For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಇಳಿಕೆ: ಒಂದು ತಿಂಗಳಿನಲ್ಲಿ ಅತ್ಯಂತ ಕಡಿಮೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿತಗೊಂಡಿದ್ದು, ಗುರುವಾರ ಚಿನ್ನ ಹಾಗೂ ಬೆಳ್ಳಿ ಬೆಲೆಯು ಇಳಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 1.5ರಷ್ಟು ಇಳಿಕೆಯಾಗಿ 47,799 ರೂಪಾಯಿಗೆ ತಲುಪಿದ್ದು, ಬೆಳ್ಳಿ ಬೆಲೆಯು ಕೆಜಿಗೆ ಶೇ. 1.6ರಷ್ಟು ಕಡಿಮೆಯಾಗಿ 70,345 ರೂಪಾಯಿಗೆ ತಲುಪಿದೆ.

ಚಿನ್ನದ ಬೆಲೆ ಮತ್ತಷ್ಟು ಇಳಿಕೆ: 22, 24 ಕ್ಯಾರೆಟ್‌ ಚಿನ್ನದ ಬೆಲೆ ಎಷ್ಟಿದೆ?ಚಿನ್ನದ ಬೆಲೆ ಮತ್ತಷ್ಟು ಇಳಿಕೆ: 22, 24 ಕ್ಯಾರೆಟ್‌ ಚಿನ್ನದ ಬೆಲೆ ಎಷ್ಟಿದೆ?

ಎಂಸಿಎಕ್ಸ್ ಚಿನ್ನವು 47,700 ರಿಂದ 47,900 ರೂಪಾಯಿ ಆಸುಪಾಸು ವಹಿವಾಟು ನಡೆಸುತ್ತಿದೆ. ಯುಎಸ್‌ ಫೆಡರಲ್‌ ರಿಸರ್ವ್‌ ಇಂದು ಬಡ್ಡಿದರಗಳನ್ನು ನಿರೀಕ್ಷೆಗಿಂತ ಬೇಗ ಹೆಚ್ಚಿಸಬಹುದು ಎಂಬ ಸೂಚನೆಗಳ ಹಿನ್ನೆಲೆಯಲ್ಲಿ ಚಿನ್ನವು ಶೇ. 2.5ರಷ್ಟು ಕುಸಿತಗೊಂಡಿದೆ.

ಚಿನ್ನದ ಬೆಲೆ ಇಳಿಕೆ: ಒಂದು ತಿಂಗಳಿನಲ್ಲಿ ಅತ್ಯಂತ ಕಡಿಮೆ

''ಅಲ್ಪಾವಧಿಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಕಡಿಮೆಯಾಗಬಹುದು ಮತ್ತು ಸುರಕ್ಷಿತ ಹೂಡಿಕೆಯತ್ತ ಬೇಡಿಕೆ ತಗ್ಗಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಚಿನ್ನವು ಶೀಘ್ರದಲ್ಲೇ 1800 ರಿಂದ 1780 ಮಟ್ಟವನ್ನು ಪರೀಕ್ಷಿಸಬಹುದು ಮತ್ತು ಬೆಳ್ಳಿ ಶೀಘ್ರದಲ್ಲೇ 26 ಡಾಲರ್‌ನಿಂದ 26.50 ಡಾಲರ್‌ನತ್ತ ಪರೀಕ್ಷಿಸಬಹುದು ಎಂದು ನಾವು ಅಂದಾಜಿಸಿದ್ದೇವೆ" ಎಂದು ಐಐಎಫ್‌ಎಲ್‌ ಸೆಕ್ಯುರಿಟೀಸ್‌ ಉಪಾಧ್ಯಕ್ಷ ಅನುಜ್ ಗುಪ್ತಾ ಹೇಳಿದರು.

ಸ್ಪಾಟ್‌ ಚಿನ್ನವು ಔನ್ಸ್‌ಗೆ ಶೇಕಡಾ 0.6ರಷ್ಟು ಏರಿಕೆಯಾಗಿ 1,822.36 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇಕಡಾ 0.5ರಷ್ಟು ಏರಿಕೆಗೊಂಡು 27.09 ಡಾಲರ್‌ಗೆ ಮುಟ್ಟಿದೆ. ಪಲ್ಲಾಡಿಯಮ್ ಶೇಕಡಾ 1ರಷ್ಟು ಇಳಿದು 2,770.49 ಡಾಲರ್, ಪ್ಲಾಟಿನಂ ಶೇಕಡಾ 0.5ರಷ್ಟು ಹೆಚ್ಚಾಗಿ 1,127.49 ಡಾಲರ್‌ಗೆ ತಲುಪಿದೆ.

English summary

Gold Prices Today Down To Lowest In Over One Month: Silver Rates Slump

Gold and silver prices today plunged in Indian markets, tracking an overnight crash in global rates.
Story first published: Thursday, June 17, 2021, 12:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X