For Quick Alerts
ALLOW NOTIFICATIONS  
For Daily Alerts

ಜಾಗತಿಕ ಆರ್ಥಿಕತೆ ಅಂದುಕೊಂಡಿದ್ದಕ್ಕಿಂತ ಹೀನ: ಐಎಂಎಫ್

|

ವಾಷಿಂಗ್ಟನ್, ನ. 14: ಕೋವಿಡ್ ನಂತರ ಜಾಗತಿಕ ಆರ್ಥಿಕತೆ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಯಾಕೂ ಕೈಗೂಡಿದಂತೆ ಕಾಣುತ್ತಿಲ್ಲ. ಕೋವಿಡ್ ನಂತರ ಆರ್ಥಿಕತೆಗಳು ಚೇತರಿಕೆಯ ಹಾದಿಯಲ್ಲಿದ್ದರೂ ರಷ್ಯಾ ಉಕ್ರೇನ್ ಯುದ್ಧ ದೊಡ್ಡ ತಡೆಯಾಗಿರುವುದು ಹೌದು. ಜಾಗತಿಕ ಹಿಂಜರಿತದ ಪರಿಸ್ಥಿತಿ ಸಮೀಪವೇ ಇದೆ ಎಂದು ಹಲವು ಆರ್ಥಿಕ ತಜ್ಞರು ಹೇಳಿರುವುದುಂಟು. ಕಳೆದ ವಾರ ಅಂದಾಜು ಮಾಡಿದ್ದಕ್ಕಿಂತಲೂ ಹೆಚ್ಚು ಕಳವಳಕಾರಿ ಎನಿಸುವಷ್ಟು ಜಾಗತಿಕ ಆರ್ಥಿಕ ದುಸ್ಥಿತಿ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಭಿಪ್ರಾಯಪಟ್ಟಿದೆ.

ಇತ್ತೀಚಿನ ಕೆಲ ತಿಂಗಳುಗಳಿಂದ ಪರ್ಚೇಸಿಂಗ್ ಮ್ಯಾನೇಜರ್ಸ್ ಸಮೀಕ್ಷೆಗಳು ಆರ್ಥಿಕ ಮುಗ್ಗಟ್ಟಿನ ಬಗ್ಗೆ ಸತತವಾಗಿ ಎಚ್ಚರಿಸುತ್ತಾ ಬಂದಿವೆ. ಈ ಪಿಎಂಐಗಳನ್ನು ಉಲ್ಲೇಖಿಸುತ್ತಾ ಐಎಂಎಫ್ ಜಾಗತಿಕ ಆರ್ಥಿಕ ಭವಿಷ್ಯತ್ತಿನ ಬಗ್ಗೆ ವ್ಯಾಕುಲಗಂಡಿದೆ. 2023ರ ಕ್ಯಾಲೆಂಡರ್ ವರ್ಷದಲ್ಲಿ ಜಾಗತಿಕ ಆರ್ಥಿಕತೆ ಶೇ. 2.7ರಷ್ಟು ಬೆಳವಣಿಗೆ ಸಾಧಿಸಬಹುದು ಎಂದು ಕಳೆದ ತಿಂಗಳು ಐಎಂಎಫ್ ಹೇಳಿತ್ತು. ಕೆಲ ತಿಂಗಳ ಹಿಂದೆ ಆರ್ಥಿಕ ಬೆಳವಣಿಗೆ ಶೇ. 2.9 ಅಗಬಹುದು ಎಂದು ಹೇಳಿದ್ದ ಐಎಂಎಫ್ ಈಗ ತನ್ನ ಅಂದಾಜನ್ನು ಕಡಿಮೆ ಮಾಡಿರುವುದು ಕುತೂಹಲ ಮೂಡಿಸುತ್ತದೆ.

ಕ್ರಿಪ್ಟೋ ಕರ್ಮಕಾಂಡ; ಎಫ್‌ಟಿಎಕ್ಸ್ ದಿವಾಳಿ ಹಂತಕ್ಕೆ ಬಂದ ಕಥೆಕ್ರಿಪ್ಟೋ ಕರ್ಮಕಾಂಡ; ಎಫ್‌ಟಿಎಕ್ಸ್ ದಿವಾಳಿ ಹಂತಕ್ಕೆ ಬಂದ ಕಥೆ

ಹಣದುಬ್ಬರ ನಿಯಂತ್ರಣಕ್ಕೆಂದು ತೆಗೆದುಕೊಳ್ಳಲಾಗುತ್ತಿರುವ ಬಿಗಿ ಹಣಕಾಸು ನೀತಿ, ಚೀನಾದ ದುರ್ಬಲ ಬೆಳವಣಿಗೆ, ಉಕ್ರೇನ್ ರಷ್ಯಾ ಯುದ್ಧದ ಪರಿಣಾಮವಾಗಿ ಸರಬರಾಜು ವ್ಯವಸ್ಥೆಗೆ ಆಗುತ್ತಿರುವ ಧಕ್ಕೆ ಮತ್ತು ಆಹಾರ ಅಭದ್ರತೆಯ ಸ್ಥಿತಿ ಇವು ಜಾಗತಿಕ ಆರ್ಥಿಕತೆಗೆ ಹಿನ್ನಡೆ ತರುತ್ತಿದೆ. ಅದರಲ್ಲೂ ಯೂರೋಪ್‌ನಲ್ಲಿ ಇದು ಹೆಚ್ಚು ಆತಂಕಕಾರಿ ಎನಿಸುವಷ್ಟಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.

 ಜಾಗತಿಕ ಆರ್ಥಿಕತೆ ಅಂದುಕೊಂಡಿದ್ದಕ್ಕಿಂತ ಹೀನ: ಐಎಂಎಫ್

ಪಿಎಂಐ ಸೂಚಿ:

ಇಂಡೋನೇಷ್ಯಾದಲ್ಲಿ ನಡೆಯಲಿರುವ ಜಿ20 ನಾಯಕರ ಸಮಾವೇಶದ ನಿಮಿತ್ತವಾಗಿ ಐಎಂಎಫ್ ವಿಶೇಷ ಲೇಖನ ಸಿದ್ಧಪಡಿಸಿ ಜಾಗತಿಕ ಆರ್ಥಿಕತೆಯ ಭವಿಷ್ಯದ ಬಗ್ಗೆ ತನ್ನ ವಿಚಾರಗಳನ್ನು ಹಂಚಿಕೊಂಡಿದೆ. ಪರ್ಚೇಸಿಂಗ್ ಮ್ಯಾನೇಜರ್ ಸೂಚಿಗಳ ಪ್ರಕಾರ ಜಿ20 ದೇಶಗಳ ಆರ್ಥಿಕತೆ ಸೂಕ್ಷ್ಮ ಸ್ಥಿತಿಯಲ್ಲಿದೆ. ಇಲ್ಲಿ ಹಣದುಬ್ಬರ ಹೆಚ್ಚು ಮಟ್ಟದಲ್ಲಿ ಇದ್ದು, ಆರ್ಥಿಕ ಚಟುವಟಿಕೆ ಕುಂಠಿತಗೊಂಡಿರುವುದನ್ನು ಸೂಚಿಸುತ್ತಿದೆ.

ಭಾರತ ಯುಎಸ್‌ಗೆ ಅತೀ ಮುಖ್ಯ ದೇಶ, 'ಫ್ರೆಂಡ್‌ಶೋರಿಂಗ್': ಯುಎಸ್ ನಾಯಕಿಭಾರತ ಯುಎಸ್‌ಗೆ ಅತೀ ಮುಖ್ಯ ದೇಶ, 'ಫ್ರೆಂಡ್‌ಶೋರಿಂಗ್': ಯುಎಸ್ ನಾಯಕಿ

ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸ್ ಕ್ಷೇತ್ರದ ಚಟುವಟಿಕೆಗಳು ಯಾವ ಪ್ರಮಾಣದಲ್ಲಿ ನಡೆಯುತ್ತಿವೆ ಎಂಬುದನ್ನು ಪರ್ಚೇಸಿಂಗ್ ಮ್ಯಾನೇಜರ್ ಇಂಡೆಕ್ಸ್ ಅಳೆಯುತ್ತದೆ. ಜಿ20 ದೇಶಗಳಲ್ಲಿ ಪಿಎಂಐ ಇಂಡೆಕ್ಸ್ ಬಹಳ ಕಡಿಮೆ ಇದೆ.

"ಜಾಗತಿಕ ಆರ್ಥಿಕತೆ ಎದುರಿಸುತ್ತಿರುವ ಸವಾಲು ಬಹಳ ಕ್ಲಿಷ್ಟಕರವಾದುದು. ಈಗ ದುರ್ಬಲ ಆರ್ಥಿಕ ಸೂಚಕಗಳು ಇನ್ನಷ್ಟು ಸವಾಲುಗಳತ್ತ ಬೊಟ್ಟು ಮಾಡುತ್ತಿವೆ" ಎಂದು ಹೇಳಿರುವ ಐಎಂಎಫ್, ಸದ್ಯದ ಆರ್ಥಿಕ ನೀತಿ ಪರಿಸ್ಥಿತಿ ಅನಿಶ್ಚಿತ ರೀತಿಯಲ್ಲಿದೆ ಎಂದು ಅಭಿಪ್ರಾಯಪಟ್ಟಿದೆ.

 ಜಾಗತಿಕ ಆರ್ಥಿಕತೆ ಅಂದುಕೊಂಡಿದ್ದಕ್ಕಿಂತ ಹೀನ: ಐಎಂಎಫ್

ಇನ್ನಷ್ಟು ಕ್ಲಿಷ್ಟಕರ

ಯೂರೋಪ್‌ನಲ್ಲಿ ಇಂಧನ ಬಿಕ್ಕಟ್ಟು ಉದ್ಭವಿಸಿರುವುದು ಹಣದುಬ್ಬರ ಹೆಚ್ಚಳ ಮತ್ತು ಆರ್ಥಿಕತೆ ಹಿನ್ನಡೆಗೆ ಕಾರಣವಾಗುತ್ತಿದೆ. ಹಣದುಬ್ಬರ ದೀರ್ಘ ಕಾಲದವರೆಗೂ ಇದ್ದರೆ ಬಡ್ಡಿ ದರ ಇತ್ಯಾದಿ ಬಿಗಿ ಹಣಕಾಸು ನೀತಿ ಜಾರಿಗೊಳ್ಳುತ್ತದೆ. ಇದರಿಂದ ಜಾಗತಿಕ ಹಣಕಾಸು ಪರಿಸ್ಥಿತಿ ಇನ್ನಷ್ಟು ಕ್ಲಿಷ್ಟಗೊಳ್ಳುತ್ತದೆ. ಇದರಿಂದ ದುರ್ಬಲ ಆರ್ಥಿಕತೆಗಳಿಗೆ ಸಾಲದ ಸಮಸ್ಯೆ ಹೆಚ್ಚಾಗುತ್ತದೆ. ಜೊತೆಗೆ ಹವಾಮಾನ ವೈಪರೀತ್ಯದ ಘಟನೆಗಳು ಜಾಗತಿಕವಾಗಿ ಆರ್ಥಿಕತೆಗೆ ಇನ್ನಷ್ಟು ಹಿನ್ನಡೆಗೆ ತಳ್ಳುತ್ತವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.

English summary

Global Economic Outlook Gloomier Than IMF Projected Recently

International Monetary Fund has said the global economic scenario looks gloomier than what is projected last moth. It has said this in the blog it prepared for G20 summit at Indonesia.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X