For Quick Alerts
ALLOW NOTIFICATIONS  
For Daily Alerts

2020ರಲ್ಲಿ ಜಾಗತಿಕ ರಿಸೆಷನ್; ವಾರ್ನಿಂಗ್ ಕೊಟ್ಟಿದೆ ರಿಸರ್ವ್ ಬ್ಯಾಂಕ್

|

ಜಾಗತಿಕ ಮಟ್ಟದ ಉತ್ಪಾದನೆ, ಪೂರೈಕೆ ಜಾಲ, ವ್ಯಾಪಾರ ಹಾಗೂ ಪ್ರವಾಸೋದ್ಯಮಕ್ಕೆ COVID- 19 ಭಾರೀ ಪೆಟ್ಟು ನೀಡುತ್ತದೆ. 2020ರಲ್ಲಿ ಜಾಗತಿಕ ಆರ್ಥಿಕ ಕುಸಿತ ಉಂಟಾಗಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಹೇಳಿದೆ. ಭಾರತದ ಬೆಳವಣಿಗೆಯ ಮೇಲೂ ಕೆಟ್ಟ ಪರಿಣಾಮ ಇರಲಿದ್ದು, ಹಣದುಬ್ಬರವನ್ನು ಸರಿದೂಗಿಸಬೇಕಾಸ ಅಪಾಯ ಇದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

2020ರಲ್ಲಿ ಜಾಗತಿಕ ಆರ್ಥಿಕ ಕುಸಿತ ಆಗಬಹುದು. ಕೊರೊನಾ ನಂತರ ಮುಂದೇನು ಎಂಬುದಕ್ಕೆ ಉತ್ತರವಾಗಿ ಅದು ಕಾಣಿಸುತ್ತಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆ ಆಗುತ್ತಿದೆ. ಇದು ಒಂದು ವೇಳೆ ಸ್ಥಿರವಾದರೆ ದೇಶದ ವ್ಯಾಪಾರ- ವ್ಯವಹಾರ ಸ್ಥಿರವಾಗಬಹುದು. ಆದರೆ ಇದರಿಂದ ದೊಡ್ಡ ಮಟ್ಟದ ಲಾಭ ಆಗಲಿಕ್ಕಿಲ್ಲ. ಲಾಕ್ ಡೌನ್ ಹಾಗೂ ಬಾಹ್ಯ ಬೇಡಿಕೆ ಇಳಿದಿರುವುದರಿಂದ ಲಾಭ ಆಗಲಿಕ್ಕಿಲ್ಲ.

ಆದಾಯ ತೆರಿಗೆ, ಜಿಎಸ್ ಟಿ, ಕಸ್ಟಮ್ಸ್ ರೀಫಂಡ್ ಗೆ ಮುಂದಾದ ಐಟಿ ಇಲಾಖೆಆದಾಯ ತೆರಿಗೆ, ಜಿಎಸ್ ಟಿ, ಕಸ್ಟಮ್ಸ್ ರೀಫಂಡ್ ಗೆ ಮುಂದಾದ ಐಟಿ ಇಲಾಖೆ

ಕೊರೊನಾ ಎಷ್ಟು ಬೇಗ ನಿಯಂತ್ರಣಕ್ಕೆ ಬರುತ್ತದೋ ಅದರ ಮೇಲೆ ದೇಶೀಯ ಪ್ರಗತಿ ಅವಲಂಬಿಸಿದೆ. ಜತೆಗೆ ಆರ್ಥಿಕ ಚಟುವಟಿಕೆ ಕೂಡ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಆರ್ ಬಿಐ ಹಾಗೂ ಸರ್ಕಾರ ತೆಗೆದುಕೊಂಡ ಆರ್ಥಿಕ ಉತ್ತೇಜನ ಕ್ರಮಗಳು ದೇಶೀಯ ಬೇಡಿಕೆ ಮೇಲಿನ ಪ್ರತಿಕೂಲ ಪರಿಣಾಮ ತಡೆಯುತ್ತದೆ.

2020ರಲ್ಲಿ ಜಾಗತಿಕ ರಿಸೆಷನ್; ವಾರ್ನಿಂಗ್ ಕೊಟ್ಟಿದೆ ರಿಸರ್ವ್ ಬ್ಯಾಂಕ್

ಕಚ್ಚಾ ತೈಲ ಬೆಲೆ ಕಡಿಮೆ ಇರುವುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುವ ಸಾಧ್ಯತೆ ಇಲ್ಲ. ಹಣದುಬ್ಬರ ದರವು ನಿಯಂತ್ರಣದಲ್ಲಿ ಇರುತ್ತದೆ. ಮುಂಗಾರು ಸಾಮಾನ್ಯವಾಗಿ ಆಗಬಹುದು ಹಾಗೂ ಯಾವುದೇ ಸಮಸ್ಯೆ ಆಗಲಿಕ್ಕಿಲ್ಲ ಎನ್ನುವ ಕಾರಣಕ್ಕೆ 2021ರ ಆರ್ಥಿಕ ವರ್ಷದಲ್ಲಿ ಹಣದುಬ್ಬರ ದರವು 3.6ರಿಂದ 3.8 ಪರ್ಸೆಂಟ್ ಇರಬಹುದು ಎಂದು ಆರ್ ಬಿಐ ಅಂದಾಜಿಸಿದೆ.

English summary

Global Economy Fall In To Recession In 2020: RBI

Global economy fall in to recession in 2020, warned by RBI. Here is the complete details.
Story first published: Thursday, April 9, 2020, 14:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X