For Quick Alerts
ALLOW NOTIFICATIONS  
For Daily Alerts

2019- 20ನೇ ಹಣಕಾಸು ವರ್ಷಕ್ಕೆ ಇಪಿಎಫ್ ಬಡ್ಡಿ 8.5% ಒಂದೇ ಸಲಕ್ಕೆ ಜಮೆ

By ಅನಿಲ್ ಆಚಾರ್
|

2019- 20ನೇ ಹಣಕಾಸು ವರ್ಷದ ಸಾಲಿಗೆ ಖಾಸಗಿ ವಲಯದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಒಂದೇ ಸಲಕ್ಕೆ ಇಪಿಎಫ್ ಬಡ್ಡಿ ದರ 8.5% ಜಮೆ ಮಾಡಲಾಗುತ್ತದೆ ಎಂದು ಇಪಿಎಫ್ ಒ ಅಧಿಕಾರಿಗಳು ತಿಳಿಸಿದ್ದಾರೆ. ಷೇರು ಮಾರುಕಟ್ಟೆ ಪರಿಸ್ಥಿತಿ ಆಧರಿಸಿ, ಈಕ್ವಿಟಿ ಹೂಡಿಕೆಯನ್ನು ಮಾರಾಟ ಮಾಡಿ, ಹೆಚ್ಚುವರಿ ಮೀಸಲನ್ನು ದುಪ್ಪಟ್ಟು ಮಾಡಿ, ಆ ನಂತರ ಮೂರು ತಿಂಗಳ ಹಿಂದೆ ಅಂದಾಜು ಮಾಡಿತ್ತು.

 

ಆರ್ಥಿಕ ಸಚಿವಾಲಯದಿಂದ ಪತ್ರ ಬರೆಯಲಾಗಿದ್ದು, 2019- 20ನೇ ಸಾಲಿಗೆ 19 ಕೋಟಿ ಮಂದಿ ಇಪಿಎಫ್ ಖಾತೆದಾರರ ಖಾತೆಗೆ ಬಡ್ದಿಯನ್ನು ಜಮೆ ಮಾಡುವಂತೆ ಕೇಳಲಾಗಿದೆ. ಇನ್ನೊಂದು ವಾರದಲ್ಲಿ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಪಿಎಫ್ ಚಂದಾದಾರ ಸಿಬ್ಬಂದಿಗೆ 7 ಲಕ್ಷದ ತನಕ ಇನ್ಷೂರೆನ್ಸ್; EPFO ಘೋಷಣೆ

ಈ ಹಿಂದೆ ಕೇಂದ್ರ ಸಚಿವ ಸಂತೋಷ್ ಕುಮಾರ್ ಅವರು ನೀಡಿದ್ದ ಮಾಹಿತಿ ಪ್ರಕಾರ, ಇಪಿಎಫ್ ಖಾತೆದಾರರಿಗೆ ಎರಡ್ ಕಂತಿನಲ್ಲಿ ಬಡ್ಡಿ ಜಮೆ ಮಾಡುವುದಾಗಿ ತಿಳಿಸಲಾಗಿತ್ತು. ಇದೀಗ ಇಟಿಎಫ್ ಮಾರಾಟದಿಂದ ಉತ್ತಮ ಮೊತ್ತ ಬಂದಿದೆ. ನಮ್ಮ ಬಳಿ ಈಗ ಸಾವಿರ ಕೋಟಿ ರುಪಾಯಿಯಷ್ಟು ಹೆಚ್ಚುವರಿ ಹಣ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2019- 20ನೇ ಹಣಕಾಸು ವರ್ಷಕ್ಕೆ ಇಪಿಎಫ್ ಬಡ್ಡಿ 8.5% ಒಂದೇ ಸಲಕ್ಕೆ ಜಮೆ

ಈ ಹಿಂದೆ ಮಾರ್ಚ್ ತಿಂಗಳಲ್ಲಿ ಇಟಿಎಫ್ ಹೂಡಿಕೆ ಮಾರಾಟಕ್ಕೆ ಇಪಿಎಫ್ ಒ ನಿರ್ಧರಿಸಿತ್ತು. ಆದರೆ ಮಾರ್ಕೆಟ್ ಸ್ಥಿತಿ ದುರ್ಬಲವಾಗಿದೆ ಎಂಬ ಕಾರಣಕ್ಕೆ ಮುಂದೂಡಲಾಗಿತ್ತು. ಸದ್ಯಕ್ಕೆ ಇಪಿಎಫ್ ಮೇಲೆ ನೀಡುತ್ತಿರುವ ಬಡ್ಡಿ ದರ ಏಳು ವರ್ಷಗಳ ಕನಿಷ್ಠ ಮಟ್ಟದ್ದಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 8.65% ನೀಡಲಾಗಿತ್ತು.

English summary

EPF Interest Of 8.5% To Be Credited At One Go For FY 2019-20

EPFO to be credited FY 2019- 20 EPF interest 8.5 percent at one go.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X