For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್ ಸಡಿಲಿಕೆ: ಫ್ಲಿಪ್‌ಕಾರ್ಟ್ ಗೆ ಮರಳಿದ ಶೇ 90 ರಷ್ಟು ಮಾರಾಟಗಾರರು

|

ಬೆಂಗಳೂರು: ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮ ಇ-ಕಾಮರ್ಸ್ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಕಳೆದ ಮೂರು ತಿಂಗಳಿನಿಂದ ಇ ಕಾಮರ್ಸ್‌ ಕಂಪನಿಗಳು ಬಹುತೇಕ ವ್ಯವಹಾರವನ್ನು ಸ್ಥಗೀತಗೊಳಿಸಿ, ಕೇವಲ ಅತ್ಯಾವಶ್ಯಕ ವಸ್ತುಗಳ ಮಾರಾಟ ಮಾತ್ರ ಮಾಡುತ್ತಿದ್ದವು.

 

ಈಗ ಇ-ಕಾಮರ್ಸ್‌ ಸಂಸ್ಥೆಗಳು ಸ್ಥಳೀಯ ಮಾರಾಟಗಾರರನ್ನು ಒಳಗೊಂಡಂತೆ, ಎಂಎಸ್‌ಎಂಇಗಳನ್ನು ಜೊತೆಯಾಗಿಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಸಡಿಲಿಕೆಯಾಗಿ ಇ ಕಾಮರ್ಸ್ ಕಂಪನಿಗಳು ವ್ಯವಹಾರ ಪುನರಾರಂಭಿಸಿದ ಕೆಲವೇ ವಾರಗಳ ನಂತರ, ಭಾರತದ ದೊಡ್ಡ ಇ-ಕಾಮರ್ಸ್ ಸ್ಟೋರ್ ಫ್ಲಿಪ್‌ಕಾರ್ಟ್ ಗೆ ಶೇ 90 ರಷ್ಟು ಮಾರಾಟಗಾರರು ಮರಳಿದ್ದಾರೆ.

ಏಪ್ರಿಲ್-ಜೂನ್ ಅವಧಿಯಲ್ಲಿ ಹೊಸ ಮಾರಾಟಗಾರರ ಸೈನ್ ಅಪ್‌ಗಳಲ್ಲಿ 125% ಹೆಚ್ಚಳವಾಗಿದೆ ಎಂದು ಫ್ಲಿಪ್‌ಕಾರ್ಟ್‌ ಹೇಳಿದೆ.

ನೀತಿಗಳಲ್ಲಿ ಬದಲಾವಣೆ ಮಾಡಿದೆ

ನೀತಿಗಳಲ್ಲಿ ಬದಲಾವಣೆ ಮಾಡಿದೆ

ಪ್ಲಿಪ್‌ಕಾರ್ಟ್ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ (MSMEs) ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ನಂತರ ತನ್ನ ನೀತಿಗಳಲ್ಲಿ ಬದಲಾವಣೆ ಮಾಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಸೈನ್ ಅಪ್ ಮಾಡಲು ಮತ್ತು ಆನ್‌ಲೈನ್‌ನಲ್ಲಿ ತಮ್ಮ ವ್ಯವಹಾರವನ್ನು ತೆಗೆದುಕೊಳ್ಳಲು ಹೆಚ್ಚಿನ ಎಂಎಸ್‌ಎಂಇಗಳು ಮುಂದೆ ಬಂದಿವೆ.

ಹೆಚ್ಚಿನ ಎಂಎಸ್‌ಎಂಇಗಳು

ಹೆಚ್ಚಿನ ಎಂಎಸ್‌ಎಂಇಗಳು

ಫ್ಲಿಪ್‌ಕಾರ್ಟ್‌ನಲ್ಲಿ ಸೈನ್ ಅಪ್ ಮಾಡುವ ಮತ್ತು ಆನ್‌ಲೈನ್‌ನಲ್ಲಿ ತಮ್ಮ ವ್ಯವಹಾರವನ್ನು ತೆಗೆದುಕೊಳ್ಳುವ ಹೆಚ್ಚಿನ ಎಂಎಸ್‌ಎಂಇಗಳು ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಸೇರಿವೆ.

ಅಗತ್ಯ ಉತ್ಪನ್ನಗಳಲ್ಲಿ ಹೆಚ್ಚು ತೊಡಗಿಸಿಕೊಂಡಿವೆ
 

ಅಗತ್ಯ ಉತ್ಪನ್ನಗಳಲ್ಲಿ ಹೆಚ್ಚು ತೊಡಗಿಸಿಕೊಂಡಿವೆ

ಪ್ಲಿಪ್‌ಕಾರ್ಟ್‌ನಲ್ಲಿ ನೋಂದಾಯಿಸಿಕೊಂಡಿರುವ ಎಂಎಸ್‌ಎಂಇ ಮಾರಾಟಗಾರರು ಅಗತ್ಯ ಉತ್ಪನ್ನ ವಿಭಾಗಗಳಾದ ಆಹಾರ, ಪೋಷಣೆ ಮತ್ತು ಮಹಿಳೆಯರ ಬಟ್ಟೆ, ವೈಯಕ್ತಿಕ ಆರೈಕೆ ಮತ್ತು ಗೃಹ ಬಳಕೆಯ ವಸ್ತುಗಳು ಸೇರಿದಂತೆ ದೈನಂದಿನ ಅಗತ್ಯತೆಗಳ ಉತ್ಪನ್ನಗಳಲ್ಲಿ ವ್ಯವಹರಿಸುತ್ತಾರೆ.

ಕೋವಿಡ್ ಆರೋಗ್ಯ ವಿಮೆ

ಕೋವಿಡ್ ಆರೋಗ್ಯ ವಿಮೆ

ಫ್ಲಿಪ್‌ಕಾರ್ಟ್‌ ತನ್ನಲ್ಲಿ ನೋಂದಾಯಿಸಿಕೊಂಡಿರುವ ಎಂಎಸ್‌ಎಂಇಗಳಿಗೆ ವಿವಿಧ ಯೋಜನೆಗಳನ್ನು ರೂಪಿಸಿದೆ. ಕೋವಿಡ್ ಆರೋಗ್ಯ ವಿಮೆ ಜಾರಿಗೊಳಿಸಿದೆ. ಇದು ಮಾರಾಟಗಾರರು ಹಾಗೂ ಅವರ ಕುಟುಂಬವನ್ನು ಒಳಗೊಂಡಿದೆ. ಗ್ರೋಥ್ ಕ್ಯಾಪಿಟಲ್ ಕಾರ್ಯಕ್ರಮದ ಮೂಲಕ ಸಾಲಗಳನ್ನು ನೀಡುತ್ತಿದೆ.

English summary

Flipkart Says 90% Sellers Back on Platform

After Lockdown 90 Per Cent Sellers Come Back To Flipkart also MSMEs are joining hands with Flipkart.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X