For Quick Alerts
ALLOW NOTIFICATIONS  
For Daily Alerts

IPO- ಗ್ಲೋಬಲ್ ಹೆಲ್ತ್ ಐಪಿಒ: ಮೊದಲ ದಿನವೇ ಉತ್ತಮ ಸ್ಪಂದನೆ; ಶೇ. 26 ಸಬ್‌ಸ್ಕ್ರಿಪ್ಷನ್

|

ಮುಂಬೈ, ನ. 4: ಇಂದು ಆರಂಭವಾದ ಗ್ಲೋಬಲ್ ಹೆಲ್ತ್ ಸಂಸ್ಥೆಯ ಆರಂಭಿಕ ಸಾರ್ವಜನಕ ಕೊಡುಗೆಗೆ (ಐಪಿಒ) ಉತ್ತಮ ಸ್ಪಂದನೆ ಸಿಕ್ಕಿದೆ. ಮೊದಲ ದಿನವೇ ಶೇ. 26ರಷ್ಟು ಸಬ್‌ಸ್ಕ್ರಿಪ್ಷನ್ ಆಗಿದೆ. ಇಂದು ಶುಕ್ರವಾರ ಆರಂಭವಾದ ಐಪಿಒ ಆಫರ್ ನವೆಂಬರ್ 7, ಸೋಮವಾರದವರೆಗೂ ಇರಲಿದೆ. ಮೇದಾಂತ ಬ್ರ್ಯಾಂಡ್‌ನ ಆಸ್ಪತ್ರೆಗಳನ್ನು ಗ್ಲೋಬಲ್ ಹೆಲ್ತ್ ಸಂಸ್ಥೆ ನಿರ್ವಹಿಸುತ್ತದೆ. 2 ಸಾವಿರ ರೂಪಾಯಿಗೂ ಹೆಚ್ಚು ಬಂಡವಾಳ ಸಂಗ್ರಹಿಸುವ ಗುರಿಯೊಂದಿಗೆ ಗ್ಲೋಬಲ್ ಹೆಲ್ತ್ ಇಂದು ಐಪಿಒ ತೆರೆದಿದೆ.

 

ಐಪಿಒಗೆ ಪೂರ್ವಭಾವಿಯಾಗಿ ಆಂಕರ್ ಇನ್ವೆಸ್ಟರ್ಸ್, ಅಂದರೆ ಸಾಂಸ್ಥಿಕ ಹೂಡಿಕೆದಾರರಿಂದ ಗ್ಲೋಬಲ್ ಹೆಲ್ತ್ 662 ಕೋಟಿ ರೂ ಬಂಡವಾಳ ಪಡೆದಿದೆ. ಇದೀಗ ಐಪಿಒ ಮೂಲಕ 2,206 ಕೋಟಿ ರೂ ಗಳಿಸುವ ಇರಾದೆಯಲ್ಲಿದೆ. ಐದು ಕೋಟಿಗೂ ಹೆಚ್ಚು ಈಕ್ವಿಟಿ ಷೇರುಗಳನ್ನು ಸಂಸ್ಥೆ ಮಾರುತ್ತಿದೆ. ಮೊದಲ ದಿನದ ಆರಂಭಿಕ ಹಂತದಲ್ಲೇ ಶೇ. 25ಕ್ಕಿಂತ ಹೆಚ್ಚು ಸಬ್‌ಸ್ಕ್ರಿಪ್ಷನ್ ಪಡೆಯುವಲ್ಲಿ ಯಶಸ್ವಿಯಾಗಿದೆ.

ಗ್ಲೋಬಲ್ ಹೆಲ್ತ್ ಐಪಿಒ ವಿವರ:

ಐಪಿಒ ಅವಧಿ: 2022, ನವೆಂಬರ್ 3-7
ಫೇಸ್ ವ್ಯಾಲ್ಯೂ: ಪ್ರತೀ ಷೇರಿಗೆ 2 ರೂ
ಷೇರು ಬೆಲೆ: ಪ್ರತೀ ಷೇರಿಗೆ ರೂ 319ರಿಂದ 336
ಲಾಟ್ ಗಾತ್ರ: 44 ಷೇರುಗಳು
ಷೇರು ಸಂಖ್ಯೆ: 5,07,61,000
ಒಟ್ಟು ಮೌಲ್ಯ: 2205.57 ಕೋಟಿ ರೂಪಾಯಿ

ಗ್ಲೋಬಲ್ ಹೆಲ್ತ್ ಐಪಿಒ: ಮೊದಲ ದಿನವೇ ಉತ್ತಮ ಸ್ಪಂದನೆ

ಒಳ್ಳೆಯ ರೇಟಿಂಗ್

ಹಲವು ವಿಶ್ಲೇಷಕರು ಗ್ಲೋಬಲ್ ಹೆಲ್ತ್ ಐಪಿಒ ಆಫರ್ ಬಗ್ಗೆ ಸಕಾರಾತ್ಮಕವಾಗಿ ರೇಟಿಂಗ್ ನೀಡಿವೆ. ಜಿಯೋಜಿತ್, ಆಶಿಕಾ ರೀಸರ್ಚ್ ಮೊದಲಾದ ಸಂಸ್ಥೆಗಳು ಗ್ಲೋಬಲ್ ಹೆಲ್ತ್ ಐಪಿಒದಲ್ಲಿ ಷೇರುಗಳನ್ನು ಕೊಳ್ಳಬಹುದು ಎಂದು ಶಿಫಾರಸು ಮಾಡಿವೆ.

ಗ್ಲೋಬಲ್ ಹೆಲ್ತ್ ಸಂಸ್ಥೆಗೆ ಆನಂದ್ ಇನ್ವೆಸ್ಟ್‌ಮೆಂಟ್ಸ್, ಸುಮನ್ ಸಚ್‌ದೇವ, ಕೆರಿಲೈಲ್ ಗ್ರೂಪ್ ಮತ್ತು ಟೆಮಾಸೆಕ್ ಮೊದಲಾದ ಕೆಲ ಖಾಸಗಿ ಈಕ್ವಿಟಿ ಹೂಡಿಕೆದಾರರ ಬಲ ಇದೆ. ಮೇದಾಂತ ಬ್ರ್ಯಾಂಡ್ ಅಡಿಯಲ್ಲಿ ಇಂದೋರ್, ಲಕ್ನೋ, ರಾಂಚ ಮತ್ತು ಪಾಟ್ನಾದಲ್ಲಿ ಐದು ಆಸ್ಪತ್ರೆಗಳನ್ನು ನಿರ್ವಹಿಸುತ್ತಿದೆ. ನೋಯಿಡಾದಲ್ಲಿ ಇನ್ನೊಂದು ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ.

ಕಳೆದ ಹಣಕಾಸು ವರ್ಷದಲ್ಲಿ ಗ್ಲೋಬಲ್ ಹೆಲ್ತ್ ಸಂಸ್ಥೆ 2,205.8 ಕೋಟಿ ರೂ ಆದಾಯ ಮತ್ತು 196.2 ಕೋಟಿ ರೂ ಲಾಭ ತೋರಿಸಿದೆ.

English summary

Global Health (Medanta) IPO Gets Huge Response On 1st Day, Over 26pc Subscribed

The Initial Public Offering (IPO) of Global Health, which runs hospitals under the Medanta brand, received a good response with 26% subscription on Day 1 of the IPO.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X