For Quick Alerts
ALLOW NOTIFICATIONS  
For Daily Alerts

ಫೇಸ್‌ಬುಕ್‌ ಹೆಸರು ಬದಲಾಯಿಸಲು ಮುಂದಾದರೇ ಜುಕರ್‌ಬರ್ಗ್?

|

ವಾಷಿಂಗ್ಟನ್‌, ಅಕ್ಟೋಬರ್ 20: ಜಗತ್ತಿನ ಅತಿದೊಡ್ಡ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನ ಹೆಸರು ಬದಲಾಗಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

 

ಅಕ್ಟೋಬರ್‌ 28 ರಂದು ಫೇಸ್‌ಬುಕ್‌ನ ವಾರ್ಷಿಕ ಸಭೆ ವರ್ಚುವಲ್‌ ಮೋಡ್‌ ನಲ್ಲಿ ನಡೆಯಲಿದ್ದು ಹೆಸರು ಬದಲಾವಣೆ ಬಗ್ಗೆ ಕಂಪನಿ ಸಿಐಒ(CEO) ಮಾರ್ಕ್ ಜುಕರ್‌ಬರ್ಗ್‌ ಮಾತನಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಈ ಬಗ್ಗೆ ಈವರೆಗೂ ಫೇಸ್‌ಬುಕ್ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಅಲ್ಲದೇ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕೂಡ ನಿರಾಕರಿಸಿದೆ.

ಫೇಸ್‌ಬುಕ್ ವ್ಯವಹಾರದ ಮೇಲೆ ಅಮೆರಿಕ ಸರ್ಕಾರದ ಪರಿಶೀಲನೆಯು ಹೆಚ್ಚುತ್ತಿರುವ ಸಮಯದಲ್ಲೇ ಸಂಸ್ಥೆ ಈ ಸುದ್ದಿಗೆ ಗ್ರಾಸವಾಗಿದೆ. ಫೇಸ್‌ಬುಕ್‌ ಕಾರ್ಯನಿರ್ವಹಣೆ ಕುರಿತಂತೆ ಅಮೆರಿಕ ಸಂಸತ್ತಿನಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿದೆ.

ಫೇಸ್‌ಬುಕ್‌ ಹೆಸರು ಬದಲಾಯಿಸಲು ಮುಂದಾದರೇ ಜುಕರ್‌ಬರ್ಗ್?

ರೀಬ್ರ್ಯಾಂಡ್ ಮಾಡುವುದರಿಂದ ಫೇಸ್‌ಬುಕ್ ಒಡೆತನದಲ್ಲಿರುವ ಇನ್‌ಸ್ಟಾಗ್ರಾಂ, ವಾಟ್ಸಾಪ್ ಹಾಗೂ ಅಕ್ಯುಲಸ್ ಇತರೆ ಅಪ್ಲಿಕೇಷನ್‌ಗಳಲ್ಲೂ ಬದಲಾವಣೆ ಬರಲಿದೆ ಎಂದು ವರ್ಜ್ ವರದಿ ಮಾಡಿದೆ.

ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಫೇಸ್‌ಬುಕ್ ವದಂತಿ ಅಥವಾ ಊಹಾಪೋಹಗಳಿಗೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದೆ.

ಕಂಪನಿಯನ್ನು ಮರುನಾಮಕರಣ ಮಾಡಿಕೊಳ್ಳುವ ಮೂಲಕ ಫೇಸ್‌ಬುಕ್ ಕಂಪನಿಯೂ ಬೇರೆ ಆ್ಯಪ್‌ಗಳ ರೀತಿ ಮಾತೃ ಸಂಸ್ಥೆಯೊಂದರ ಅಧೀನದಲ್ಲಿ ಕೆಲಸ ಮಾಡಲಿದೆ.

ಈ ಮಾತೃ ಸಂಸ್ಥೆಯ ಅಧೀನದಲ್ಲಿ ಫೇಸ್‌ಬುಕ್, ಇನ್ಸ್ಟಾಗ್ರಾಮ್‌, ವಾಟ್ಸಾಪ್ ಸೇರಿದಂತೆ ಇತರ ಕಂಪನಿಗಳು ಕೆಲಸ ಮಾಡಲಿವೆ. ಅಮೆರಿಕಾದ ಸಿಲಿಕನ್ ವ್ಯಾಲಿಯಲ್ಲಿ ತಮ್ಮ ಸೇವೆಗಳನ್ನು ವಿಸ್ತರಿಸಲು ಕಂಪನಿಗಳು ಈ ರೀತಿ ಹೆಸರು ಬದಲಾಯಿಸುವುದು ಸರ್ವೆ ಸಾಮಾನ್ಯ. ಆದರೆ ಯಾವ ಫೇಸ್‌ಬುಕ್ ಏನೆಂದು ಮರುನಾಮಕರಣವಾಗಲಿದೆ ಎಂದು ಇನ್ನೂ ತಿಳಿದು ಬಂದಿಲ್ಲ.

ಅಲ್ಲದೆ ಈ ಬಗ್ಗೆ ಟ್ವೀಟರ್‌ ಮುಖಾಂತರ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಟ್ವೀಟರ್‌ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ ಫೇಸ್ಬುಕ್‌, ಸರ್ವರ್‌ ಡೌನ್‌ನಿಂದ ಆಗಿರುವ ಸಮಸ್ಯೆ ಪರಿಹಾರಕ್ಕೆ ಕಾರ್ಯ ನಿರ್ವಹಿಸಲಾಗುತ್ತಿದೆ. ಶೀಘ್ರದಲ್ಲೇ ಗ್ರಾಹಕರು ತಮ್ಮ ಸೇವೆಯನ್ನು ಬಳಸಬಹುದು ಎಂದು ಹೇಳಿತ್ತು.

ಫೋಟೋ ಹಂಚಿಕೊಳ್ಳುವ ಇನ್‌ಸ್ಟಾಗ್ರಾಂ ಮತ್ತು ವಾಟ್ಸಪ್‌ಗಳು ಇದೇ ರೀತಿಯ ಸ್ಪಷ್ಟನೆ ನೀಡಿದವು. ಈ ಆ್ಯಪ್‌ಗಳ ಸ್ಥಗಿತದಿಂದ ವಿಶ್ವಾದ್ಯಂತ ಸಾವಿರಾರು ಜನ ಸಮಸ್ಯೆಗೆ ಸಿಲುಕಿದರು ಎಂದು ವೆಬ್‌ಸೈಟ್‌ ಮತ್ತು ಸೇವೆಗಳ ಬಗ್ಗೆ ಮಾಹಿತಿ ಒದಗಿಸುವ ಡೌನ್‌ಡಿಟೆಕ್ಟರ್‌.ಕಾಂ ಹೇಳಿತ್ತು.

 

ಮಾರ್ಕ್‌ ಜುಕರ್‌ಬರ್ಗ್‌ ಜತೆಗೆ ಹಾರ್ವರ್ಡ್ ಕಾಲೇಜಿನ ಇತರ ವಿದ್ಯಾರ್ಥಿಗಳು ಸೇರಿ 2004ರಲ್ಲಿ ʼಫೇಸ್‌ ಮ್ಯಾಶ್‌ʼ ಆರಂಭಿಸಿದ್ದರು. ಇದೇ ಫೇಸ್‌ ಮ್ಯಾಶ್‌ ನಂತರ ʼದ ಫೇಸ್‌ಬುಕ್‌ʼ(The Facebook) ಎಂದು ಮರುನಾಮಕರಣಗೊಂಡು ಕೊನೆಗೆ ಕೇವಲ ಫೇಸ್‌ಬುಕ್‌ ಎಂಬ ಹೆಸರನ್ನು ಉಳಿಸಿಕೊಳ್ಳಲು ಕಂಪನಿ ನಿರ್ಧರಿಸಿತ್ತು.

2.8 ಬಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ ಇಂದು ಜಗತ್ತಿನಾದ್ಯಂತ ಸುಪ್ರಸಿದ್ಧ ಜಾಲತಾಣವಾಗಿ ಬೆಳೆದು ನಿಂತಿದೆ. ಜಾಗತಿಕ ಮಟ್ಟದಲ್ಲಿ ದೈತ್ಯನಾಗಿ ಬೆಳೆದಿರುವ ಫೇಸ್‌ಬುಕ್ ಈವರೆಗೂ ಸಾಕಷ್ಟು ಕಂಪನಿಗಳನ್ನು ಖರೀದಿಸಿದೆ.

2012 ರಲ್ಲಿ $1 ಬಿಲಿಯನ್‌ ಮೊತ್ತಕ್ಕೆ ಇನ್ಸ್ಟಾಗ್ರಾಂ ಖರೀದಿಸಿದ್ದರೆ, 2014 ರಲ್ಲಿ $19 ಬಿಲಿಯನ್‌ ಮೊತ್ತಕ್ಕೆ ಅತ್ಯಂತ ಜನಪ್ರಿಯ ಮೆಸೆಜಿಂಗ್‌ ವಾಟ್ಸಾಪ್ ವಾಟ್ಸಾಪ್‌ ಅನ್ನು ಖರೀದಿಸಿತ್ತು.

ಇತ್ತೀಚೆಗೆ ಫೇಸ್‌ಬುಕ್‌, ವಾಟ್ಸಾ ಪ್‌ ಹಾಗೂ ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌ ಆಗಿ ಭಾರತ ಸೇರಿದಂತೆ ವಿಶ್ವದ ಹಲವೆಡೆ ಈ ಸೇವೆಗಳಲ್ಲಿ ಭಾರೀ ವ್ಯತ್ಯಯ ಕಂಡುಬಂದಿತ್ತು. ಇದರಿಂದಾಗಿ ಫೇಸ್‌ಬುಕ್‌ ಸೇರಿದಂತೆ ಫೇಸ್ಬುಕ್‌ ಒಡೆತನದ ವಾಟ್ಸಾಪ್‌ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರು ಸಂದೇಶ ಕಳಿಸಲು, ಸ್ವೀಕರಿಸಲು ಮತ್ತು ಲಾಗಿನ್‌ ಮಾಡಲಾಗದೆ ಪರದಾಡಿದ್ದರು.

English summary

Facebook Plans To Rebrand Itself With New Name

Social media giant Facebook Inc is planning to rebrand itself with a new name next week, American technology blog the Verge reported on Tuesday, citing a source with direct knowledge of the matter.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X