For Quick Alerts
ALLOW NOTIFICATIONS  
For Daily Alerts

ಗೂಗಲ್ Duo ವಿಡಿಯೋ ಕಾಲ್ ಬಳಸುವವರಿಗೆ ಗುಡ್ ನ್ಯೂಸ್

By ಅನಿಲ್ ಆಚಾರ್
|

ಗೂಗಲ್ Duo ವಿಡಿಯೋ ಕಾಲ್ ಬಳಸುವವರಿಗೆ ಗುಡ್ ನ್ಯೂಸ್ ಇಲ್ಲಿದೆ. ಅಂದಹಾಗೆ ಗೂಗಲ್ ನ ವಿಡಿಯೋ ಕಾಲ್ ಅಪ್ಲಿಕೇಷನ್ ಆದ Duo ಗ್ರೂಪ್ ಕಾಲ್ ಮಾಡುವುದಕ್ಕೆ ಡೆಸ್ಕ್ ಟಾಪ್ ನಲ್ಲೂ ಸಿಗುತ್ತದೆ ಅನ್ನೋದು ಇತ್ತೀಚೆಗೆ ಕಂಪೆನಿ ನೀಡಿದ್ದ ಸುದ್ದಿ. ಇದೀಗ 32 ಮಂದಿ ಒಂದೇ ಸಲಕ್ಕೆ ವಿಡಿಯೋ ಕಾಲ್ ಮಾಡುವ ಅವಕಾಶ ಮಾಡಿಕೊಡುತ್ತಿದೆ.

ಆರಂಭದಲ್ಲಿ ಈ ಅಪ್ಲಿಕೇಷನ್ ಮೂಲಕ ಎಂಟು ಮಂದಿ ಮಾತ್ರ ವಿಡಿಯೋ ಕಾಲ್ ಮಾಡಲು ಸಾಧ್ಯವಿತ್ತು. ಆ ನಂತರ ಕಳೆದ ಮಾರ್ಚ್ ನಲ್ಲಿ ಸಂಖ್ಯೆಯನ್ನು ಹನ್ನೆರಡಕ್ಕೆ ಏರಿಸಲಾಯಿತು. ಇದೀಗ ಕಂಪೆನಿ ಕಡೆಯಿಂದ ಮಾಹಿತಿ ಹೊರಬಂದಿದೆ: ಇನ್ನು ಮುಂದೆ ಒಂದೇ ವಿಡಿಯೋ ಕಾಲ್ ನಲ್ಲಿ 32 ಮಂದಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುತ್ತದೆ.

ಗೂಗಲ್ Duo ವಿಡಿಯೋ ಕಾಲ್ ಬಳಸುವವರಿಗೆ ಗುಡ್ ನ್ಯೂಸ್

ಈಗ ದೊರೆತಿರುವ ಮಾಹಿತಿ ಪ್ರಕಾರ, ಇಷ್ಟು ಮಂದಿ ಏಕಕಾಲಕ್ಕೆ ವಿಡಿಯೋ ಕಾಲ್ ಮಾಡಬಹುದು ಎಂಬ ಬಗ್ಗೆ ಗೂಗಲ್ ನಿಂದ ಮೇಲ್ ಕಳಿಸಲಾಗುತ್ತಿದೆ. Duo ಮೂಲಕ ಬಳಕೆದಾರರು ಪರ್ಸನಲೈಸ್ಡ್ ವಿಡಿಯೋ ಮತ್ತು ಧ್ವನಿ ಸಂದೇಶ ಕೂಡ ಕಳುಹಿಸಬಹುದು. ಇನ್ನು 24 ಗಂಟೆಯೊಳಗೆ ಅದು ಎಕ್ಸ್ ಪೈರ್ ಆಗುವ ಬದಲಿಗೆ ಸೇವ್ ಮಾಡಿಕೊಳ್ಳುವ ಅವಕಾಶ ಕೂಡ ನೀಡಿದೆ.

English summary

Good News For Google Duo App Users: Now 32 People Can Participate

Here is the good news for Google Duo video call app users. Google will allow 32 participants in one video call.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X