For Quick Alerts
ALLOW NOTIFICATIONS  
For Daily Alerts

ಏಪ್ರಿಲ್- ಅಕ್ಟೋಬರ್ ಮಧ್ಯೆ ವಿತ್ತೀಯ ಕೊರತೆ 102.4 ಪರ್ಸೆಂಟ್

|

ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳ ಮಧ್ಯದ ವಿತ್ತೀಯ ಕೊರತೆ ಪ್ರಮಾಣ 102.4 ಪರ್ಸೆಂಟ್ ದಾಟಿದೆ. ಒಂದಿಡೀ ಆರ್ಥಿಕ ವರ್ಷಕ್ಕೆ ಆಗಬಹುದು ಅಂದುಕೊಂಡಿದ್ದ ವಿತ್ತೀಯ ಕೊರತೆಯ ಅಂದಾಜು ಈ ಆರ್ಥಿಕ ವರ್ಷದಲ್ಲಿ ಅಕ್ಟೋಬರ್ ನಲ್ಲೇ ದಾಟಿಹೋಗಿದೆ. ಏಪ್ರಿಲ್- ಅಕ್ಟೋಬರ್ ಮಧ್ಯದ ವಿತ್ತೀಯ ಕೊರತೆಯು 7.2 ಲಕ್ಷ ಕೋಟಿ ರುಪಾಯಿ ಇದೆ. ಆದರೆ ಅಂದಾಜು ಮಾಡಿದ್ದು 6.48 ಲಕ್ಷ ಕೋಟಿ ರುಪಾಯಿ.

 

ಬಜೆಟ್ ನಲ್ಲಿ ಅಂದಾಜು ಮಾಡಿದ ಒಟ್ಟು ವಿತ್ತೀಯ ಕೊರತೆ 7.03 ಲಕ್ಷ ಕೋಟಿ ರುಪಾಯಿ. ಏಪ್ರಿಲ್- ಅಕ್ಟೋಬರ್ ಮಧ್ಯದ ಅವಧಿಯಲ್ಲಿ ಆದಾಯ ವ್ಯತ್ಯಾಸ 5.3 ಲಕ್ಷ ಕೋಟಿ ಇದೆ. ತೆರಿಗೆ ಸಂಗ್ರಹದಲ್ಲಿನ ದುರ್ಬಲತೆ ಕಾರಣಕ್ಕೆ ಹೀಗಾಗಿದೆ. ಆದಾಯ ಕೊರತೆ ಪ್ರಮಾಣವು 61,400 ಕೋಟಿ ರುಪಾಯಿ ಇದೆ.

 

ಆದ್ದರಿಂದ ಈ ಆರ್ಥಿಕ ವರ್ಷದಲ್ಲಿ ಅರ್ಥಿಕ ಕುಸಿತದ ಬಗ್ಗೆ ಆತಂಕ ವ್ಯಕ್ತವಾಗಿದ್ದು, ತನ್ನ ಗುರಿಯನ್ನು ತಲುಪುವ ಸಲುವಾಗಿ 1.05 ಲಕ್ಷ ಕೋಟಿ ರುಪಾಯಿ ಬಂಡವಾಳ ಹಿಂತೆಗೆತದ ಗುರಿ ಹಾಕಿಕೊಂಡಿದೆ. ಬಜೆಟ್ ವೇಳೆ ಅಂದಾಜು ಮಾಡಿದ ಪ್ರಕಾರ, ಇಡೀ ವರ್ಷಕ್ಕೆ ವಿತ್ತೀಯ ಕೊರತೆ 3.3 ಪರ್ಸೆಂಟ್ ಆಗಬಹುದು ಎನ್ನಲಾಗಿತ್ತು.

ಏಪ್ರಿಲ್- ಅಕ್ಟೋಬರ್ ಮಧ್ಯೆ ವಿತ್ತೀಯ ಕೊರತೆ 102.4 ಪರ್ಸೆಂಟ್

ಹೂಡಿಕೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಹಾಗೂ ಆರ್ಥಿಕ ಹಿಂಜರಿತದ ಕಾರಣಕ್ಕೆ ಕಾರ್ಪೊರೇಟ್ ತೆರಿಗೆ ಅನುಕೂಲ ಮಾಡಿದ್ದರಿಂದ ತೆರಿಗೆ ಸಂಗ್ರಹ ದುರ್ಬಲವಾಗಲಿದೆ. ಆದ್ದರಿಂದ ವಿತ್ತೀಯ ಕೊರತೆ ಗುರಿ ತಲುಪಲು ಆಗಿಲ್ಲ.

English summary

Fiscal Deficit Between April To October Crossed 102 Percent

Here is one more challenge for union government. Fiscal deficit between April and October crossed 102.4 percent.
Story first published: Friday, November 29, 2019, 18:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X