For Quick Alerts
ALLOW NOTIFICATIONS  
For Daily Alerts

Forbes Top 100 Richest Indians List: ಸತತ 13ನೇ ವರ್ಷ ಮುಕೇಶ್ ನಂಬರ್ 1

|

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಸತತ 13ನೇ ವರ್ಷ ಭಾರತದ ಅತ್ಯಂತ ಶ್ರೀಮಂತ ಭಾರತೀಯ ಆಗಿದ್ದಾರೆ. ಗುರುವಾರದಂದು ಫೋರ್ಬ್ಸ್ ಬಿಡುಗಡೆ ಮಾಡಿದ 2020ನೇ ಸಾಲಿನ ಟಾಪ್ 100ರ ಪಟ್ಟಿಯಿಂದ ಇದು ಗೊತ್ತಾಗಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ 2020ನೇ ಸಾಲಿನ ಟಾಪ್ 100ರ ಪಟ್ಟಿಯಲ್ಲಿ ಇರುವವರಲ್ಲಿ ಅರ್ಧದಷ್ಟು ಜನರ ಸಂಪತ್ತಿನಲ್ಲಿ ಏರಿಕೆ ಆಗಿದೆ.

ಬಿಲ್ ಇಲ್ಲದ ನಿಮ್ಮ ಬಳಿಯ ಚಿನ್ನ ಮಾರಾಟ ಮಾಡೋದು ಹೇಗೆ?ಬಿಲ್ ಇಲ್ಲದ ನಿಮ್ಮ ಬಳಿಯ ಚಿನ್ನ ಮಾರಾಟ ಮಾಡೋದು ಹೇಗೆ?

ಅವರೆಲ್ಲರ ಒಟ್ಟಾರೆ ನಿವ್ವಳ ಆಸ್ತಿ ಕಳೆದ ವರ್ಷಕ್ಕಿಂತ 14% ಹೆಚ್ಚಳವಾಗಿ, $ 517.5 ಬಿಲಿಯನ್ ಇದೆ ಎಂದು ಫೋರ್ಬ್ಸ್ ಹೇಳಿದೆ. ಈ ವರ್ಷ ಮುಕೇಶ್ ಅಂಬಾನಿ ಆಸ್ತಿಗೆ 37.3 ಬಿಲಿಯನ್ ಅಮೆರಿಕನ್ ಡಾಲರ್ ಸೇರ್ಪಡೆ ಆಗಿದೆ ಎಂದು ಉಲ್ಲೇಖಿಸಲಾಗಿದೆ. ಟಾಪ್ ಹತ್ತರ ಪಟ್ಟಿಗೆ ಸೈರಸ್ ಪೂನವಾಲಾ ಹೊಸ ಸೇರ್ಪಡೆ. ಅವರು ಪುಣೆ ಮೂಲದ ಸೆರಂ ಇನ್ ಸ್ಟಿಟ್ಯೂಟ್ ಅಧ್ಯಕ್ಷ.

Forbes Top 100 Richest Indians List: ಮುಕೇಶ್ ಅಂಬಾನಿ ನಂಬರ್ 1

ಭಾರತದ ಟಾಪ್ 20 ಶ್ರೀಮಂತರ ಹಾಗೂ ನಿವ್ವಳ ಆಸ್ತಿ
1. ಮುಕೇಶ್ ಅಂಬಾನಿ (88.7 ಬಿಲಿಯನ್ ಡಾಲರ್)

2. ಗೌತಮ್ ಅದಾನಿ (25.2 ಬಿಲಿಯನ್ ಡಾಲರ್)

3. ಶಿವ್ ನಾಡಾರ್ (20.4 ಬಿಲಿಯನ್ ಡಾಲರ್)

4. ರಾಧಾಕಿಶನ್ ದಮಾನಿ (15.4 ಬಿಲಿಯನ್ ಡಾಲರ್)

5. ಹಿಂದೂಜಾ ಸೋದರರು (12.8 ಬಿಲಿಯನ್ ಡಾಲರ್)

6. ಸೈರಸ್ ಪೂನವಾಲಾ (11.5 ಬಿಲಿಯನ್ ಡಾಲರ್)

7. ಪಲ್ಲೋಂಜಿ ಮಿಸ್ತ್ರಿ (11.4 ಬಿಲಿಯನ್ ಡಾಲರ್)

8. ಉದಯ್ ಕೊಟಕ್ (11.3 ಬಿಲಿಯನ್ ಡಾಲರ್)

9. ಗೋದ್ರೆಜ್ ಕುಟುಂಬ (11 ಬಿಲಿಯನ್ ಡಾಲರ್)

10. ಲಕ್ಷ್ಮೀ ಮಿತ್ತಲ್ (10.3 ಬಿಲಿಯನ್ ಡಾಲರ್)

11. ಸುನೀಲ್ ಮಿತ್ತಲ್ (10.2 ಬಿಲಿಯನ್ ಡಾಲರ್)

12. ದಿಲೀಪ್ ಸಾಂಘ್ವಿ (9.5 ಬಿಲಿಯನ್ ಡಾಲರ್)

13. ಬರ್ಮನ್ ಕುಟುಂಬ (9.2 ಬಿಲಿಯನ್ ಡಾಲರ್)

14. ಕುಮಾರ್ ಬಿರ್ಲಾ (8.5 ಬಿಲಿಯನ್ ಡಾಲರ್)

15. ಅಜೀಂ ಪ್ರೇಮ್ ಜೀ (7.9 ಬಿಲಿಯನ್ ಡಾಲರ್)

16. ಬಜಾಜ್ ಕುಟುಂಬ (7.4 ಬಿಲಿಯನ್ ಡಾಲರ್)

17. ಮಧುಕರ್ ಪರೇಖ್ (7.2 ಬಿಲಿಯನ್ ಡಾಲರ್)

18. ಕುಲ್ ದೀಪ್ ಮತ್ತು ಗುರ್ ಬಚನ್ ಸಿಂಗ್ ಧಿಂಗ್ರಾ (6.8 ಬಿಲಿಯನ್ ಡಾಲರ್)

19. ಸಾವಿತ್ರಿ ಜಿಂದಾಲ್ (6.6 ಬಿಲಿಯನ್ ಡಾಲರ್)

20. ಮುರಳಿ ದಿವಿ (6.5 ಬಿಲಿಯನ್ ಡಾಲರ್)

English summary

Forbes Top 100 Richest Indians List 2020: Mukesh Amabani Top 1 For Consecutive 13th Year

Fornes released top 100 richest Indian list 2020 on Thursday. Reliance Industries chairman Mukesh Ambani continued in number 1 for consecutive 13th year.
Story first published: Thursday, October 8, 2020, 17:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X