For Quick Alerts
ALLOW NOTIFICATIONS  
For Daily Alerts

3 ತಿಂಗಳಲ್ಲಿ ಫ್ಲಿಪ್‌ಕಾರ್ಟ್‌ನಿಂದ 23,000 ಉದ್ಯೋಗ ಸೃಷ್ಟಿ

|

ಸಂಸ್ಥೆಯ ಪೂರೈಕೆ ಸಾಮರ್ಥ್ಯಗಳನ್ನು ಹೆಚ್ಚಿಸಲು ಮಾರ್ಚ್-ಮೇ ಅವಧಿಯಲ್ಲಿ ಭಾರತದಾದ್ಯಂತ ಸುಮಾರು 23,000 ಜನರನ್ನು ನೇಮಿಸಿಕೊಂಡಿದೆ ಎಂದು ಫ್ಲಿಪ್‌ಕಾರ್ಟ್‌ ಮಂಗಳವಾರ ಹೇಳಿದೆ. ಹೊಸದಾಗಿ ನೇಮಕಗೊಂಡವರಲ್ಲಿ ನೌಕರರಲ್ಲಿ ಹೆಚ್ಚಿನವರನ್ನು ಪ್ರಾಥಮಿಕವಾಗಿ ಗೋದಾಮು ಮತ್ತು ವಿತರಣಾ ಶಾಖೆಗಳಲ್ಲಿ ಇರಿಸಲಾಗಿದೆ.

ಭಾರತದಲ್ಲಿ ಬ್ಯಾಂಕಿಂಗ್ ವಹಿವಾಟಿಗೆ 6 ಬೆಸ್ಟ್‌ ಯುಪಿಐ ಆ್ಯಪ್‌ಗಳುಭಾರತದಲ್ಲಿ ಬ್ಯಾಂಕಿಂಗ್ ವಹಿವಾಟಿಗೆ 6 ಬೆಸ್ಟ್‌ ಯುಪಿಐ ಆ್ಯಪ್‌ಗಳು

ಕೋವಿಡ್-19 ಸಾಂಕ್ರಾಮಿಕ ಶುರುವಾದ ಬಳಿಕ ಇ-ಕಾಮರ್ಸ್ ವಲಯದ ವಹಿವಾಟು ಹೆಚ್ಚಾಗಿರುವುದರಿಂದ ಫ್ಲಿಪ್‌ಕಾರ್ಟ್ ಕಂಪನಿಯು ಮೂರು ತಿಂಗಳಲ್ಲಿ 23,000 ಜನರಿಗೆ ಉದ್ಯೋಗ ನೀಡಿದೆ.

3 ತಿಂಗಳಲ್ಲಿ ಫ್ಲಿಪ್‌ಕಾರ್ಟ್‌ನಿಂದ 23,000 ಉದ್ಯೋಗ ಸೃಷ್ಟಿ

''ಫ್ಲಿಪ್‌ಕಾರ್ಟ್‌ನಲ್ಲಿ ನೌಕರರ ಸುರಕ್ಷತೆಯ ಜೊತೆಗೆ, ಗ್ರಾಹಕರ ಅಗತ್ಯಗಳನ್ನು ಪೂರೈಸುವುದಕ್ಕೆ ಆದ್ಯತೆ ನೀಡಲಾಗಿದೆ. ದೇಶದಾದ್ಯಂತ ಇ-ಕಾಮರ್ಸ್ ಸೇವೆಗಳಿಗೆ ಬೇಡಿಕೆ ಹೆಚ್ಚಿದ್ದು, ಈ ಸಂದರ್ಭದಲ್ಲಿ ನಮ್ಮ ಪೂರೈಕೆ ವ್ಯವಸ್ಥೆಯನ್ನು ವಿಸ್ತರಿಸುವುದರಿಂದ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ'' ಎಂದು ಫ್ಲಿಪ್‌ಕಾರ್ಟ್‌ನ ಪೂರೈಕೆ ವ್ಯವಸ್ಥೆ ವಿಭಾಗದ ಹಿರಿಯ ಉಪಾಧ್ಯಕ್ಷ ಹೇಮಂತ್ ಬಾದ್ರಿ ತಿಳಿಸಿದ್ದಾರೆ.

ದೇಶಾದ್ಯಂತದ ಗ್ರಾಹಕರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ ಖರೀದಿ ಮಾಡುತ್ತಿರುವ ಸಮಯದಲ್ಲಿ ಉದ್ಯೋಗ ಸೃಷ್ಟಿಯಾಗಿದೆ. ಇದರಲ್ಲಿ ಅಗತ್ಯ ವಸ್ತುಗಳು ಮತ್ತು ದೈನಂದಿನ ಖರೀದಿಗಳು ಸೇರಿವೆ. ಕೋವಿಡ್-19 ಸಾಂಕ್ರಾಮಿಕ ತಡೆಗಟ್ಟಲು ಹೆಚ್ಚಿನ ರಾಜ್ಯಗಳು ಲಾಕ್‌ಡೌನ್‌ಗಳು ಮತ್ತು ಇತರ ಸಂಬಂಧಿತ ನಿರ್ಬಂಧಗಳನ್ನು ವಿಧಿಸಿವೆ. ಹೀಗಾಗಿ ಜನರು ಆನ್‌ಲೈನ್ ಶಾಪಿಂಗ್ ಮೊರೆ ಹೋಗಿದ್ದಾರೆ.

ಕಳೆದ ವರ್ಷ, ಇ-ಕಾಮರ್ಸ್ ಸಂಸ್ಥೆಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ನೇರ ಮತ್ತು ಸೀಸನ್ ಆಧಾರಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸಿತ್ತು. ಹಿಂದಿನ ವರ್ಷದಲ್ಲಿ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟದ ಚಾಲನೆಯಲ್ಲಿ, ಲಕ್ಷಾಂತರ ಪರೋಕ್ಷ ಉದ್ಯೋಗ ಸೃಷ್ಟಿಯ ಜೊತೆಗೆ 70,000 ನೇರ ಉದ್ಯೋಗಗಳಿಗೆ ಅವಕಾಶ ಕಲ್ಪಿಸಲು ಸಂಸ್ಥೆ ಸಹಾಯ ಮಾಡಿದೆ.

English summary

Flipkart Hired 23000 Fresh Employees During March-May

Flipkart on Tuesday said it has hired about 23,000 people across India during the March-May period to bolster the firm’s supply chain capabilities.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X