For Quick Alerts
ALLOW NOTIFICATIONS  
For Daily Alerts

ಫ್ಲಿಪ್ ಕಾರ್ಟ್ ನಿಂದ ನೈಜ ಶಾಪಿಂಗ್ ಗಾಗಿ ವಾಯ್ಸ್ ಅಸಿಸ್ಟೆಂಟ್ ಸೇವೆ

|

ಬೆಂಗಳೂರು, ಜೂನ್ 12: ಭಾರತ ಮೂಲದ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಗ್ರಾಹಕರ ಇ-ಕಾಮರ್ಸ್ ಪಯಣವನ್ನು ಮತ್ತಷ್ಟು ಸುಲಭ ಮತ್ತು ನೈಸರ್ಗಿಕವಾಗಿಸುವ ನಿಟ್ಟಿನಲ್ಲಿ ವಾಯ್ಸ್ ಅಸಿಸ್ಟೆಂಟ್ ಅನ್ನು ಪರಿಚಯಿಸಿದೆ.

ಫ್ಲಿಪ್ ಕಾರ್ಟ್ ನ ಗ್ರಾಸರಿ ಸ್ಟೋರ್ ಮತ್ತು ಸೂಪರ್ ಮಾರ್ಟ್ ನಲ್ಲಿ ಪರಿಚಯಿಸಲಾಗಿರುವ ವಾಯ್ಸ್ ಅಸಿಸ್ಟೆಂಟ್ ಬಹುಭಾಷೆಯಲ್ಲಿ ವಾಯ್ಸ್ ಕಮಾಂಡ್ ಗಳನ್ನು ಬಳಕೆ ಮಾಡುವ ಮೂಲಕ ಅತ್ಯಂತ ಸುಲಭವಾಗಿ ತಮಗೆ ಬೇಕಾದ ವಸ್ತುಗಳನ್ನು ಅನ್ವೇಷಣೆ ಮಾಡಬಹುದು ಮತ್ತು ಖರೀದಿಸಬಹುದಾಗಿದೆ. ಆರಂಭದಲ್ಲಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಈ ಸೇವೆ ಲಭ್ಯವಿದೆ.

ಫ್ಲಿಪ್ ಕಾರ್ಟ್ ನಲ್ಲೇ ಖರೀದಿಸಬಹುದು ಮೋಟಾರ್ ಇನ್ಷೂರೆನ್ಸ್ಫ್ಲಿಪ್ ಕಾರ್ಟ್ ನಲ್ಲೇ ಖರೀದಿಸಬಹುದು ಮೋಟಾರ್ ಇನ್ಷೂರೆನ್ಸ್

ವಾಯ್ಸ್ ಅಸಿಸ್ಟೆಂಟ್ ಹಿಂದಿನ ತಂತ್ರಜ್ಞಾನ: ಧ್ವನಿ ಗ್ರಹಿಕೆ, ನೈಸರ್ಗಿಕವಾದ ಭಾಷೆ ಅರ್ಥೈಸಿಕೊಳ್ಳುವುದು, ಯಂತ್ರ ತುರ್ಜುಮೆ ಮತ್ತು ಭಾರತೀಯ ಭಾಷೆಗಳಿಗೆ ಮಾತನಾಡಲು ಪಠ್ಯ ಸೇರಿದಂತೆ ಇನ್ನಿತರೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತಂತ್ರಜ್ಞಾನ ತಂಡವು ವಾಯ್ಸ್ -ಫಸ್ಟ್ ಸಂಭಾಷಣೆ ಆಧಾರಿತ ಎಐ ಪ್ಲಾಟ್ ಫಾರ್ಮ್ ಅನ್ನು ಸೃಷ್ಟಿಸಿದೆ. ಈ ಪರಿಹಾರಗಳು ಹಿಂದಿಯಂತಹ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.

ಫ್ಲಿಪ್ ಕಾರ್ಟ್ ನಿಂದ ನೈಜ ಶಾಪಿಂಗ್ ಗಾಗಿ ವಾಯ್ಸ್ ಅಸಿಸ್ಟೆಂಟ್ ಸೇವೆ

ಅಂದರೆ, ಇ-ಕಾಮರ್ಸ್ ವಿಭಾಗಗಳು ಮತ್ತು ಉತ್ಪನ್ನಗಳ ಕ್ಷೇತ್ರದಲ್ಲಿ ಆರ್ಡರ್ ಪ್ಲೇಸ್ ಮಾಡುವುದು, ಉತ್ಪನ್ನಗಳ ವಿವರಗಳನ್ನು ಅರ್ಥ ಮಾಡಿಕೊಳ್ಳುವುದು, ಉತ್ಪನ್ನಗಳಿಗೆ ಹುಡುಕಾಟ ಮಾಡುವುದು ಸೇರಿದಂತೆ ಇನ್ನಿತರೆ ಕೆಲಸಗಳನ್ನು ಈ ಪರಿಹಾರಗಳನ್ನು ನಿರ್ವಹಿಸಲಿವೆ. ದೇಸೀಯವಾಗಿ ಅಭಿವೃದ್ಧಿಪಡಿಸಿರುವ ಈ ಎಐ ಪ್ಲಾಟ್ ಫಾರ್ಮ್ ಗ್ರಾಹಕರು ಹೇಳಿದ ಅಥವಾ ಮಾತನಾಡಿದ್ದನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ.

ನೈಜವಾದ ಸಮಯದಲ್ಲಿ ಲಿಪ್ಯಂತರ, ಅನುವಾದ ಮತ್ತು ಲಿಪ್ಯಂತರಣವನ್ನು ಮಾಡಲಿದೆ ಮತ್ತು ಗ್ರಾಹಕರ ಉದ್ದೇಶವನ್ನು ಅರ್ಥ ಮಾಡಿಕೊಳ್ಳಲಿದೆ. ಈ ಮೂಲಕ ಗ್ರಾಹಕರು ಶಾಪಿಂಗ್ ಸಂಬಂಧಿತ ಸಂಭಾಷಣೆಗಳನ್ನು ವಿವಿಧ ಭಾರತೀಯ ಭಾಷೆಗಳನ್ನು ಅರ್ಥ ಮಾಡಿಕೊಳ್ಳಲಿದೆ.

ಈ ವಾಯ್ಸ್ ಅಸಿಸ್ಟೆಂಟ್ ಅನ್ನು ಸಿದ್ಧಪಡಿಸಲು ಫ್ಲಿಪ್ ಕಾರ್ಟ್ ಐದು ತಿಂಗಳಿಗೂ ಹೆಚ್ಚು ಕಾಲ ಹಲವಾರು ಪಟ್ಟಣ ಮತ್ತು ನಗರಗಳಲ್ಲಿ ಅಧ್ಯಯನ ನಡೆಸಿ ಅಲ್ಲಿರುವ ಅವಕಾಶಗಳನ್ನು ಅರ್ಥ ಮಾಡಿಕೊಂಡಿದೆ. ಫ್ಲಿಪ್ ಕಾರ್ಟ್ ಮೊಬೈಲ್ ಆ್ಯಪ್ ಮತ್ತು ಆ್ಯಂಡ್ರಾಯ್ಡ್ ಡಿವೈಸ್ ಗಳನ್ನು ಬಳಕೆ ಮಾಡುತ್ತಿರುವ ಬಳಕೆದಾರರಿಗೆ ಪ್ರಸ್ತುತ ಇಂಗ್ಲೀಷ್ ಮತ್ತು ಹಿಂದಿ ಭಾಷಿಕರಿಗೆ ಈ ವಾಯ್ಸ್ ಅಸಿಸ್ಟೆಂಟ್ ಲಭ್ಯವಿದೆ. ಇದನ್ನು ಸದ್ಯದಲ್ಲೇ ಐಒಎಸ್ ಮತ್ತು ವೆಬ್ ಸೈಟ್ ಬಳಕೆಗೂ ಪರಿಚಯಿಸಲಾಗುತ್ತದೆ.

English summary

Flipkart Unveils Voice Assistant Shopping Feature

Indian e-commerce giant Flipkart debuted a voice assistant feature on its platform that allows users to find and purchase products through voice commands in Hindi and English.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X