For Quick Alerts
ALLOW NOTIFICATIONS  
For Daily Alerts

2020-21ರಲ್ಲಿ ಚಿನ್ನದ ಆಮದು ಭಾರೀ ಏರಿಕೆ: ಶೇಕಡಾ 22.58ರಷ್ಟು ಹೆಚ್ಚಳ

|

2019-20ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ, 2020-21ರ ಹಣಕಾಸು ವರ್ಷದಲ್ಲಿ ಚಿನ್ನದ ಆಮದಿನಲ್ಲಿ ಭಾರಿ ಏರಿಕೆ ಕಂಡುಬಂದಿದೆ. 2020-21ರಲ್ಲಿ ಚಿನ್ನದ ಆಮದು ಶೇ. 22.58 ರಷ್ಟು ಬೆಳವಣಿಗೆಯಾಗಿದೆ.

 

2020-21ರಲ್ಲಿ ಭಾರತಕ್ಕೆ ಒಟ್ಟು 34.6 ಬಿಲಿಯನ್ ಅಂದರೆ ಸುಮಾರು 2.54 ಲಕ್ಷ ಕೋಟಿ ರೂಪಾಯಿಗಳಷ್ಟು ಮೌಲ್ಯದ ಚಿನ್ನವು ಬಂದಿತು. ಇದಕ್ಕೂ ಮೊದಲು 2019-20ರಲ್ಲಿ ದೇಶದಲ್ಲಿ. 28.23 ಬಿಲಿಯನ್ (ಸುಮಾರು 2 ಲಕ್ಷ ಕೋಟಿ ರೂ.) ಚಿನ್ನ ಆಮದಾಗಿತ್ತು.

 
2020-21ರಲ್ಲಿ ಚಿನ್ನದ ಆಮದು ಭಾರೀ ಏರಿಕೆ: ಶೇಕಡಾ 22.58ರಷ್ಟು ಹೆಚ್ಚಳ

ಒಂದೆಡೆ ಚಿನ್ನದ ಆಮದಿನಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಮತ್ತೊಂದೆಡೆ, ಬೆಳ್ಳಿ ಆಮದು ಗಮನಾರ್ಹವಾಗಿ ಕುಸಿದಿದೆ. ಕಳೆದ ಹಣಕಾಸು ವರ್ಷದಲ್ಲಿ ಬೆಳ್ಳಿ ಆಮದು ಶೇಕಡಾ 71 ರಷ್ಟು ಇಳಿದು ಸುಮಾರು 791 ದಶಲಕ್ಷ ಡಾಲರ್‌ಗೆ ತಲುಪಿದೆ. ಆದಾಗ್ಯೂ, ಚಿನ್ನದ ಆಮದಿನಲ್ಲಿ ಬಲವಾದ ಏರಿಕೆಯ ಹೊರತಾಗಿಯೂ, 2020-21ರ ಅವಧಿಯಲ್ಲಿ ದೇಶದ ವ್ಯಾಪಾರ ಕೊರತೆ 98.56 ಬಿಲಿಯನ್ ಆಗಿದ್ದು, 2019-20ರಲ್ಲಿ 161.3 ಬಿಲಿಯನ್ ಆಗಿತ್ತು.

ಬಿಜೆನೆಸ್ ವರ್ಲ್ಡ್‌ ವರದಿಯ ಪ್ರಕಾರ, ''ದೇಶೀಯ ಬೇಡಿಕೆ ಹೆಚ್ಚುತ್ತಿರುವ ಕಾರಣ ಚಿನ್ನದ ಆಮದು ಹೆಚ್ಚುತ್ತಿದೆ'' ಎಂದು ಜೆಮ್ ಮತ್ತು ಜ್ಯುವೆಲ್ಲರಿ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ಅಧ್ಯಕ್ಷ ಕಾಲಿನ್ ಶಾ ಹೇಳಿದ್ದಾರೆ.

ಅಲ್ಲದೆ, ಮುಂಬರುವ ದಿನಗಳಲ್ಲಿ ಅಕ್ಷಯ ತೃತೀಯ ಮತ್ತು ವಿವಾಹದ ಋತುವಿನಿಂದಾಗಿ, ಚಿನ್ನದ ಬೇಡಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಸಿಎಡಿ ಮತ್ತಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ಸಿಎಡಿ ಎಂದರೆ ವಿದೇಶಿ ಕರೆನ್ಸಿಯ ಒಳಹರಿವು ಮತ್ತು ಹೊರಹರಿವಿನ ನಡುವಿನ ವ್ಯತ್ಯಾಸವಾಗಿದೆ.

English summary

Gold Imports Up By 22.58 Percent To 34.6 Billion In 2020-21

Gold imports, which have a bearing on the country's current account deficit (CAD), rose by 22.58 per cent to USD 34.6 billion (about Rs 2.54 lakh crore) during 2020-21
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X