For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಕ್ಕೆ ಹಣಕಾಸು ಸಚಿವಾಲಯ ಚಿಂತನೆ

|

ದಾಖಲೆಯ ಮಟ್ಟದಲ್ಲಿರುವ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ ಎಂದು ಈ ಕುರಿತು ತಿಳಿದಿರುವ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್‌ 02ರ ಪೆಟ್ರೋಲ್, ಡೀಸೆಲ್ ದರದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್‌ 02ರ ಪೆಟ್ರೋಲ್, ಡೀಸೆಲ್ ದರ

ಕಳೆದ 10 ತಿಂಗಳಿನಿಂದ ಕಚ್ಚಾ ತೈಲದ ಬೆಲೆ ದ್ವಿಗುಣಗೊಳ್ಳುತ್ತಿದೆ. ಜೊತೆಗೆ ಎಲ್‌ಪಿಜಿ ಗ್ಯಾಸ್ ದರವು ಕೂಡ ನಾಲ್ಕು ಬಾರಿ ಹೆಚ್ಚಳವಾಗಿದೆ. ವಿಶ್ವದ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರಗಳಲ್ಲಿ ಒಂದಾದ ಭಾರತವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯ ಸರಿಸುಮಾರು ಶೇಕಡಾ 60ರಷ್ಟು ತೆರಿಗೆಯನ್ನು ಹೊಂದಿದೆ.

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಕ್ಕೆ ಹಣಕಾಸು ಸಚಿವಾಲಯ ಚಿಂತನೆ

ಕಳೆದ ವರ್ಷ ಕಡಿಮೆ ತೈಲ ಬೆಲೆಗಳ ಪ್ರಯೋಜವನ್ನು ಗ್ರಾಹಕರಿಗೆ ತಲುಪಿಸುವ ಬದಲು ಸರ್ಕಾರವು 12 ತಿಂಗಳುಗಳಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಿಸಿದೆ. ಹೀಗಾಗಿ ಈ ತೆರಿಗೆ ದರದಲ್ಲಿ ಕಡಿತಗೊಳಿಸುವ ಚರ್ಚೆ ನಡೆದಿದೆ.

"ಬೆಲೆಗಳನ್ನು ಸ್ಥಿರವಾಗಿರಿಸಬಹುದಾದ ಮಾರ್ಗಗಳನ್ನು ನಾವು ಚರ್ಚಿಸುತ್ತಿದ್ದೇವೆ. ಮಾರ್ಚ್ ಮಧ್ಯದ ವೇಳೆಗೆ ನಾವು ಈ ವಿಷಯದ ಬಗ್ಗೆ ಒಂದು ಅಭಿಪ್ರಾಯವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ "ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಗ್ರಾಹಕರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿ ಮಾರ್ಗವನ್ನು ಕಂಡುಕೊಳ್ಳಲು ಭಾರತದ ಹಣಕಾಸು ಸಚಿವಾಲಯ ಈಗಾಗಲೇ ಕೆಲವು ರಾಜ್ಯಗಳು, ತೈಲ ಕಂಪನಿಗಳು ಮತ್ತು ತೈಲ ಸಚಿವಾಲಯದೊಂದಿಗೆ ಸಮಾಲೋಚನೆಗಳನ್ನು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

English summary

Finance Ministry Consider Cutting Taxes On Petrol, Diesel: Report

The Ministry of Finance is considering cutting excise duties on petrol and diesel to cushion the impact of record-high domestic prices, three government officials close to the discussions said.
Story first published: Tuesday, March 2, 2021, 11:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X