For Quick Alerts
ALLOW NOTIFICATIONS  
For Daily Alerts

ಸಕ್ಕರೆ ರಫ್ತುದಾರರಿಗೆ ಚಿನ್ನದಂತಹ ಅವಕಾಶ: ಈ ವರ್ಷ ಹೆಚ್ಚಾಗಲಿದೆ ರಫ್ತು

|

ಮುಂದಿನ ಋತುವಿನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬೇಡಿಕೆ ಹೆಚ್ಚಾಗುತ್ತಿದ್ದು ಭಾರತೀಯ ಸಕ್ಕರೆ ರಫ್ತಿಗೆ ಸುವರ್ಣಾವಕಾಶವಾಗಿದೆ ಎಂದು ತಜ್ಞರು ಹೇಳಿದ್ದಾರೆ.

 

ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಜಿಲ್‌ನಿಂದದ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಿರುವುದರಿಂದ ಮುಂದಿನ ಮೂರು ತಿಂಗಳುಗಳು ಭಾರತೀಯ ಸಕ್ಕರೆ ರಫ್ತು ಹೆಚ್ಚಾಗಲಿದ್ದು ವರ್ಷದಲ್ಲಿ 50 ಲಕ್ಷ ಟನ್‌ಗಳಷ್ಟು ರಫ್ತು ದಾಟುವ ಸಾಧ್ಯತೆ ಇದೆ ಎಂದು ಸಕ್ಕರೆ ಕಾರ್ಖಾನೆಗಳ ಸಂಘ(ಐಎಸ್‌ಎಂಐ) ಹೇಳಿದೆ.

 
ಸಕ್ಕರೆ ರಫ್ತುದಾರರಿಗೆ ಚಿನ್ನದಂತಹ ಅವಕಾಶ

ಜಾಗತಿಕ ಮಾರುಕಟ್ಟೆಯಲ್ಲಿ ಇತ್ತೀಚಿನ ಸಕ್ಕರೆ ಬೆಲೆ ಏರಿಕೆಯ ನಂತರ, ಸಕ್ಕರೆ ಉತ್ಪಾದನೆಯು ಬ್ರೆಜಿಲ್‌ಗೆ ಎಥೆನಾಲ್ ಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಮತ್ತು ಇದು ಸಕ್ಕರೆ ಉತ್ಪಾದನೆಗೆ ಹೆಚ್ಚು ಗಮನ ಹರಿಸುವ ಸಾಧ್ಯತೆಯಿದೆ.

ಪ್ರಸ್ತುತ, ಭಾರತದಲ್ಲಿ ಸಕ್ಕರೆಯ ಹೆಚ್ಚುವರಿ ಸಂಗ್ರಹವಿದೆ ಮತ್ತು ಈ ವರ್ಷ ಪೂರೈಕೆ ಕೊರತೆ ಮತ್ತು ಹೆಚ್ಚಿನ ಜಾಗತಿಕ ಬೇಡಿಕೆಯಿಂದಾಗಿ ಸಕ್ಕರೆ ಬೆಲೆಗಳು ತೀವ್ರ ಏರಿಕೆ ಕಂಡಿದೆ. ಇದು ಭಾರತೀಯ ಗಿರಣಿಗಳಿಗೆ ಸಕ್ಕರೆ ರಫ್ತು ಮಾಡಲು ಸುಲಭವಾಗಿದೆ.

ಆದಾಗ್ಯೂ, ಬ್ರೆಜಿಲ್ ಮತ್ತು ಆಸ್ಟ್ರೇಲಿಯಾದಲ್ಲಿ ಸಕ್ಕರೆ ಉತ್ಪಾದನೆಯ ಹೊಸ ಋತುವಿನಲ್ಲಿ ಪ್ರಾರಂಭವಾದ ನಂತರ, ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಪೂರೈಕೆಯ ಹೆಚ್ಚಳವು ಭಾರತಕ್ಕೆ ಸ್ಪರ್ಧೆಯನ್ನು ಹೆಚ್ಚಿಸುತ್ತದೆ.

ಪ್ರಸಕ್ತ ವರ್ಷಕ್ಕೆ 60 ಲಕ್ಷ ಟನ್‌ಗಳಷ್ಟು ಸಕ್ಕರೆ ರಫ್ತು ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಈಗಾಗಲೇ 16 ಲಕ್ಷ ಟನ್ ರಫ್ತು ಮಾಡಲಾಗಿದೆ. ಸರ್ಕಾರವು ಪ್ರತಿ ಟನ್‌ ಮೇಲೆ 10,448 ರುಪಾಯಿ ಸಬ್ಸಿಡಿ ನೀಡುತ್ತದೆ.

English summary

Golden Opportunity For Indian Sugar Exports

The next three months of the ongoing 2019-20 season will be a golden opportunity for Indian sugar exports
Story first published: Wednesday, February 19, 2020, 10:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X