For Quick Alerts
ALLOW NOTIFICATIONS  
For Daily Alerts

30 ವರ್ಷಗಳ ಹಿಂದಕ್ಕೆ ತಲುಪಲಿದೆ ಭಾರತದ ಬೆಳವಣಿಗೆ ದರ: ಫಿಚ್ ರೇಟಿಂಗ್ಸ್

|

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 21 ದಿನಗಳ ಲಾಕ್‌ಡೌನ್‌ಗೆ ಒಳಗಾಗಿರುವ ಭಾರತದ ಆರ್ಥಿಕ ಬೆಳವಣಿಗೆ ಅಂದಾಜನ್ನು ಫಿಚ್ ರೇಟಿಂಗ್ಸ್ 30 ವರ್ಷಗಳ ಹಿಂದಕ್ಕೆ ತಗ್ಗಿಸಿದೆ.

2010-21ರ ಹಣಕಾಸಿನ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ದರ ಮುನ್ಸೂಚನೆಯನ್ನು ಶುಕ್ರವಾರ ಫಿಚ್ ರೇಟಿಂಗ್ಸ್ ಕನಿಷ್ಟ 2 ಪರ್ಸೆಂಟ್‌ಗೆ ಇಳಿಸಿದೆ. ಈ ಮೂಲಕ ಇದು ಕಳೆದ 30 ವರ್ಷಗಳಲ್ಲಿ ದಾಖಲಾದ ಅತ್ಯಂತ ಕನಿಷ್ಟ ದರವೆಂದು ತಿಳಿಸಿದೆ. ಕಳೆದ ಮಾರ್ಚ್‌ 21 ರಂದು ಭಾರತದ ಬೆಳವಣಿಗೆಯನ್ನು 5.6 ಪರ್ಸೆಂಟ್‌ನಿಂದ 5.1 ಪರ್ಸೆಂಟ್‌ಗೆ ತಗ್ಗಿಸಿತ್ತು. ಇದಕ್ಕೂ ಮೊದಲು 2019ರ ಡಿಸೆಂಬರ್‌ನಲ್ಲಿ 5.6 ಪರ್ಸೆಂಟ್ ಎಂದು ಗ್ರಹಿಸಿತ್ತು.

30 ವರ್ಷಗಳ ಹಿಂದಕ್ಕೆ ತಲುಪಲಿದೆ ಭಾರತದ ಬೆಳವಣಿಗೆ ದರ: ಫಿಚ್ ರೇಟಿಂಗ್ಸ

ಕೊರೊನಾವೈರಸ್ ಹರಡುವಿಕೆಯಿಂದ ಚೀನಾದಲ್ಲಿನ ಲಾಕ್‌ಡೌನ್ ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳಿಗೆ ಆರಂಭಿಕ ಅಡೆತಡೆಗಳನ್ನು ಉಂಟು ಮಾಡಿದೆ. ಅಲ್ಲದೆ ರಫ್ತು ಮೇಲೂ ಪರಿಣಾಮ ಬೀರಿದೆ. ಇದೇ ರೀತಿಯಲ್ಲಿ ಭಾರತದ ಮೇಲೂ ಪರಿಣಾಮ ಬೀರಿದೆ.

ಕೊರೊನಾ ಪರಿಣಾಮ: ಭಾರತದ ಬೆಳವಣಿಗೆ ದರವನ್ನು 5.1 ಪರ್ಸೆಂಟ್‌ಗೆ ಇಳಿಸಿದ ಫಿಚ್ ರೇಟಿಂಗ್ಸ್ಕೊರೊನಾ ಪರಿಣಾಮ: ಭಾರತದ ಬೆಳವಣಿಗೆ ದರವನ್ನು 5.1 ಪರ್ಸೆಂಟ್‌ಗೆ ಇಳಿಸಿದ ಫಿಚ್ ರೇಟಿಂಗ್ಸ್

"ಫಿಚ್ ಈ ವರ್ಷ ಜಾಗತಿಕ ಆರ್ಥಿಕ ಹಿಂಜರಿತವನ್ನು ನಿರೀಕ್ಷಿಸುತ್ತಿದೆ ಮತ್ತು ಇತ್ತೀಚೆಗೆ ಮಾರ್ಚ್ 2021 ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಭಾರತಕ್ಕೆ ನಮ್ಮ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಈ ಹಿಂದೆ 5.1 ಕ್ಕೆ ಇಳಿಸಿದ ನಂತರ, ಇದೀಗ 2 ಪರ್ಸೆಂಟ್‌ಗೆ ಇಳಿಸಿದ್ದೇವೆ. ಇದು 30 ವರ್ಷಗಳ ಹಿಂದಿನ ಕಾಲದ ಭಾರತದ ನಿಧಾನಗತಿಯ ಬೆಳವಣಿಗೆಯಾಗಿದೆ "ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಗ್ರಾಹಕರ ಖರ್ಚು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಮತ್ತು ಸೇವೆಗಳ ವಿಭಾಗವು ಹೆಚ್ಚು ಪರಿಣಾಮ ಎದುರಿಸುತ್ತದೆ ಎಂದು ಫಿಚ್ ಹೇಳಿದೆ.

English summary

Fitch Cut India Growth Forecast To 30 Year Low Of 2 Percent

Fitch rating on friday cut india gdp growth forecast 2 Percent for FY 2020-21
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X