ಗ್ಲ್ಯಾಂಡ್ ಫಾರ್ಮಾದ ಇನಿಷಿಯಲ್ ಪಬ್ಲಿಕ್ ಆಫರ್ (ಐಪಿಒ) ಸೋಮವಾರದಿಂದ (ನವೆಂಬರ್ 9, 2020) ಆರಂಭ ಆಗಲಿದೆ. ಈ ಮೂಲಕ ಕಂಪೆನಿಯು ಪ್ರಾಥಮಿಕ ಮಾರುಕಟ್ಟೆಯಿಂದ 6480 ಕೋಟಿ ರುಪಾಯಿ ಸಂಗ್ರಹಿಸಲು ಮುಂದಾಗಿದೆ. ಹಲವು ವಿಶ್ಲೇಷಕರು ಅಭಿಪ್ರಾಯ ಪಡುವಂತೆ, ಕಂಪೆನಿಯ ಬೆಳವಣಿಗೆ ಹಾದಿ ಉತ್ತಮವಾಗಿದೆ. ಆದ್ದರಿಂದ ಐಪಿಒಗೆ ಸಬ್ ಸ್ಕ್ರೈಬ್ ಮಾಡಬಹುದು.
ಗ್ಲ್ಯಾಂಡ್ ಫಾರ್ಮಾದ ಐಪಿಒ ನವೆಂಬರ್ 9, 2020ರಂದು ಆರಂಭವಾಗಿ, ಹನ್ನೊಂದನೇ ತಾರೀಕು ಮುಕ್ತಾಯ ಆಗುತ್ತದೆ. ಪ್ರತಿ ಷೇರಿಗೆ 1490ರಿಂದ 1500 ರುಪಾಯಿ ದರ ನಿಗದಿ ಮಾಡಲಾಗಿದೆ. ಕನಿಷ್ಠ ಹತ್ತು ಷೇರಿಗೆ ಅಪ್ಲೈ ಮಾಡಲೇಬೇಕು. ಅದರ ಮೇಲೆ ತಲಾ ಹತ್ತರಂತೆ ಅರ್ಜಿ ಹಾಕಿಕೊಳ್ಳಬಹುದು. ರೀಟೇಲ್ ಹೂಡಿಕೆದಾರರು ಗರಿಷ್ಠ ನೂರಾ ಮೂವತ್ತು ಷೇರುಗಳಿಗೆ ಮಾತ್ರ ಅರ್ಜಿ ಹಾಕಿಕೊಳ್ಳಲು ಸಾಧ್ಯ.
ಪ್ರವರ್ತಕರಾದ ಫೋಸನ್ ಸಿಂಗಾಪೂರ್ 1,54,94,949 ಷೇರುಗಳ ತನಕ ಮಾರಾಟ ಮಾಡುತ್ತಾರೆ. ಮತ್ತು ಇತರ ಷೇರುದಾರರು 8,33,333 ಷೇರುಗಳ ತನಕ ಮಾರಾಟ ಮಾಡುತ್ತಾರೆ.

ನವಂಬರ್ 17ನೇ ತಾರೀಕಿನಂದು ವಿತರಣೆ ಮಾಡುವ ಸಂಬಂಧವಾಗಿ ಯಾವುದನ್ನು ಆಧಾರವಾಗಿಟ್ಟುಕೊಳ್ಳಬೇಕು ಎಂಬುದು ಅಂತಿಮವಾಗಬಹುದು. 18ರಿಂದ ಮರುಪಾವತಿ ಶುರು ಆಗಬಹುದು. ಈ ಮಧ್ಯೆ ನವೆಂಬರ್ 19ರಂದು ಡಿಮ್ಯಾಟ್ ಖಾತೆಗೆ ಷೇರು ಜಮೆ ಆಗುಮ ಸಾಧ್ಯತೆ ಇದ್ದು, ನವೆಂಬರ್ 20ನೇ ತಾರೀಕಿನಂದು ಷೇರು ಮಾರ್ಕೆಟ್ ನಲ್ಲಿ ಲಿಸ್ಟಿಂಗ್ ಸಾಧ್ಯತೆ ಇದೆ.


Click it and Unblock the Notifications