For Quick Alerts
ALLOW NOTIFICATIONS  
For Daily Alerts

ಭಾರತ ಭವಿಷ್ಯಕ್ಕೆ ಸಜ್ಜಾಗಿದೆ ಎಂದು ಬಹಿರಂಗಪಡಿಸಿದ FedEx Express ಅಧ್ಯಯನ

|

ಭಾರತ, ಅಕ್ಟೋಬರ್ 26, 2021 - FedEx ಕಾರ್ಪೊರೇಷನ್ (ಎನ್‍ಐಎಸ್‍ಇ: ಎಫ್‍ಡಿಎಕ್ಸ್)ನ ಅಂಗಸಂಸ್ಥೆ ಮತ್ತು ವಿಶ್ವದ ಅತಿ ದೊಡ್ಡ ಎಕ್ಸ್‍ಪ್ರೆಸ್ ಸಾರಿಗೆ ಕಂಪನಿಯಾದ FedEx Express, ಇಂದು ತನ್ನ 'ಫ್ಯೂಚರ್ ಈಸ್ ನೌ' ಅಧ್ಯಯನದ ಸಂಶೋಧನೆಗಳನ್ನು ಬಹಿರಂಗಪಡಿಸಿದೆ, ಇದು ಭಾರತವು ಭವಿಷ್ಯವನ್ನು ಸ್ವೀಕರಿಸಲು ಎಷ್ಟರ ಮಟ್ಟಿಗೆ ಸಜ್ಜಾಗಿದೆ ಎನ್ನುವ ಒಳನೋಟಗಳನ್ನು ನೀಡುತ್ತದೆ.

ಸಾಂಕ್ರಾಮಿಕ ರೋಗವು ದೇಶದ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸುವುದರೊಂದಿಗೆ ಭಾರತದಲ್ಲಿ ಬದಲಾವಣೆಯ ತುತ್ತತುದಿಯಲ್ಲಿದೆ. ಆರೋಗ್ಯ ರಕ್ಷಣೆಯಿಂದ ಶಿಕ್ಷಣದವರೆಗೆ, ಬ್ಯಾಂಕಿಂಗ್‍ನಿಂದ ಉತ್ಪಾದನೆಯವರೆಗೆ, ತಂತ್ರಜ್ಞಾನವು ಪ್ರತಿಯೊಂದು ಕ್ಷೇತ್ರವನ್ನು ಪರಿವರ್ತಿಸುತ್ತಿದೆ, ಭವಿಷ್ಯದ ಸಂಪೂರ್ಣ ಸಾಧ್ಯತೆಗಳನ್ನು ಇದು ಅನಾವರಣಗೊಳಿಸುತ್ತಿದೆ. 18 ನಗರಗಳ 4,000 ಕ್ಕೂ ಹೆಚ್ಚು ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿ ಮಾಡಿದ ಅಧ್ಯಯನದ ಪ್ರಕಾರ, 79% ರಷ್ಟು ಜನರು ಹೇಳಿದಂತೆ ಭವಿಷ್ಯಕ್ಕೆ ಸಿದ್ಧ ಜಗತ್ತನ್ನು ರೂಪಿಸಲು ಭಾರತವು ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಬ್ಲಾಕ್‍ಚೇನ್‍ನಂತಹ ತಂತ್ರಜ್ಞಾನಗಳಿಗೆ ಆದ್ಯತೆ ನೀಡುತ್ತಿದೆ. ಸರಿಸುಮಾರು 83% ರಷ್ಟು ಜನರು ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರಗಳಲ್ಲಿ ನೋಡಿದ ತಂತ್ರಜ್ಞಾನವು ಈಗಾಗಲೇ ತಮ್ಮ ದೈನಂದಿನ ಜೀವನದ ಭಾಗವಾಗಿದೆ ಅಥವಾ ಮುಂದಿನ ಕೆಲವು ವರ್ಷಗಳಲ್ಲಿ ಆಗಬಹುದು ಎಂದು ನಂಬಿದ್ದಾರೆ.

ತಂತ್ರಜ್ಞಾನ-ಚಾಲಿತ ಬದಲಾವಣೆಯ ಪ್ರವೃತ್ತಿಯು ಮುಂದುವರಿಯುವ ಸಾಧ್ಯತೆಯೊಂದಿಗೆ, ನಿರ್ದಿಷ್ಟ ಉದ್ಯಮಗಳನ್ನು ಭವಿಷ್ಯದ ನಗರಗಳನ್ನುರೂಪಿಸುವ ಪ್ರಮುಖ ಚಾಲನಾ ಶಕ್ತಿಗಳು ಎಂದು ಗುರುತಿಸಲಾಗಿದೆ. ಆರೋಗ್ಯ (35%), ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ (21%), ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು (18%) ಕ್ಷೇತ್ರಗಳು ಬದಲಾವಣೆಯ ಮುಂಚೂಣಿಯಲ್ಲಿರುತ್ತವೆ ಎಂದು ನಂಬಲಾಗಿದೆ.

ಉಪಾಧ್ಯಕ್ಷ ಮೊಹಮದ್ ಸಯೆಫ್ ಮಾತನಾಡಿ

ಉಪಾಧ್ಯಕ್ಷ ಮೊಹಮದ್ ಸಯೆಫ್ ಮಾತನಾಡಿ

FedEx Express ಇಂಡಿಯಾ ಆಪರೇಷನ್‍ನ ಉಪಾಧ್ಯಕ್ಷ ಮೊಹಮದ್ ಸಯೆಫ್ ಮಾತನಾಡಿ, "ಫೆಡ್‍ಎಕ್ಸ್‌ನಲ್ಲಿ ನಾವು ಹಲವಾರು ದಶಕಗಳ ಕಾಲ ನಾವೀನ್ಯತೆಯ ಪರಂಪರೆಯನ್ನು ಹೊಂದಿದ್ದೇವೆ ಮತ್ತು ಜವಾಬ್ದಾರಿಯುತ ಮತ್ತು ವಿಶ್ವಕ್ಕಾಗಿ ಪರಿಹಾರಗಳ ಅನುಶೋಧನೆ ಪ್ರವೃತ್ತಿಯನ್ನು ನಾವು ಜವಾಬ್ದಾರಿಯುತವಾಗಿ ಮತ್ತು ಸಂಪನ್ಮೂಲ ಭರಿತ ವಿಧಾನದಲ್ಲಿ ಮುಂದುವರಿಸಲಿದ್ದೇವೆ" ಎಂದು ಹೇಳಿದರು.

ಡಿಜಿಟಲ್ ರೂಪಾಂತರದ ವೇಗವನ್ನು ಹೆಚ್ಚಿಸುವುದರೊಂದಿಗೆ, ಸುಸ್ಥಿರತೆಯ ಮೇಲೆ ಕೇಂದ್ರೀಕರಿಸುವ ಆವಿಷ್ಕಾರಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳು ವ್ಯವಹಾರದ ಭವಿಷ್ಯವನ್ನು ಚಾಲನೆ ಮಾಡಲು ಸಿದ್ಧವಾಗಿವೆ. ಬ್ಲಾಕ್‍ಚೈನ್, ಐಒಟಿ, ಆಟೊಮೇಷನ್ ಮತ್ತು ರೊಬೊಟಿಕ್ಸ್‍ನಲ್ಲಿನ ಹೆಚ್ಚಿನ ಪ್ರಗತಿಯು ಲಾಜಿಸ್ಟಿಕ್ಸ್ ಉದ್ಯಮಕ್ಕೆ ಮಾತ್ರವಲ್ಲದೆ ಭವಿಷ್ಯದಲ್ಲಿ ಎಲ್ಲಾ ಕೈಗಾರಿಕೆಗಳಿಗೆ ದಾರಿ ಮಾಡಿಕೊಡಲಿದೆ.

'ಫ್ಯೂಚರ್ ಈಸ್ ನೌ' ಅಧ್ಯಯನವು ಮೂರು ಮುಖ್ಯ ದೃಷ್ಟಿಕೋನಗಳ ಮೇಲೆ ಕೇಂದ್ರೀಕರಿಸಿದೆ: ಕ್ರಿಯಾತ್ಮಕವಾಗಿರುವುದು, ಭಾರತವು ಪ್ರಯೋಗ ಮತ್ತು ನಾವೀನ್ಯತೆಗೆ ಹೇಗೆ ತೆರೆದುಕೊಳ್ಳುತ್ತದೆ ಮತ್ತು ದೇಶವು ಯಾವ ಮಟ್ಟದಲ್ಲಿ ಸುಸ್ಥಿರತೆಯ ಜಾಗೃತವಾಗಿದೆ ಎನ್ನುವುದು. ಭವಿಷ್ಯದ ಯಶಸ್ಸು ಈ ಮೂರು ದೃಷ್ಟಿಕೋನಗಳ ಸುತ್ತ ತಮ್ಮ ವಿಧಾನವನ್ನು ರಚಿಸುವ ವ್ಯವಹಾರಗಳ ಮೇಲೆ ಅವಲಂಬಿತವಾಗಿದೆ ಎಂದು ಸಂಶೋಧನೆಗಳು ಸೂಚಿಸಿವೆ.

ಭವಿಷ್ಯ ಕ್ರಿಯಾತ್ಮಕ
 

ಭವಿಷ್ಯ ಕ್ರಿಯಾತ್ಮಕ

ಯಾವುದೇ ಉದ್ಯಮವಾಗಿದ್ದರೂ ಕಂಪನಿಗಳು ತಮ್ಮ ಗ್ರಾಹಕರ ನಾಡಿಮಿಡಿತದ ಮೇಲೆ ನಿಗಾ ಇರಿಸಬೇಕು, ಅವರ ಅಗತ್ಯಗಳನ್ನು ನಿರೀಕ್ಷಿಸಬೇಕು ಮತ್ತು ಅವರ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಿರೀಕ್ಷೆಗಳಿಗಿಂತ ಒಂದು ಹೆಜ್ಜೆ ಮುಂದೆ ಇರಬೇಕು. ಸಾಂಕ್ರಾಮಿಕ ರೋಗವು ನಾವು ಹೇಗೆ ಬದುಕುತ್ತೇವೆ ಮತ್ತು ಕೆಲಸ ಮಾಡುತ್ತೇವೆ, ವ್ಯಾಪಾರಗಳು ತಮ್ಮ ಗ್ರಾಹಕರೊಂದಿಗೆ ಹೇಗೆ ಸಂವಹನ ನಡೆಸುತ್ತವೆ ಮತ್ತು ಗ್ರಾಹಕರು ಹೇಗೆ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸುತ್ತಾರೆ ಎಂಬವರೆಗೆ ಜೀವನದ ಪ್ರತಿಯೊಂದು ಅಂಶದಲ್ಲೂ ಬದಲಾವಣೆಯನ್ನು ವೇಗಗೊಳಿಸಿದೆ.

FedEx ಅಧ್ಯಯನವು ಈ ಬದಲಾವಣೆಯೊಂದಿಗೆ ವೇಗವನ್ನು ಉಳಿಸಿಕೊಳ್ಳಲು ವ್ಯವಹಾರಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ತೋರಿಸುತ್ತದೆ, ಪ್ರತಿಕ್ರಿಯಿಸಿದವರ ಪೈಕಿ ಸುಮಾರು ಶೇಕಡ 87ರಷ್ಟು ಮಂದಿ, ಕಳೆದ ವರ್ಷದಲ್ಲಿ, ಕಂಪನಿಗಳು 'ಮುಂದೆ ಏನು?' ಎನ್ನುವುದನ್ನು ಅರ್ಥಮಾಡಿಕೊಳ್ಳುವ ಮತ್ತು ಸಂಭವನೀಯ ಪರಿಹಾರಗಳನ್ನು ಪ್ರಸ್ತುತಪಡಿಸುವ ಸಾಮಥ್ರ್ಯವನ್ನು ಪ್ರದರ್ಶಿಸಿವೆ ಎಂದು ಹೇಳಿದ್ದಾರೆ.

ಭವಿಷ್ಯಕ್ಕೆ ಸಜ್ಜಾದ ಮನಸ್ಥಿತಿಗಾಗಿ ಪ್ರಯೋಗಕ್ಕೆ ಮುಕ್ತತೆ ಅನಿವಾರ್ಯ

ಭವಿಷ್ಯಕ್ಕೆ ಸಜ್ಜಾದ ಮನಸ್ಥಿತಿಗಾಗಿ ಪ್ರಯೋಗಕ್ಕೆ ಮುಕ್ತತೆ ಅನಿವಾರ್ಯ

ಭಾರತವು ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಶ್ರೇಯಾಂಕಗಳನ್ನು ಗಳಿಸಿದೆ ಮತ್ತು ಹೊಸ ಆಲೋಚನೆಗಳು ಮತ್ತು ಪರಿಹಾರಗಳೊಂದಿಗೆ ರೂಪಾಂತರವನ್ನು ಪ್ರೇರೇಪಿಸುವ ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಗೆ ನೆಲೆಯಾಗಿದೆ.

ಹೆಚ್ಚುತ್ತಿರುವ ಕ್ರಿಯಾತ್ಮಕ ವಾತಾವರಣದಲ್ಲಿ, ವ್ಯವಹಾರಗಳ ಯಶಸ್ಸು ಹೊದಿಕೆಯನ್ನು ಸರಿಸುವುದರ ಮೇಲೆ ಮತ್ತು ಪ್ರಯೋಗಚಾಲಿತ ನಾವೀನ್ಯತೆಯ ಸಂಸ್ಕೃತಿಯನ್ನು ಬೆಳೆಸುವುದರ ಮೇಲೆ ಅವಲಂಬಿತವಾಗಿರುತ್ತದೆ. FedEx ಸಮೀಕ್ಷೆಯಲ್ಲಿ ಸಮೀಕ್ಷೆಗೆ ಒಳಪಡಿಸಿದವರ ಪೈಕಿ ಹೆಚ್ಚಿನ ಅಂದರೆ ಶೇಕಡ 91ರಷ್ಟು ಮಂದಿ ಸಂಸ್ಥೆಗಳು, ಸಮುದಾಯಗಳು ಅಥವಾ ಬದಲಾವಣೆಯನ್ನು ಪ್ರಯೋಗಿಸುವ ಮತ್ತು ಅಳವಡಿಸಿಕೊಳ್ಳುವ ವ್ಯಕ್ತಿಗಳು ಭವಿಷ್ಯದ ಸವಾಲುಗಳ ಮೂಲಕ ಪಥದರ್ಶನ ಮಾಡಲು ಉತ್ತಮವಾಗಿ ಸಜ್ಜುಗೊಂಡಿದ್ದಾರೆ ಎಂದು ನಂಬುತ್ತಾರೆ.

ಸಮರ್ಥನೀಯ ಮನಸ್ಥಿತಿ ಆಯ್ಕೆಯಲ್ಲ, ಬದಲಿಗೆ, ವ್ಯಾಪಾರದ ಯಶಸ್ಸಿಗೆ ಕಡ್ಡಾಯ

ಸಮರ್ಥನೀಯ ಮನಸ್ಥಿತಿ ಆಯ್ಕೆಯಲ್ಲ, ಬದಲಿಗೆ, ವ್ಯಾಪಾರದ ಯಶಸ್ಸಿಗೆ ಕಡ್ಡಾಯ

ಇಂದು ಗ್ರಾಹಕರು ತಮ್ಮ ಆಯ್ಕೆಗಳು ತಮ್ಮ ಸುತ್ತಲಿನ ಪ್ರಪಂಚದ ಮೇಲೆ ಬೀರುವ ಪ್ರಭಾವದ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಾರೆ - ಅದು ಪರಿಸರಕ್ಕೆ ಸಂಬಂಧಿಸಿದ್ದು ಇರಬಹುದು ಅಥವಾ ಅವರ ಸಮುದಾಯಗಳಿಗೆ ಸಂಬಂಧಿಸಿ ಇರಬಹುದು. ಅವರ ಖರೀದಿ ನಿರ್ಧಾರಗಳು ಸಹ ಸಂಸ್ಥೆಯು ಸಮರ್ಥನೀಯ ಮತ್ತು ಜವಾಬ್ದಾರಿಯುತವಾಗಿದೆ ಎಂಬ ಅವರ ಗ್ರಹಿಕೆಯಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ. ಫೆಡೆಕ್ಸ್ ಅಧ್ಯಯನದ ಪ್ರಕಾರ, ಮುಕ್ಕಾಲು ಭಾಗದಷ್ಟು (75%) ವ್ಯಕ್ತಿಗಳು, ಸಮುದಾಯಗಳು ಇತ್ಯಾದಿಗಳು 'ಭವಿಷ್ಯದ' ದೃಷ್ಟಿಕೋನವನ್ನು ಹೊಂದಿರುವವರು ಹೆಚ್ಚು ಪರಿಸರ ಪ್ರಜ್ಞೆಯನ್ನು ಹೊಂದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ವಾಸ್ತವವಾಗಿ, ಪ್ರತಿಕ್ರಿಯಿಸಿದವರ ಪೈಕಿ ಶೇಕಡ 71ರಷ್ಟು ಮಂದಿ ಭವಿಷ್ಯದ ವ್ಯವಹಾರದಲ್ಲಿ ನಿರ್ಧಾರ ತೆಗೆದುಕೊಳ್ಳುವವರಾಗಿ, ಸಮರ್ಥನೀಯತೆಯು ನಿರ್ಣಾಯಕವಾಗಿದೆ ಮತ್ತು ಅವರ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಅಧ್ಯಯನದಲ್ಲಿ ಭಾಗವಹಿಸಿದವರ ಪ್ರತಿಕ್ರಿಯೆಯು ಸ್ಪಷ್ಟವಾಗಿದೆ

ಅಧ್ಯಯನದಲ್ಲಿ ಭಾಗವಹಿಸಿದವರ ಪ್ರತಿಕ್ರಿಯೆಯು ಸ್ಪಷ್ಟವಾಗಿದೆ

ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಪ್ರಸ್ತುತತೆ ಮತ್ತು ದೀರ್ಘಾವಧಿಯ ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ತಮ್ಮ ಸುಸ್ಥಿರತೆಯ ಕಾರ್ಯತಂತ್ರಗಳನ್ನು ಮರು-ಮೌಲ್ಯಮಾಪನ ಮತ್ತು ಪರಿಷ್ಕರಣೆ ಮಾಡುವುದನ್ನು ಮುಂದುವರಿಸಬೇಕು.

ಪ್ರಪಂಚವು ವಿಕಸನಗೊಳ್ಳುತ್ತಿದ್ದಂತೆ, ತಂತ್ರಜ್ಞಾನ ಮತ್ತು ಪ್ರವೃತ್ತಿಗಳು ಜೀವನಶೈಲಿ, ನಡವಳಿಕೆಗಳು ಮತ್ತು ವರ್ತನೆಗಳಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ವ್ಯವಹಾರಗಳು ಮತ್ತು ವ್ಯಕ್ತಿಗಳೆರಡಕ್ಕೂ, ಅಪರಿಮಿತ ಸಾಧ್ಯತೆಗಳನ್ನು ನೀಡುವ ಭವಿಷ್ಯವನ್ನು ಅಳವಡಿಸಿಕೊಳ್ಳುವುದು ಮತ್ತು ಕ್ರಿಯಾತ್ಮಕ, ಪ್ರಾಯೋಗಿಕ ಮತ್ತು ಸಮರ್ಥನೀಯ ಮನಸ್ಥಿತಿಯನ್ನು ಹೊಂದಿರುವುದು ಇತರರಿಗಿಂತ ಒಂದು ಹೆಜ್ಜೆ ಮುಂದೆ ಇರಲು ಕಡ್ಡಾಯವಾಗಿರುತ್ತದೆ.

English summary

FedEx Express Study Reveals India is Future-Ready

FedEx Express, a subsidiary of FedEx Corp and the world’s largest express transportation company, today revealed the findings of its ‘Future is Now’ study* that offers insights into India’s readiness to embrace the future.
Story first published: Tuesday, October 26, 2021, 17:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X