 ತಿಂಗಳಲ್ಲಿ ಈ ಆದಾಯ ಗಳಿಸಿದೆ. ಈ ಮೂಲಕ ಕಂಪನಿಯು ಕಾರ್ಯಾಚರಣೆ ನಡೆಸಿದ ಅತ್ಯಲ್ಪ ಅವಧಿಯಲ್ಲಿ ಆದಾಯ ಗಳಿಸಿದ ಏಕೈಕ ಎಜು-ಟೆಕ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕುವೈತ್‌ನಿಂದ ಹೂಡಿಕೆ ಪಡೆದುಕೊಂಡ ಯು ಪೇ ಅಸ್‌

ಯು ಪೇ ಅಸ್ ಭಾರತದಾದ್ಯಂತ 80 ಕ್ಕೂ ಹೆಚ್ಚು ನಗರಗಳಲ್ಲಿ 175 ಕ್ಕೂ ಅಧಿಕ ಸಿಬ್ಬಂದಿಯೊಂದಿಗೆ ಶಕ್ತಿಯುತವಾದ ಸಂಸ್ಥೆಯಾಗಿ ಹೊರಹೊಮ್ಮಿದೆ.

ವಿದ್ಯಾರ್ಥಿಗಳಿಗೆ 21 ನೇ ಶತಮಾನದ ಕೌಶಲ್ಯಗಳನ್ನು ಕಲಿಸಿಕೊಡುವ ಪ್ರಮುಖ ಪಾಲುದಾರ ಸಂಸ್ಥೆಯಾಗುವ ಉದ್ದೇಶದಿಂದ ಯು ಪೇ ಅಸ್ ಕಲಿಕೆಯನ್ನು 2017 ರ ಜೂನ್‌ನಲ್ಲಿ ಸರ್ವೇಶ್ ಶ್ರೀವಾಸ್ತವ, ವೇದ ಪ್ರಕಾಶ್ ಖತ್ರಿ ಮತ್ತು ಅಮಿತ್ ಕಪೂರ್ ಅವರು ಆರಂಭಿಸಿದರು. ಯು ಪೇ ಅಸ್‍ನ ವೈವಿಧ್ಯಮಯ ಪರಿಹಾರಗಳು ಕೋರ್ ಪಠ್ಯಕ್ರಮದ ವಿಷಯಗಳಿಂದ ಅನೇಕ ಶಿಕ್ಷಣಶಾಸ್ತ್ರದ ವ್ಯಾಪ್ತಿಯಲ್ಲಿವೆ. ಇಟಿಎಸ್, ಸನಾಕೊ, ವಲ್ರ್ಡ್ ಬುಕ್, ಫಿಕ್ಷನ್ ಎಕ್ಸ್‍ಪ್ರೆಸ್ ಮುಂತಾದ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ವಿಶೇಷ ಸಹಭಾಗಿತ್ವದಿಂದ ನಡೆಸುವ ಪ್ಲಾಟ್‍ಪಾರ್ಮ್‍ನಲ್ಲಿಯೇ ಪರಿಹಾರಗಳಿಗೆ ಪೂರಕವಾದ ಕಲಿಕಾ ವಿಧಾನ ಇದಾಗಿದೆ.

English summary

Eupheus Learning raises USD 4.1 Million in Series B Round

Eupheus Learning - a Delhi based leadingB2B EdTech company has raised USD 4.1 Million in Series B funding round.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X