For Quick Alerts
ALLOW NOTIFICATIONS  
For Daily Alerts

ಭಾರತದ ಡಿಜಿಟಲ್ ವ್ಯವಸ್ಥೆ ಮೇಲೆ ಗೂಗಲ್ ಸವಾರಿ; ಪೇಟಿಎಂನಿಂದ ತಿರುಗೇಟು

|

ಭಾರತದ ಕಾನೂನಿಗಿಂತ ಮೇಲೆ, ಅದನ್ನು ಮೀರಿ ಗೂಗಲ್ ನಿಂದ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಪೇಟಿಎಂ ಆರೋಪ ಮಾಡಿದೆ. ಕಳೆದ ವಾರ ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಎಂ ಅಪ್ಲಿಕೇಷನ್ ಅನ್ನು ಕೆಲ ಗಂಟೆಗಳ ಕಾಲ ತೆಗೆಯಲಾಗಿತ್ತು. ಪ್ಲೇ ಸ್ಟೋರ್ ಗಳ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂದು ಕಾರಣ ನೀಡಲಾಗಿತ್ತು.

4 ಗಂಟೆ ನಿಷೇಧದ ಬಳಿಕ ಗೂಗಲ್ ಪ್ಲೇ ಸ್ಟೋರ್‌ಗೆ ಮರಳಿದ ಪೇಟಿಎಂ4 ಗಂಟೆ ನಿಷೇಧದ ಬಳಿಕ ಗೂಗಲ್ ಪ್ಲೇ ಸ್ಟೋರ್‌ಗೆ ಮರಳಿದ ಪೇಟಿಎಂ

ನೋಯ್ಡಾದಲ್ಲಿ ಮುಖ್ಯ ಕಚೇರಿ ಹೊಂದಿರುವ ಪೇಟಿಎಂ ಮಾತನಾಡಿ, ಸೆಪ್ಟೆಂಬರ್ 11ನೇ ತಾರೀಕಿನಂದು ಬಳಕೆದಾರರಿಗಾಗಿ ಯುಪಿಐ ಕ್ಯಾಶ್ ಬ್ಯಾಕ್ ಆರಂಭಿಸಿದೆವು. ಆದರೆ ಕಂಪೆನಿಯ ಅಪ್ಲಿಕೇಷನ್ ಅನ್ನು ಪ್ಲೇಸ್ಟೋರ್ ನಿಂದ ತೆಗೆದದ್ದು ಸೆಪ್ಟೆಂಬರ್ 18ಕ್ಕೆ. ನಮ್ಮ ಕಡೆಯ ವಾದವನ್ನು ಸಹ ಹೇಳಲು ಅವಕಾಶ ನೀಡದೆ ಹೀಗೆ ಮಾಡಲಾಗಿದೆ ಎಂದಿದೆ ಪೇಟಿಎಂ.

ಭಾರತದ ಡಿಜಿಟಲ್ ವ್ಯವಸ್ಥೆ ಮೇಲೆ ಗೂಗಲ್ ನ ಹಿಡಿತ

ಭಾರತದ ಡಿಜಿಟಲ್ ವ್ಯವಸ್ಥೆ ಮೇಲೆ ಗೂಗಲ್ ನ ಹಿಡಿತ

''ಇದೇ ಮೊದಲ ಬಾರಿಗೆ ನಮ್ಮ ಯುಪಿಐ ಕ್ಯಾಶ್ ಬ್ಯಾಕ್ ಹಾಗೂ ಸ್ಕ್ರಾಚ್ ಕಾರ್ಡ್ಸ್ ಅಭಿಯಾನದ ಬಗ್ಗೆ ಗೂಗಲ್ ಅಧಿಸೂಚನೆ ಕಳಿಸಿತ್ತು. ಸಾಮಾನ್ಯವಾಗಿ ರೂಢಿಯಲ್ಲಿರುವ ನಿಯಮಾವಳಿ ಅನುಸರಿಸದೆ, ನಮ್ಮ ದೃಷ್ಟಿಕೋನವನ್ನು ಮುಂದಿಡಲು ಸಹ ಅವಕಾಶವನ್ನು ನೀಡಲಿಲ್ಲ,'' ಎಂದು ಕಂಪೆನಿಯ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ. ಗೂಗಲ್ ನಡೆದುಕೊಂಡಿರುವುದನ್ನು ಆಷಾಢಭೂತಿತನ ಎಂದಿರುವ ಪೇಟಿಎಂ, ಭಾರತದಲ್ಲಿ ಗೂಗಲ್ ಪೇ ಹೊಂದಿರುವ ಗೂಗಲ್ ನಿಂದ ಸಹ ಇಂಥದ್ದೇ ಸ್ಕ್ರಾಚ್ ಕಾರ್ಡ್ ಅಭಿಯಾನ ನಡೆಸುತ್ತದೆ. ಈ ಬಗ್ಗೆ ಎಲ್ಲ ಇಂಟರ್ ನೆಟ್ ಕಂಪೆನಿಗಳಿಗೂ ಗೊತ್ತಿದೆ. ಅವರು ಸಹ ಇಂಥದ್ದೇ ಬೆದರಿಕೆಗೆ ಗುರಿಯಾಗಿದ್ದಾರೆ. ಪ್ರತಿ ದಿನ ಭಾರತದ ಡಿಜಿಟಲ್ ವ್ಯವಸ್ಥೆ ಮೇಲೆ ಗೂಗಲ್ ನ ಹಿಡಿತ ಹೆಚ್ಚುತ್ತಲೇ ಇದೆ ಎಂದು ಪೇಟಿಎಂ ಹೇಳಿದೆ.

ಶೇಕಡಾ 95ರಷ್ಟು ಸ್ಮಾರ್ಟ್ ಫೋನ್ ಗಳಲ್ಲಿ ಆಂಡ್ರಾಯಿಡ್

ಶೇಕಡಾ 95ರಷ್ಟು ಸ್ಮಾರ್ಟ್ ಫೋನ್ ಗಳಲ್ಲಿ ಆಂಡ್ರಾಯಿಡ್

ಗೂಗಲ್ ಒಡೆತನದ ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್ ಭಾರತದ ಶೇಕಡಾ 95ರಷ್ಟು ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆಯಾಗಿವೆ. ಆದ್ದರಿಂದ ಪ್ಲೇಸ್ಟೋರ್ ಮೂಲಕ ಯಾವ ಅಪ್ಲಿಕೇಷನ್ ಡೌನ್ ಲೋಡ್ ಮಾಡುತ್ತೀರಿ ಎಂಬುದರ ಮೇಲೆ ಗೂಗಲ್ ಗೆ ಅಪಾರ ನಿಯಂತ್ರಣ ಇದೆ. ಇದರ ಜತೆಗೆ ಈ ಅಪ್ಲಿಕೇಷನ್ ರೂಪಿಸುವ ಭಾರತದ ಸ್ಟಾರ್ಟ್ ಅಪ್ಸ್ ಗಳ ಮೂಲಕ ಜಾಹೀರಾತಿನ ಸ್ವರೂಪದಲ್ಲಿ ನೂರಾರು ಕೋಟಿ ಡಾಲರ್ ಆದಾಯ ಪಡೆಯುತ್ತಿದೆ ಎಂದು ಪೇಟಿಎಂ ಹೇಳಿದೆ.

ಅನಿಯಂತ್ರಿತ ಜೂಜಾಟಕ್ಕೆ ಅವಕಾಶ ಇಲ್ಲ

ಅನಿಯಂತ್ರಿತ ಜೂಜಾಟಕ್ಕೆ ಅವಕಾಶ ಇಲ್ಲ

ಗೂಗಲ್ ವಕ್ತಾರರು ಭಾನುವಾರ ಸಂಜೆ ಈ ಬಗ್ಗೆ ಮಾತನಾಡಿ, ಕ್ಯಾಶ್ ಬ್ಯಾಂಕ್ ಅಥವಾ ವೋಚರ್ ಗಳನ್ನು ನೀಡುವುದರಿಂದ ಗೂಗಲ್ ಪ್ಲೇ ಜೂಜಾಟ ನೀತಿಗಳನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ. ಕಳೆದ ವಾರ ನಮ್ಮ ಪ್ಲೇ ಸ್ಟೋರ್ ಜೂಜಾಟ ನಿಯಮ ಮತ್ತೊಮ್ಮೆ ಸ್ಪಷ್ಟಪಡಿಸಿದ್ದೇವೆ. ಅದರ ಪ್ರಕಾರ ಆನ್ ಲೈನ್ ಕ್ಯಾಸಿನೋ ಅಥವಾ ಯಾವುದೇ ಅನಿಯಂತ್ರಿತ ಜೂಜಾಟ ಅಪ್ಲಿಕೇಷನ್ ಗಳ ಬೆಟ್ಟಿಂಗ್ ಗೆ ಅವಕಾಶ ನೀಡುವುದಿಲ್ಲ. ಪ್ರತಿ ದಿನದ ಫ್ಯಾಂಟಸಿ ಕ್ರೀಡೆಗಳಿಗೂ ಅವಕಾಶ ನೀಡಲ್ಲ. ತುಂಬ ಆಲೋಚನೆ ಮಾಡಿಯೇ ನಿಯಮಾವಳಿ ರೂಪಿಸಿದ್ದೇವೆ. ಇನ್ನು ಪದೇ ಪದೇ ನಿಯಮಾವಳಿಗಳನ್ನು ಉಲ್ಲಂಘಿಸಿದಲ್ಲಿ ಗಂಭೀರ ಕ್ರಮ ತೆಗೆದುಕೊಳ್ಳುತ್ತೇವೆ. ಅದರಲ್ಲಿ ಗೂಗಲ್ ಪ್ಲೇ ಡೆವಲಪ್ ಅಕೌಂಟ್ ನಲ್ಲಿ ತೆಗೆದುಹಾಕುವುದು ಸಹ ಒಂದು. ನಮ್ಮ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ ಹಾಗೂ ಆಗಾಗ ಎಲ್ಲ ಡೆವಲಪರ್ ಗಳ ಮೇಲೂ ಹಾಕಲಾಗುತ್ತದೆ ಎಂದಿದ್ದಾರೆ.

ಫ್ಯಾಂಟಸಿ ಕ್ರೀಡೆಗಳ ಪ್ರಚಾರದಲ್ಲಿ ತಪ್ಪೇನು?

ಫ್ಯಾಂಟಸಿ ಕ್ರೀಡೆಗಳ ಪ್ರಚಾರದಲ್ಲಿ ತಪ್ಪೇನು?

ಇನ್ನು ಗೂಗಲ್ ನಿಂದ ಪೇಟಿಎಂಗೆ ಆಗಸ್ಟ್ 20, 28 ಹಾಗೂ ಸೆಪ್ಟೆಂಬರ್ 1ನೇ ತಾರೀಕು ಮುಂದಿನ ಕ್ರಮದ ಬಗ್ಗೆ ಎಚ್ಚರಿಕೆ ಬಂದಿದೆ. ''ನಾವು ನಿಯಮ ಉಲ್ಲಂಘಿಸುತ್ತಿದ್ದೇವೆ ಎಂಬ ಆರೋಪವನ್ನು ಗಂಭೀರವಾಗಿ ನಿರಾಕರಿಸಿದೆವು. ಆ ಕೂಡಲೇ ನಮ್ಮ ಗೇಮಿಂಗ್ ಅಂಗ ಸಂಸ್ಥೆಯನ್ನು ಪ್ರಚಾರ ಮಾಡೂವುದು ನಿಷೇಧಿಸಲಾಯಿತು. ಫ್ಯಾಂಟಸಿ ಕ್ರೀಡೆಗಳನ್ನು ಪ್ರಚಾರ ಮಾಡುವುದನ್ನು ಜೂಜಾಟ ಅಲ್ಲ,'' ಎಂದು ಸ್ಪಷ್ಟಪಡಿಸುತ್ತೇವೆ ಎಂದು ಪೇಟಿಎಂ ಹೇಳಿದೆ.

English summary

Google Dominating India's Digital System, Alleged By Paytm

Paytm alleged that, Google dominating India's digital Eco system day by day. This comment by Paytm on the backdrop app barred from play store recently.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X