For Quick Alerts
ALLOW NOTIFICATIONS  
For Daily Alerts

FIFA World Cup Qatar 2022: ಭಾರತದಿಂದ ಕತಾರ್‌ಗೆ ಹೋಗಲು ಹೆಚ್ಚಾಯ್ತು ಪ್ರೈವೇಟ್ ಜೆಟ್ ಬುಕಿಂಗ್; ಕಾರಣ ಏನು?

|

ನವದೆಹಲಿ, ನ. 8: ಕತಾರ್ ದೇಶದ ನಗರಗಳಿಗೆ ಹೋಗಲು ಪ್ರೈವೇಟ್ ಜೆಟ್ ಬುಕ್ ಮಾಡುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಇದೇ ನವೆಂಬರ್ 20ರಿಂದ ಡಿಸೆಂಬರ್ 18ರವರೆಗೆ ಕತಾರ್‌ನಲ್ಲಿ ಫೀಫಾ ವಿಶ್ವಕಪ್ ನಡೆಯಲಿದ್ದು ಪಂದ್ಯಗಳನ್ನು ಸ್ಟೇಡಿಯಂನಲ್ಲಿ ವೀಕ್ಷಿಸಲು ಹಲವು ಭಾರತೀಯರು ತುದಿಗಾಲಿನಲ್ಲಿದ್ದಾರೆ. ಎಚ್‌ಎನ್‌ಐ (ಹೈ ನೆಟ್ ವರ್ತ್ ಇಂಡಿವಿಜುವಲ್) ಎನಿಸಿಕೊಂಡಿರುವ ಸಿರಿವಂತರು ದುಬಾರಿ ಬೆಲೆಯಾದರೂ ಪ್ರೈವೇಟ್ ಚಾರ್ಟರ್‌ಗಳ ಮೊರೆ ಹೋಗಿದ್ದಾರೆ.

ಚಾರ್ಟರ್ಡ್ ಪ್ಲೇನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೆಚ್ಚೆಚ್ಚು ಭಾರತೀಯ ಶ್ರೀಮಂತರು ಇಂಥ ಖಾಸಗಿ ವಿಮಾನಗಳನ್ನು ಬುಕ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಈಗ ಯುಎಇ ಮತ್ತು ಕತಾರ್‌ನಲ್ಲಿ ಫೀಫಾ ವಿಶ್ವಕಪ್ ಇರುವುದರಿಂದ ಬಹುತೇಕ ಖಾಸಗಿ ಜೆಟ್ ವಿಮಾನಗಳು ಡಿಸೆಂಬರ್‌ವರೆಗೂ ಬುಕ್ ಆಗಿ ಹೋಗಿವೆ. ಬಹಳ ವೇಗವಾಗಿ ಸಾಗುವ 30 ಸೀಟರ್ ಚಾರ್ಟರ್ ಪ್ಲೇನ್ ಅನ್ನು ಭಾರತೀಯರು ಹೆಚ್ಚು ಬುಕ್ ಮಾಡಿದ್ದಾರೆ.

ಮದುವೆ ನೋಡು ಬ್ಯುಸಿನೆಸ್ ಮಾಡು; ಭಾರತದಲ್ಲಿ ವೆಡಿಂಗ್ ಸೀಸನ್ ಮೆರುಗುಮದುವೆ ನೋಡು ಬ್ಯುಸಿನೆಸ್ ಮಾಡು; ಭಾರತದಲ್ಲಿ ವೆಡಿಂಗ್ ಸೀಸನ್ ಮೆರುಗು

ಅಪ್ ಅಂಡ್ ಡೌನ್

ಅಪ್ ಅಂಡ್ ಡೌನ್

ಅರಬ್ ಮತ್ತು ಮಿಡಲ್ ಈಸ್ಟ್‌ನಲ್ಲಿ ನಡೆಯುತ್ತಿರುವ ಚೊಚ್ಚಲ ಫೀಫಾ ವರ್ಲ್ಡ್ ಕಪ್ ಇದಾಗಿದೆ. ಹೊರದೇಶಗಳಿಂದ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಕತಾರ್ ಮತ್ತು ಯುಎಇಗೆ ಆಗಮಿಸುತ್ತಿದ್ದಾರೆ. ಎಲ್ಲಾ ಪ್ರೇಕ್ಷಕರಿಗೂ ವಸತಿ ಕಲ್ಪಿಸುವ ಹೋಟೆಲ್‌ಗಳ ಸಂಖ್ಯೆ ಕತಾರ್‌ನಲ್ಲಿ ಇಲ್ಲ ಎನ್ನಲಾಗಿದೆ. ಹೀಗಾಗಿ, ಕತಾರ್‌ಗೆ ಹೋಗಿ ಫುಟ್ಬಾಲ್ ಪಂದ್ಯ ನೋಡಿಕೊಂಡು ಅದೇ ದಿನ ವಾಪಸ್ಸಾಗಬೇಕಾದ ಅನಿವಾರ್ಯತೆ ಇದೆ. ಇಧೇ ಕಾರಣಕ್ಕೆ ಹಲವು ಭಾರತೀಯರು ಚಾರ್ಟರ್ಡ್ ಪ್ಲೇನ್ ಅಥವಾ ಪ್ರೈವೇಟ್ ಜೆಟ್‌ಗಳನ್ನು ಬುಕ್ ಮಾಡಿದ್ದಾರೆ.

60 ಲಕ್ಷ ರೂ

60 ಲಕ್ಷ ರೂ

ವೇಗವಾಗಿ ಸಾಗುವ 30 ಸೀಟರ್ ಚಾರ್ಟರ್ ಪ್ಲೇನ್ ಡೆಲ್ಲಿಯಿಂದ ದೋಹಾ ನಗರಕ್ಕೆ ಹೋಗಲು 5 ಗಂಟೆ ಬೇಕಾಗುತ್ತದೆ. ರಿಟರ್ನ್ ಟ್ರಿಪ್ ಇದ್ದರೆ ಏರ್‌ಪೋರ್ಟ್ ಶುಲ್ಕ, ಸಿಬ್ಬಂದಿ ವೆಚ್ಚ, ವಿಮಾನ ವೇಟಿಂಗ್ ಚಾರ್ಜ್ ಇತ್ಯಾದಿ ವೆಚ್ಚ ಇರುತ್ತದೆ. ಈ 30 ಸೀಟರ್ ಪ್ರೈವೇಟ್ ಜೆಟ್‌ನಲ್ಲಿ ದೆಹಲಿಯಿಂದ ದೋಹಾಗೆ ಹೋಗಿ ವಾಪಸ್ ಬರುವ ಟು-ವೇ ಟ್ರಿಪ್‌ಗೆ 50ರಂದ 60 ಲಕ್ಷ ರೂ ವೆಚ್ಚವಾಗುವ ಅಂದಾಜಿದೆ. ಪ್ರೈವೇಟ್ ಜೆಟ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಬೇಡಿಕೆ ಕೂಡ ಹೆಚ್ಚಿದ್ದು, ಬೆಲೆ ಇನ್ನಷ್ಟು ಏರಿಕೆ ಆಗುತ್ತದೆ.

ಒಂದು ಫುಟ್ಬಾಲ್ ಪಂದ್ಯ ಮಾತ್ರ ವೀಕ್ಷಿಸಲು ಇಷ್ಟು ದುಬಾರಿ ವೆಚ್ಚ ಮಾಡುತ್ತಾರಾ ಎಂದು ಅಚ್ಚರಿ ಎನಿಸಬಹುದು. ಆದರೆ, ಇನ್ಸ್‌ಟಾ ಚಾರ್ಟರ್ ಸಂಸ್ಥೆ ಹೇಳುವ ಪ್ರಕಾರ, ಇಂದಿನ ಹೆಚ್ಚಿನ ಸಿರಿವಂತರು 40 ವರ್ಷದೊಳಗಿನ ವಯೋಮಾನದವರಾಗಿದ್ದಾರೆ. ಇವರು ಒಡವೆ ಇತ್ಯಾದಿಗಿಂತ ಜೀವನಾನುಭವಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ.

 

ಬೇರೆ ವಿಮಾನಗಳೂ ಬುಕಿಂಗ್

ಬೇರೆ ವಿಮಾನಗಳೂ ಬುಕಿಂಗ್

ಅರಬ್ ನಾಡಿನಲ್ಲಿ ಫೀಫಾ ವಿಶ್ವಕಪ್ ಇದ್ದು, ಭಾರತದಿಂದ ಹಲವರು ಹೋಗುತ್ತಿರುವುದರಿಂದ ದೋಹಾ ಮೊದಲಾದ ನಗರಗಳಿಗೆ ಹೋಗುವ ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಮೊದಲಾದ ಏರ್‌ಲೈನ್ ಸಂಸ್ಥೆಗಳು ಹೆಚ್ಚು ವಿಮಾನಗಳನ್ನು ಆ ಮಾರ್ಗಕ್ಕೆ ನಿಯೋಜಿಸಿವೆ.

ಭಾರತದಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಬಗ್ಗೆ ಬಹಳ ಕ್ರೇಜ್ ಇದೆ. ಈಶಾನ್ಯ ಭಾರತ, ಕೇರಳ, ಗೋವಾ, ಬೆಂಗಳೂರು, ಹೈದರಾಬಾದ್, ಮುಂಬೈ, ಪಂಜಾಬ್, ಒಡಿಶಾ ಮೊದಲಾದ ಕಡೆ ಫುಟ್ಬಾಲ್ ಪ್ರೇಮಿಗಳು ಹೆಚ್ಚಿದ್ದಾರೆ. ಫೀಫಾ ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರಾತಿನಿಧ್ಯ ಇಲ್ಲದೇ ಹೋದರೂ ಅಂತಾರಾಷ್ಟ್ರೀಯ ತಾರೆಗಳ ಆಟವನ್ನು ನೋಡಿ ಕಣ್ತುಂಬಿಸಿಕೊಳ್ಳುವ ತವಕ ಭಾರತೀಯರದ್ದು. ಲಯೋನೆಲ್ ಮೆಸ್ಸಿಗೆ ಈ ಬಾರಿಯದ್ದು ಕೊತ್ತಕೊನೆಯ ವಿಶ್ವಕಪ್ ಕೂಡ ಹೌದು. ಇದೂ ಕೂಡ ಭಾರತೀಯರ ಆಸಕ್ತಿ, ಕುತೂಹಲ ಹೆಚ್ಚಿಸಿದೆ.

 

Note Ban: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಏರಿಕೆ!Note Ban: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಏರಿಕೆ!

English summary

FIFA World Cup 2022: More Indians Booking Private Jets To Qatar

As FIFA Football World Cup 2022 in Qatar begins on November 20th, the companies associated with air charter services in India are witnessing a spurt in booking done contry's high net-worth Individuals (HNIs).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X