For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ವಹಿವಾಟಿಗೆ ಆರ್ಥಿಕ ಸಾಕ್ಷರತೆಯ ಸಾಕ್ಷಾತ್ಕಾರ ಇಂದಿನ ಅಗತ್ಯ

ಷೇರುಪೇಟೆಯು ಹೆಚ್ಚಿನ ಅಸ್ಥಿರತೆಯಿಂದ ಕೂಡಿದೆ. ಷೇರಿನ ಬೆಲೆಗಳು ವಿನಾಕಾರಣ ಇಳಿಯುತ್ತವೆ ಅಂತೆಯೇ ಏರಿಕೆಗೊಳಪಡುತ್ತವೆ. ಏರಿಕೆ ಕಂಡಾಗ ಲಾಭ ನಗಧೀಕರಣ, ಇಳಿಕೆ ಕಂಡಾಗ ಶೇಖರಣಾ ವಿಧಾನವೊಂದೇ ಇಂದಿನ ವಹಿವಾಟಿಗೆ ಮಾರ್ಗದರ್ಶನ.

|

ಷೇರುಪೇಟೆಯು ಹೆಚ್ಚಿನ ಅಸ್ಥಿರತೆಯಿಂದ ಕೂಡಿದೆ. ಷೇರಿನ ಬೆಲೆಗಳು ವಿನಾಕಾರಣ ಇಳಿಯುತ್ತವೆ ಅಂತೆಯೇ ಏರಿಕೆಗೊಳಪಡುತ್ತವೆ. ಏರಿಕೆ ಕಂಡಾಗ ಲಾಭ ನಗಧೀಕರಣ, ಇಳಿಕೆ ಕಂಡಾಗ ಶೇಖರಣಾ ವಿಧಾನವೊಂದೇ ಇಂದಿನ ವಹಿವಾಟಿಗೆ ಮಾರ್ಗದರ್ಶನ. ಭಾನುವಾರದ ಮುಹೂರ್ತ್ ವಹಿವಾಟಿನಲ್ಲಿ 192 ಪಾಯಿಂಟುಗಳ ಏರಿಕೆ ಕಂಡ ಸೆನ್ಸೆಕ್ಸ್ ಮಂಗಳವಾರದಂದು ತನ್ನ ಏರಿಕೆಯ ದಿಶೆಯಲ್ಲಿ ಸಾಗಿ 581 ಪಾಯಿಂಟುಗಳಲ್ಲಿ ಕೊನೆಗೊಂಡಿದೆ. ಅಂದರೆ ಕಳೆದ ಜೂನ್ ತಿಂಗಳಲ್ಲಿ ದಾಖಲಿಸಿದ್ದ 40,312 ಪಾಯಿಂಟುಗಳ ಸರ್ವಕಾಲೀನ ಗರಿಷ್ಟಕ್ಕೆ 481 ಪಾಯಿಂಟುಗಳಷ್ಟು ಹಿಂದಿದೆ ಅಷ್ಟೇ. ಆದರೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಇಂಡೆಕ್ಸ್ ಗಳು ಏಪ್ರಿಲ್ ತಿಂಗಳಲ್ಲಿ ದಾಖಲಿಸಿದ್ದ ಸರ್ವಕಾಲೀನ ದಾಖಲೆ ಮಟ್ಟದಿಂದ ಕನಿಷ್ಠ ಮಟ್ಟದ ಮಧ್ಯೆಯಲ್ಲಿರುವುದು ಆ ವಲಯದ ಕಂಪನಿಗಳಲ್ಲಿನ ಅವ್ವಸ್ಥೆಯನ್ನು ಬಿಂಬಿಸುತ್ತದೆ.

ಷೇರುಪೇಟೆ ವಹಿವಾಟಿಗೆ ಆರ್ಥಿಕ ಸಾಕ್ಷರತೆಯ ಸಾಕ್ಷಾತ್ಕಾರ ಇಂದಿನ ಅಗತ್ಯ

ಷೇರುಪೇಟೆಯ ಈ ರೀತಿಯ ಅಸಹಜ ನಡೆ ಬಹಳಷ್ಟು ಹೂಡಿಕೆದಾರರನ್ನು ದೂರತಳ್ಳಿರಬಹುದು. ಹೆಚ್ಚಿನವರು ಸುರಕ್ಷತಾ ಕಾರಣಕ್ಕಾಗಿ ಬ್ಯಾಂಕ್ ಡಿಪಾಜಿಟ್ಟುಗಳನ್ನಾಶ್ರಯಿಸಿರಬಹುದು. ಬ್ಯಾಂಕ್ ಗಳು ಡಿಪಾಜಿಟ್ ಗಳಿಗೆ ನೀಡುವ ಬಡ್ಡಿ ದರವನ್ನು ಕಡಿತಗೊಳಿಸಿ, ಗೃಹ ಸಾಲ, ವಾಹನ ಸಾಲಗಳಿಗೆ ಹೆಚ್ಚು ಆಧ್ಯತೆ ನೀಡುತ್ತಿವೆ. ಕಾರ್ಪೊರೇಟ್ ವಲಯವು ಸಹ ಸಂಪನ್ಮೂಲ ಕೊರತೆಯಿಂದ ಹೆಚ್ಚಿನ ಕಂಪನಿಗಳು ವಿವಿಧ ರೀತಿಯ ಯೋಜನೆಗಳಿಂದ, ವಿವಿಧ ಮೂಲಗಳಿಂದ ಹಣ ಸಂಗ್ರಹಣಾ ಕಾರ್ಯವನ್ನು ಚುರುಕುಗೊಳಿಸಿವೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಇಂಡಿಯನ್ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್ ಗಳು ಪ್ರಕಟಿಸಿದ ಫಲಿತಾಂಶಗಳು ಆಕರ್ಷಣೀಯವಾಗಿದ್ದು, ಉತ್ತಮ ಚೇತರಿಕೆಯ ಲಕ್ಷಣಗಳನ್ನು ತೋರಿವೆ. ನವೆಂಬರ್ 6 ರಂದು ಕೆನರಾ ಬ್ಯಾಂಕ್ ತನ್ನ ತ್ರೈಮಾಸಿಕ ಸಾಧನೆ ಪ್ರಕಟಿಸಲಿರುವುದರಿಂದ ಷೇರಿನ ಬೆಲೆಯಲ್ಲಿ ಚೇತರಿಕೆ ಕಂಡಿದೆ. ಮಂಗಳವಾರದಂದು ಟಾಟಾ ಮೋಟಾರ್ಸ್ ಷೇರಿನ ಬೆಲೆ ರೂ.175.45 ರವರೆಗೂ ಏರಿಕೆ ಕಂಡಿದೆ. ಕೇವಲ ಎರಡೇ ದಿನಗಳಲ್ಲಿ ರೂ.50 ರಷ್ಟು ಏರಿಕೆ ಕಂಡಿರುವುದು ವ್ಯಾಲ್ಯೂ ಪಿಕ್ ನ ಪ್ರಭಾವ ಹೇಗಿರುತ್ತದೆಂದು ತಿಳಿಸುತ್ತದೆ. ಹೀಗಿರುವಾಗ ನಾವು, ಸಣ್ಣ ಹೂಡಿಕೆದಾರರು ನಮ್ಮಲ್ಲಿರುವ ಸಮನ್ಮೂಲವನ್ನು ಕರಗಿಸಿಕೊಳ್ಳದೆ, ಸಾಧ್ಯವಾದಷ್ಟು ಸುರಕ್ಷತೆಯಿಂದ ಉಳಿಸಿ ಬೆಳೆಸುವ ಮೂಲಕ ಆರ್ಥಿಕ ಸಾಕ್ಷರತೆಯನ್ನು ಗಳಿಸಬೇಕಾಗಿದೆ.
ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆ ಎಂದರೆ ಬ್ಯಾಂಕ್ ಡಿಪಾಜಿಟ್ಟುಗಳು ಎಂಬ ಕಲ್ಪನೆ ಎಲ್ಲರಲ್ಲೂ ಬೇರೂರಿದೆ. ಆದರೆ ಬ್ಯಾಂಕ್ ಗಳಲ್ಲಿ ಕೇವಲ ರೂ.ಒಂದು ಲಕ್ಷದವರೆಗೂ ಮಾತ್ರ ವಿಮೆಯ ಸುರಕ್ಷತೆ ಇರುತ್ತದೆ. ಹೆಚ್ಚಿನದಕ್ಕೆ ಯಾವುದೇ ರೀತಿಯ ಗ್ಯಾರಂಟಿ ಇರುವುದಿಲ್ಲ. ಆದರೂ ನಾವು ಸರತಿಯಲ್ಲಿ ಬ್ಯಾಂಕ್ ಗಳಲ್ಲಿ ಠೇವಣಿ ಇಡುತ್ತೇವೆ. ಇದಕ್ಕೆ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿರುವ ನಂಬಿಕೆ ಕಾರಣವಾಗಿದೆ. ಹೀಗಿರುವಾಗ ಬ್ಯಾಂಕ್ ಗಳು ತಮ್ಮ ಠೇವಣಿದಾರರಿಗೆ ಸುಮಾರು ಶೇ.7 ರಿಂದ ಶೇ.8% ರವರೆಗೂ ವಾರ್ಷಿಕ ಬಡ್ಡಿ ನೀಡುತ್ತವೆ. ಕೆಲವು ಕಾರ್ಪೊರೇಟ್ ಗಳು ವಿತರಿಸುವ 'ಸೆಕ್ಯೂರ್ಡ್ 'ಎನ್ ಸಿ ಡಿ ಗಳಲ್ಲಿ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಬಡ್ಡಿ ಪಡೆಯಬಹುದು ಎಂಬ ಕಾರಣಕ್ಕಾಗಿ ಅವುಗಳತ್ತ ಯೋಚಿಸುವವರು ಉಂಟು. 'ಸೆಕ್ಯೂರ್ಡ್ ' ಎಂಬುದು ಮಾಯಾಪದವಾಗಿದ್ದು, ಈ ಎನ್ ಸಿ ಡಿ ಗಳನ್ನೂ ವಿತರಿಸುವ ಕಂಪನಿ ಬಲಿಷ್ಠವಾಗಿದ್ದಲ್ಲಿ ಮಾತ್ರ 'ಸೆಕ್ಯೂರ್ಡ್ ' ಪದಕ್ಕೆ ಬೆಲೆ ಇಲ್ಲವಾದಲ್ಲಿ ಹೂಡಿಕೆ ಮಾಡಿದ ಬಂಡವಾಳವು ಆಪತ್ತುಗೆ ಸಿಲುಕಿದಂತೆಯೇ ಸರಿ. ತುಲಾತ್ಮಕವಾಗಿ ಅಡಕವಾಗಿರುವ ವಿವಿಧ ಅಂಶಗಳನ್ನು ಪರಿಗಣಿಸಿ ನಿರ್ಧರಿಸುವ ಆರ್ಥಿಕ ಸಾಕ್ಷರತಾ ಮಟ್ಟ ಬೆಳೆಸಿಕೊಳ್ಳುವುದು ಇಂದಿನ ಅವಶ್ಯವಾಗಿದೆ.

ಆಂತರಿಕವಾಗಿ ಈ ವರ್ಷ ಕೆಲವು ಕಂಪನಿಗಳ ಬೆಲೆಗಳು ಕರಗಿ ನೀರಾಗಿ ಹೂಡಿಕೆದಾರರನ್ನು ಬರಡಾಗಿಸಿರುವುದು ಹೆಚ್ಚಿನ ಆತಂಕಕಾರಿಯಾಗಿದೆ. ಕೆಲವು ಕಂಪನಿಗಳ ಷೇರಿನ ಮೌಲ್ಯವು ಕುಸಿದಿರುವುದನ್ನು ಗಮನಿಸಿದಾಗ ರೂ.7 ಲಕ್ಷ ಬಂಡವಾಳೀಕರಣ ಮೌಲ್ಯ ಕರಗಿರುವುದು ನಗಣ್ಯವೆನಿಸುತ್ತದೆ.

* ವಕ್ರಾಂಗಿ ಲಿಮಿಟೆಡ್ ಕಂಪನಿ ಷೇರಿನ ಬೆಲೆ 2018 ರ ಆರಂಭದಲ್ಲಿ ರೂ.500 ಕ್ಕೂ ಹೆಚ್ಚಿದ್ದು 2018 ರ ವರ್ಷಾಂತ್ಯದಲ್ಲಿ ರೂ.33 ಕ್ಕೆ ಕುಸಿತ ಕಂಡಿದ್ದು. ಈಗಲೂ ರೂ.34 ರ ಸಮೀಪದಲ್ಲಿದೆ. ಈ ಮಧ್ಯೆ ಏಪ್ರಿಲ್ ತಿಂಗಳಲ್ಲಿ ರೂ.70 ರ ಗಡಿ ದಾಟಿದ್ದು ಗಮನಾರ್ಹ ಅಂಶವಾಗಿದೆ. ಕಳೆದ ನವೆಂಬರ್ ತಿಂಗಳಲ್ಲಿ ತಲುಪಿದ್ದ ರೂ.22.25 ವಾರ್ಷಿಕ ಕನಿಷ್ಠವಾಗಿದೆ. ಸೆಪ್ಟೆಂಬರ್ 2019 ರ ತ್ರೈಮಾಸಿಕ ಸಾಧನೆ ಪ್ರಕಟವಾಗಬೇಕಿದ್ದು, ಈ ಸಂದರ್ಭದಲ್ಲಿ ಪ್ರವರ್ತಕರ ಭಾಗಿತ್ವವು ಶೇ.41.72 ರಿಂದ ಶೇ.42.08 ಕ್ಕೆ ಏರಿಕೆಯಾಗಿರುವುದು ಮತ್ತು ಪ್ರವರ್ತಕ ಭಾಗಿತ್ವವು 'ಪ್ಲೆಡ್ಜ್' ಆಗಿರದೆ ಮುಕ್ತವಾಗಿರುವುದು ಗಮನಿಸಬೇಕಾದ ಸಕಾರಾತ್ಮಕ ಅಂಶವಾಗಿದೆ.

* ಬಾಂಬೆ ರೇಯಾನ್ ಕಾರ್ಪೊರೇಷನ್ ಜನವರಿ 2018 ರಲ್ಲಿ ರೂ.125 ರ ಸಮೀಪವಿದ್ದು ಡಿಸೆಂಬರ್ ಅಂತ್ಯದಲ್ಲಿ ರೂ.8 ರ ಸಮೀಪಕ್ಕೆ ಕುಸಿದಿದೆ. ಈಗಲೂ ಕಂಪನಿಯು ಭಾರಿ ಒತ್ತಡದಲ್ಲಿದ್ದು, ಕಂಪನಿಯು ಬ್ಯಾಕ್ ಆಫ್ ಮಹಾರಾಷ್ಟ್ರದೊಂದಿಗೆ ' ಒನ್ ಟೈಮ್ ಸೆಟ್ಟ್ಲಮೆಂಟ್' ನಂತೆ ಪೂರ್ಣ ಸಾಲ ತೀರಿಸಿದೆ ಎಂದು ಹೇಳಿಕೊಂಡಿದೆ.

* ಮನ್ ಪಸಂದ್ ಬೆವೆರೇಜಸ್ ಕಂಪನಿ ಷೇರಿನ ಬೆಲೆ ಜನವರಿಯ ಆರಂಭಿಕ ವಾರದಲ್ಲಿ ರೂ.498 ರ ಸಮೀಪವಿದ್ದು ರೂ.88 ರ ಸಮೀಪ 2018 ರ ವರ್ಷಾಂತ್ಯ ಕಂಡಿದೆ. ಮಾರ್ಚ್ ತಿಂಗಳಲ್ಲಿ ರೂ.130 ರ ಸಮೀಪವಿದ್ದ ಈ ಷೇರಿನ ಬೆಲೆ ಈಗ ರೂ.4.49 ರ ವಾರ್ಷಿಕ ಕನಿಷ್ಟದಲ್ಲಿದೆ. ಈ ಕಂಪನಿ ತನ್ನ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿಲ್ಲ ಎಂಬ ಕಾರಣಕ್ಕಾಗಿ ನವೆಂಬರ್ 4 ರಿಂದ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ವಹಿವಾಟಿನಿಂದ ಅಮಾನತುಗೊಳ್ಳಲಿದೆ.
* ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಷೇರಿನ ಬೆಲೆ ಸೆಪ್ಟೆಂಬರ್ 2018 ರಲ್ಲಿ ರೂ.690 ರಲ್ಲಿದ್ದು 2018 ರ ಅಕ್ಟೊಬರ್ ತಿಂಗಳಲ್ಲಿ ರೂ.177 ರ ಸಮೀಪಕ್ಕೆ ಕುಸಿದು ರೂ.249 ರ ಸಮೀಪ 2018 ರ ವರ್ಷಾಂತ್ಯ ಕಂಡಿತ್ತು. ಈಗ ರೂ.15.90ಕ್ಕೆ ಕುಸಿದಿದೆ. ಈ ಕಂಪನಿಯು ಡಿಸೆಂಬರ್ 2018 ರ ತ್ರೈಮಾಸಿಕದ ನಂತರದ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿಲ್ಲ. ಈ ಕಂಪನಿಯ 'ಸೆಕ್ಯೂರ್ಡ್ ' ನಾನ್ ಕನ್ವರ್ಟಬಲ್ ಡಿಬೆಂಚರ್ ಗಳು ಅತೀವವಾದ ರೀತಿ ಕುಸಿತ ಕಂಡಿದ್ದು, ರೂ.1,000 ರೂ ಮುಖಬೆಲೆ ಡಿಬೆಂಚರ್ ಗಳು ರೂ.200 ರಿಂದ ರೂ.300 ಕ್ಕೂ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದ್ದು ಬೇಡಿಕೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಬೆಂಚರ್ ಬಡ್ಡಿ ಸಹ ಸರಿಯಾಗಿ ನೀಡದ ಪರಿಸ್ಥಿತಿಯಲ್ಲಿದೆ.

* ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕಂಪನಿ ಷೇರಿನ ಬೆಲೆ ಈ ವರ್ಷದ ಏಪ್ರಿಲ್ ನಲ್ಲಿ ರೂ.919ರ ಸಮೀಪವಿದ್ದಂತಹ ಷೇರು ವಿವಿಧ ಆರೋಪಗಳು, ಬೆಳವಣಿಗೆಗಳ ಕಾರಣ ಈ ತಿಂಗಳ ಮಧ್ಯಂತರದಲ್ಲಿ ರೂ.165 ರವರೆಗೂ ಕುಸಿದು ವಾರ್ಷಿಕ ಕನಿಷ್ಠದ ದಾಖಲೆ ನಿರ್ಮಿಸಿ ರೂ.250 ರ ಸಮೀಪಕ್ಕೆ ಚೇತರಿಸಿಕೊಂಡು ಸಧ್ಯ ರೂ.219 ರ ಸಮೀಪವಿದೆ.

* ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರಿನ ಬೆಲೆ ಏಪ್ರಿಲ್ ತಿಂಗಳಲ್ಲಿ ರೂ.97 ರ ಸಮೀಪವಿದ್ದು, ಅಲ್ಲಿಂದ ತನ್ನ ಕಳಪೆ ಸಾಧನೆಯಿಂದ ಷೇರಿನ ಬೆಲೆ ರೂ.14.05 ಕ್ಕೆ ಕುಸಿದು ವಾರ್ಷಿಕ ಕನಿಷ್ಠದ ದಾಖಲೆ ತಲುಪಿದೆ. ವಿಪರ್ಯಾಸವೆಂದರೆ ಈ ಬ್ಯಾಂಕ್ ನ ಪ್ರವರ್ತಕರು ಶೇ.೬.೮೧ ರಷ್ಟು ಭಾಗಿತ್ವವನ್ನು ಹೊಂದಿದ್ದಾರೆ. ಅಲ್ಲದೆ ರೂ.10.62 ಕೋಟಿ ಮೌಲ್ಯದ ಷೇರುಗಳನ್ನು ಒತ್ತೆ ಇಟ್ಟಿದ್ದಾರೆ.
ಇವುಗಳಲ್ಲದೆ ಕಂಪನಿಗಳಾದ ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಇನ್ಫ್ರಾಸ್ಟ್ರಕ್ ಚರ್ಸ್, ಕಾಕ್ಸ್ ಅಂಡ್ ಕಿಂಗ್ಸ್, ಸಿ ಜಿ ಪವರ್, ಇರೊಸ್ ಮೀಡಿಯಾ, ಐಡಿಯಾ, ಜೈನ್ ಇರ್ರೀಗೇಷನ್, ಮ್ಯಾಕ್ಲಿಯಾಡ್ ರಸ್ಸಲ್, ಗಳಂತಹ ಕಂಪನಿ ಷೇರಿನ ಬೆಳೆಗಳು ಭಾರಿ ಕುಸಿತ ಕಂಡು ಹೂಡಿಕೆದಾರರ ಬಂಡವಾಳವನ್ನು ಕರಗಿಸಿವೆ.
ಈ ರೀತಿಯ ಅಸಹಜ ಇಳಿಕೆಗಳನ್ನು ಕಂಪನಿಗಳಾದ ಭಾರತಿ ಇನ್ಫ್ರಾ ಟೆಲ್ , ಸ್ಟರ್ಲೈಟ್ ಟೆಕ್ನಾಲಜಿಸ್, ಬಯೋಕಾನ್, ಟಾಟಾ ಸ್ಟಿಲ್, ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಹಿಂದ್ರಾ ಅಂಡ್ ಮಹಿಂದ್ರಾ ದಂತಹ ಅಗ್ರಮಾನ್ಯ ಕಂಪನಿಗಳು ರಭಸದ ಏರಿಳಿತಗಳನ್ನು ಪ್ರದರ್ಶಿಸಿ ಅಲ್ಪಕಾಲೀನ ಅವಕಾಶಗಳನ್ನು ಒದಗಿಸಿವೆ.
ಕೇವಲ ಬೆಳಕಿಗೆ ಬರುವ ಅಂಶಗಳನ್ನಾಧರಿಸಿ ಹೂಡಿಕೆ ಬಗ್ಗೆ ನಿರ್ಧರಿಸುವ ಬದಲು ವಾಲ್ಯೂ ಪಿಕ್ ಅವಕಾಶಗಳನ್ನು ರಿಯಲ್ ಟೈಮ್ ಆಧಾರದ ಮೇಲೆ ನಿರ್ಧರಿಸುವುದು ಅಲ್ಪಮಟ್ಟಿನ ಸುರಕ್ಷಿತ ಶೈಲಿಯ ಆರ್ಥಿಕ ಸಾಕ್ಷರತಾ ಮಟ್ಟ ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

Read more about: stock market stocks sensex money
English summary

Financial literacy is essential today for stock market trading

Financial literacy is the need of the hour for success of the investment in present volatile Share market.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X