For Quick Alerts
ALLOW NOTIFICATIONS  
For Daily Alerts

ಕೊರೊನಾ ಆರ್ಥಿಕ ಬಿಕ್ಕಟ್ಟು: ತನಿಖಾ ತಂಡ ರಚಿಸಿದ ಯುರೋಪಿಯನ್ ಯೂನಿಯನ್

|

ಲಂಡನ್, ಜೂನ್ 5: ಕೋವಿಡ್ -19 ಸಾಂಕ್ರಾಮಿಕ ರೋಗ ಮುಂದುವರೆದ ಯುರೋಪ್ ಖಂಡವನ್ನು ಅಕ್ಷರಶಃ ಅಲುಗಾಡಿಸಿದೆ. ಈಗ ಯುರೋಪ್‌ನ ಅನೇಕ ದೇಶಗಳು, ತಮ್ಮಲ್ಲಿ ಆಂತಕರಿಕವಾಗಿ ಹಾಗೂ ಬಾಹ್ಯದಲ್ಲಿ ಆರ್ಥಿಕ ಅಪರಾಧಗಳು ಬುಗಿಲೇಳುವ ಆತಂಕವನ್ನು ಎದುರಿಸುತ್ತಿವೆ

 

ಈ ಸಂಕಷ್ಟವನ್ನು ನಿಭಾಯಿಸಲು ಮತ್ತು ಹಣಕಾಸಿನ ಸಬ್ಸಿಡಿಗಳನ್ನು ವಂಚಿಸುವುದನ್ನು ತಡೆಯಲು ಯುರೋಪಿಯನ್ ಒಕ್ಕೂಟವು (ಯುರೋಪಿಯನ್ ಯುನಿಯನ್) ತನಿಖಾಧಿಕಾರಿಗಳ ಘಟಕವನ್ನು ಸ್ಥಾಪಿಸಿದೆ.

 

ದುಬಾರಿಯಾಗಲಿದೆ ಯುರೋಪ್ ಪ್ರವಾಸ; ವೀಸಾ, ತೆರಿಗೆ ಎಫೆಕ್ಟ್ ದುಬಾರಿಯಾಗಲಿದೆ ಯುರೋಪ್ ಪ್ರವಾಸ; ವೀಸಾ, ತೆರಿಗೆ ಎಫೆಕ್ಟ್

ಯುರೋಪಿಯನ್ ಹಣಕಾಸು ಮತ್ತು ಆರ್ಥಿಕ ಅಪರಾಧ ಕೇಂದ್ರವನ್ನು ಪ್ಯಾರಿಸ್‌ನ ಯುರೋಪಿಯನ್ ಯೂನಿಯನ್‌ನ ಕಾನೂನು ಜಾರಿ ಸಂಸ್ಥೆಯಲ್ಲಿ ಸ್ಥಾಪಿಸಲಾಗುವುದು ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು 65 ನುರಿತ ತಜ್ಞರ ತಂಡವನ್ನು ರಚಿಸಲಾಗುವುದು ಎಂದು ಇಯು ತಿಳಿಸಿದೆ.

"ಕೋವಿಡ್ -19 ಪರಿಣಾಮವು ನಮ್ಮ ಆರ್ಥಿಕತೆಯನ್ನು ದುರ್ಬಲಗೊಳಿಸಿದೆ ಮತ್ತು ಆರ್ಥಿಕ ಅಪರಾಧಗಳು ಸಂಭವಿಸುವಂತೆ ಮಾಡಿದೆ" ಎಂದು ಯುರೋಪಾಲ್ ಮುಖ್ಯಸ್ಥರಾದ ಕ್ಯಾಥರೀನ್ ಡಿ ಬೊಲ್ಲೆ ಹೇಳಿದ್ದಾರೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕೊರೊನಾ ಆರ್ಥಿಕ ಬಿಕ್ಕಟ್ಟು: ತನಿಖಾ ತಂಡ ರಚಿಸಿದ ಯುರೋಪಿಯನ್ ಯೂನಿಯನ್

ತನಿಖಾಧಿಕಾರಿಗಳ ಘಟಕವು ಮನಿ ಲಾಂಡರಿಂಗ್, ಹಣಕಾಸಿನ ವಂಚನೆ ಮತ್ತು ಭ್ರಷ್ಟಾಚಾರದ ಬಗ್ಗೆ ಕೇಂದ್ರೀಕರಿಸುತ್ತದೆ. ನಿರ್ಮಾಣ, ಹಾಸ್ಪಿಟಾಲಿಟಿ ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹಣಕಾಸಿನ ಅಪರಾಧಗಳು ಹೆಚ್ಚಾಗುವ ಸಂದರ್ಭ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

English summary

European Union Set Financial Crime Unit Ahead Of Covid Pandemic

European Union Set Financial Crime Unit Ahead Of Covid Pandemic.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X