For Quick Alerts
ALLOW NOTIFICATIONS  
For Daily Alerts

ನವೆಂಬರ್ ನಲ್ಲಿ 50,000 ಕೋಟಿ ರುಪಾಯಿ ದಾಟಿದ FII ಹೂಡಿಕೆ

By ಅನಿಲ್ ಆಚಾರ್
|

ಇದೇ ಮೊದಲ ಬಾರಿಗೆ ನವೆಂಬರ್ 2020ರಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (FII) ಹೂಡಿಕೆ 50,000 ಕೋಟಿ ರುಪಾಯಿ ದಾಟಿದೆ. ಈ ತಿಂಗಳಲ್ಲಿ ಇನ್ನೂ ಆರು ದಿನ ಬಾಕಿ ಇದೆ. ಎಫ್ ಐಐಗಳು 50,501.07 ಕೋಟಿ ರುಪಾಯಿ ಮೌಲ್ಯದ ಈಕ್ವಿಟಿ ಖರೀದಿ ಮಾಡಿದ್ದಾರೆ ಹಾಗೂ ಮಂಗಳವಾರದಂದು 4,563.18 ಕೋಟಿಯಷ್ಟು ಈಕ್ವಿಟೀಸ್ ಖರೀದಿಸಿದ್ದಾರೆ.

ಕೊಟಕ್ ಅಸೆಟ್ ಮ್ಯಾನೇಜ್ ಮೆಂಟ್ ಮ್ಯಾನೇಜಿಂಗ್ ಡೈರೆಕ್ಟರ್ ನಿಲೇಶ್ ಶಾ ಟ್ವೀಟ್ ಮಾಡಿದ್ದು, ಮೊದಲ ಬಾರಿಗೆ ಎಫ್ ಪಿಐ ಈಕ್ವಿಟಿ ಖರೀದಿ ಒಂದು ತಿಂಗಳಲ್ಲಿ 50,000 ಕೋಟಿ ರುಪಾಯಿ ದಾಟಿದೆ. ಅದು ಕೂಡ ತಿಂಗಳು ಇನ್ನೂ ಪೂರ್ತಿ ಆಗಿಲ್ಲ ಎಂದು ಅವರು ಹೇಳಿದ್ದಾರೆ.

ಷೇರುಮಾರ್ಕೆಟ್ ಗಳಿಕೆ: ಸಾರ್ವಕಾಲಿಕ ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿಷೇರುಮಾರ್ಕೆಟ್ ಗಳಿಕೆ: ಸಾರ್ವಕಾಲಿಕ ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ

ಎಫ್ ಐಐನಿಂದ ಹಣ ಹರಿದುಬರುತ್ತಿದ್ದು, ಭಾರತೀಯ ಮಾರುಕಟ್ಟೆ ದಿನದಿನಕ್ಕೂ ಹೊಸ ಎತ್ತರಕ್ಕೆ ಏರಿದೆ. ಎಫ್ ಐಐಗಳು ನಿರಂತರವಾಗಿ ಖರೀದಿ ಮಾಡುತ್ತಿದ್ದು, ದೇಶೀಯವಾಗಿ ಮಾರಾಟ ಆಗುತ್ತಿದೆ. ನವೆಂಬರ್ 2020ರಲ್ಲಿ ಎರಡು ದಶಕಗಳಲ್ಲಿ ಅತಿ ಹೆಚ್ಚಿನ ಖರೀದಿ ಆಗಿದ್ದು, ಈ ವರ್ಷದಲ್ಲಿ ಇಲ್ಲಿಯ ತನಕ ಭಾರತಕ್ಕೆ ಅಂದಾಜು 1.31 ಲಕ್ಷ ಕೋಟಿ ರುಪಾಯಿ ಹೂಡಿಕೆ ಬಂದಿದೆ. ಅದರಲ್ಲಿ ನವೆಂಬರ್ ತಿಂಗಳೊಂದರಲ್ಲೇ 50,989 ಕೋಟಿ ಹರಿದುಬಂದಿದೆ.

ನವೆಂಬರ್ ನಲ್ಲಿ 50,000 ಕೋಟಿ ರುಪಾಯಿ ದಾಟಿದ FII ಹೂಡಿಕೆ

ಇನ್ನು ಮಂಗಳವಾರದಂದು ನಿಫ್ಟಿ ಸೂಚ್ಯಂಕವು ಇದೇ ಮೊದಲ ಬಾರಿಗೆ ಹದಿಮೂರು ಸಾವಿರ ಪಾಯಿಂಟ್ ಗಡಿ ದಾಟಿತು.

English summary

FII Inflow Cross Rs 50000 Crore First Time In November 2020

Foreign Institutional Investors (FII) inflow crosses 50,000 crore rupees in 2020 November.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X