For Quick Alerts
ALLOW NOTIFICATIONS  
For Daily Alerts

ಏರಿದ್ದ ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ಮುಂದಿನ ಹಾದಿ ಏನು?

|

ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗುರುವಾರ ಮತ್ತೊಮ್ಮೆ ಬಿದ್ದಿದೆ. ರಷ್ಯಾದಿಂದ ಬಿಡುಗಡೆ ಆಗಿರುವ ಕೊರೊನಾ ಲಸಿಕೆ, ಅಮೆರಿಕ ಡಾಲರ್ ಚೇತರಿಕೆ ಮತ್ತಿತರ ಅಂಶಗಳು ಸೇರಿಕೊಂಡು, ಈ ಹಿಂದೆ ಕೊರೊನಾ ಆತಂಕದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರು, ಲಾಭವನ್ನು ನಗದು ಮಾಡಿಕೊಳ್ಳುತ್ತಿದ್ದಾರೆ. ಬುಧವಾರದಂದು ಚಿನ್ನದ ದರ ಒಂದೇ ದಿನದಲ್ಲಿ 3.4% ಕುಸಿಯಿತು. ಆ ಮೂಲಕ 2013ರ ನಂತರ ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಕಂಡ ಅತ್ಯಂತ ದೊಡ್ಡ ಕುಸಿತ ಇದಾಯಿತು.

ಪ್ರತಿ ಔನ್ಸ್ ಗೆ $ 1900ಕ್ಕಿಂತ ಕೆಳಗೆ ಇಳಿಯಿತು. ಆ ನಂತರ 2 ಪರ್ಸೆಂಟ್ ನಷ್ಟು ಏರಿಕೆ ಕಂಡು, ಹತ್ತಿರ ಹತ್ತಿರ 6 ಪರ್ಸೆಂಟ್ ಹೆಚ್ಚಳ ಆಯಿತು. ಭಾರತದ MCXನಲ್ಲಿ ಚಿನ್ನದ ದರ ಪ್ರತಿ ಹತ್ತು ಗ್ರಾಮ್ ಗೆ 265 ರುಪಾಯಿ ಇಳಿಕೆ ಕಂಡು, 51,980 ರುಪಾಯಿಗೆ ವಹಿವಾಟು ನಡೆಸಿತು. ಅದೇ ರೀತಿ ಬೆಳ್ಳಿಯ ಸೆಪ್ಟೆಂಬರ್ ಫ್ಯೂಚರ್ಸ್ 219 ರುಪಾಯಿ ಇಳಿದು, ಕೇಜಿಗೆ 66,354 ರುಪಾಯಿಗೆ ವಹಿವಾಟು ನಡೆಸಿತು.

ಏರಿದ್ದಕ್ಕೆ ಸಮಯಕ್ಕೆ ತೆಗೆದುಕೊಂಡು ಬಿದ್ದಿದ್ದು ಒಂದೇ ಸಲ

ಏರಿದ್ದಕ್ಕೆ ಸಮಯಕ್ಕೆ ತೆಗೆದುಕೊಂಡು ಬಿದ್ದಿದ್ದು ಒಂದೇ ಸಲ

ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆ ಆಗಬಹುದು ಎಂಬುದು ಎಲ್ಲರ ನಿರೀಕ್ಷೆ ಆಗಿತ್ತು. ಆದರೆ ಅದು ಇಷ್ಟು ತೀಕ್ಷ್ಣವಾದ ಕುಸಿತ ಆಗಬಹುದು ಎಂಬ ಅಂದಾಜಿರಲಿಲ್ಲ. ಚಿನ್ನದ ದರ ಔನ್ಸ್ ಗೆ 1900 ಡಾಲರ್ ನಿಂದ 2000 ಡಾಲರ್ ತಲುಪುವುದಕ್ಕೆ 9 ಟ್ರೇಡಿಂಗ್ ಸೆಷನ್ ಗಳಾದವು. ಅದೇ 2000 ಡಾಲರ್ ನಿಂದ 1890 ಡಾಲರ್ ತಲುಪಲು ತೆಗೆದುಕೊಂಡಿದ್ದು ಕೇವಲ ಒಂದೇ ದಿನ.

ಹೊಸ ದಾಖಲೆ ಬರೆದಿದ್ದವು ಚಿನ್ನ, ಬೆಳ್ಳಿ

ಹೊಸ ದಾಖಲೆ ಬರೆದಿದ್ದವು ಚಿನ್ನ, ಬೆಳ್ಳಿ

ಅದೇ ರೀತಿ ಬೆಳ್ಳಿ ದರದಲ್ಲೂ ಆಯಿತು. ಬೆಳ್ಳಿ ಬೆಲೆ 25ರಿಂದ 30 ಡಾಲರ್ ಗೆ ಏರಿಕೆ ಆಗುವುದಕ್ಕೆ 4 ಟ್ರೇಡಿಂಗ್ ಸೆಷನ್ ತೆಗೆದುಕೊಂಡಿತು. ಆದರೆ 29ರಿಂದ 23.50 ಡಾಲರ್ ತಲುಪಿದ್ದು ಒಂದೇ ಟ್ರೇಡಿಂಗ್ ಸೆಷನ್ ನಲ್ಲಿ. ಕಳೆದ ವಾರ ಚಿನ್ನದ ದರ ಪ್ರತಿ ಹತ್ತು ಗ್ರಾಮ್ ಗೆ 56,191 ರುಪಾಯಿ ಮುಟ್ಟಿ ಹೊಸ ದಾಖಲೆ ಬರೆಯಿತು. ಇನ್ನು ಬೆಳ್ಳಿ ಫ್ಯೂಚರ್ಸ್ ಕೇಜಿಗೆ 77,949 ರುಪಾಯಿ ತಲುಪಿತು.

ಕೊರೊನಾ ಆತಂಕ ಹೂಡಿಕೆದಾರರಲ್ಲಿ ಇದೆ

ಕೊರೊನಾ ಆತಂಕ ಹೂಡಿಕೆದಾರರಲ್ಲಿ ಇದೆ

ಆ ಗರಿಷ್ಠ ಮಟ್ಟದಿಂದ ಚಿನ್ನದ ದರ 4211 ರು. ಅಥವಾ 7.5% ಹಾಗೂ ಬೆಳ್ಳಿ ಕೇಜಿಗೆ 11,415 ರುಪಾಯಿ ಅಥವಾ 14.6 ಪರ್ಸೆಂಟ್ ಕುಸಿತ ಕಂಡಿದೆ. ಕೊರೊನಾ ನಿಯಂತ್ರಣಕ್ಕೆ ಬರುವ ತನಕ ಯು.ಎಸ್. ಆರ್ಥಿಕತೆ ಚೇತರಿಕೆ ಕಷ್ಟ ಎಂದು ಫೆಡ್ ಅಧಿಕಾರಿಗಳು ಹೇಳಿದ್ದಾರೆ. ಮುಂದಿನ ಕೆಲವು ತಿಂಗಳು ಈ ವೈರಸ್ ಜತೆಗಿನ ಬದುಕು ಅನಿವಾರ್ಯ ಎಂಬುದು ಅವರ ಮಾತು. ಇದರಿಂದ ಹೂಡಿಕೆದಾರರ ಮನಸ್ಸಿನಲ್ಲಿ ಆತಂಕ ಹೆಚ್ಚಾಗಿದೆ.

ಇಳಿಕೆ ಕೇವಲ ತಾತ್ಕಾಲಿಕ ಎನ್ನುವ ತಜ್ಞರು

ಇಳಿಕೆ ಕೇವಲ ತಾತ್ಕಾಲಿಕ ಎನ್ನುವ ತಜ್ಞರು

ಕಳೆದ ವಾರ ಚಿನ್ನ ಹಾಗೂ ಬೆಳ್ಳಿ ಏರಿದ ಎತ್ತರದ ಆಧಾರದ ಮೇಲೆ ಹೇಳುವುದಾದರೆ, ಮಾರ್ಚ್ ನಲ್ಲಿ ಮುಟ್ಟಿದ್ದ ಕನಿಷ್ಠ ಮಟ್ಟದಿಂದ ಚಿನ್ನ 46 ಪರ್ಸೆಂಟ್ ಗಳಿಕೆ ಕಂಡಿತು, ಬೆಳ್ಳಿ ಬೆಲೆ 132 ಪರ್ಸೆಂಟ್ ಏರಿಕೆ ಆಯಿತು. ಚಿನ್ನದ ಬೆಲೆಯಲ್ಲಿನ ಇಳಿಕೆ ಕೇವಲ ತಾತ್ಕಾಲಿಕ ಮಾತ್ರ. ಏಕೆಂದರೆ ಮತ್ತೆ ಖರೀದಿ ಬಂದೇ ಬರುತ್ತದೆ. ಹೂಡಿಕೆದಾರರು ಕಡಿಮೆ ಬೆಲೆಯಲ್ಲಿ ಖರೀದಿಸಲು ಬಯಸುತ್ತಾರೆ. ಒಂದು ಮಟ್ಟಕ್ಕೆ ಬಂದು ಬೆಲೆ ಸ್ಥಿರವಾಗುತ್ತದೆ. ಅಲ್ಲಿಂದ ಮತ್ತೆ ಖರೀದಿ ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು.

English summary

Gold, Silver Sharp Decline; How Will Be The Next Move?

After record jump in the price of gold and silver last week, sharp decline seen in the market. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X