For Quick Alerts
ALLOW NOTIFICATIONS  
For Daily Alerts

ಗೂಗಲ್ ಪಿಕ್ಸೆಲ್ 4a ಮೊಬೈಲ್ ಫೋನ್ USನಲ್ಲಿ ಬಿಡುಗಡೆ; ದರ ಇತರ ವಿವರ

|

ಗೂಗಲ್ ನಿಂದ ಸೋಮವಾರ ಬಹು ನಿರೀಕ್ಷಿತ ಪಿಕ್ಸೆಲ್ 4A ಮೊಬೈಲ್ ಫೋನ್ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಅಕ್ಟೋಬರ್ ತಿಂಗಳಲ್ಲಿ ಈ ಫೋನ್ ಖರೀದಿಗೆ ದೊರೆಯುತ್ತದೆ. ಕೈಗೆಟುಕುವ ಬೆಲೆಯನ್ನು ಈ ಫೋನ್ ಗೆ ನಿಗದಿ ಮಾಡಲಾಗಿದೆ. ಯು.ಎಸ್.ನಲ್ಲಿ 4a ದರವನ್ನು $349 (ಭಾರತದ ರುಪಾಯಿಗಳಲ್ಲಿ 26,300) ಎಂದು ನಿಗದಿ ಮಾಡಲಾಗಿದೆ.

ಕಪ್ಪು ಬಣ್ಣದಲ್ಲಿ ಬರುವ ಈ ಫೋನ್ 5.8 ಇಂಚು ಇದ್ದು, OLED ಡಿಸ್ ಪ್ಲೇ ಹೊಂದಿದೆ. 12 MP ಹಿಂಬದಿಯ ಕ್ಯಾಮೆರಾ ಹೊಂದಿದ್ದರೆ, 8 MP ಫ್ರಂಟ್ ಕ್ಯಾಮೆರಾ ಸೆನ್ಸರ್ ಇದೆ. 128 GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, 3,140 mAh ಬ್ಯಾಟರಿ ಇದೆ. ಸ್ಟಿರಿಯೋ ಸ್ಪೀಕರ್ ಮತ್ತು ಎರಡು ಮೈಕ್ರೋಫೋನ್ ಒಳಗೊಂಡಿದೆ.

 

ಚೈನೀಸ್ ಸ್ಮಾರ್ಟ್ ಫೋನ್ ಗಳಿಗೆ ಭಾರತದಲ್ಲಿ ಬಿತ್ತು ಗುನ್ನಾ

ಸದ್ಯಕ್ಕೆ ಯು.ಎಸ್.ನಲ್ಲಿ ಪ್ರೀ ಆರ್ಡರ್ ಮಾಡಿ, ಗೂಗಲ್ ಸ್ಟೋರ್ ಹಾಗೂ ಗೂಗಲ್ Fiನಲ್ಲಿ ಮಾತ್ರ ಖರೀದಿಸಲು ಸಾಧ್ಯ. ಭಾರತದಲ್ಲಿ ಅಕ್ಟೋಬರ್ ತಿಂಗಳಲ್ಲಿ ಫ್ಲಿಪ್ ಕಾರ್ಟ್ ಮೂಲಕ ಮಾರಾಟ ಆರಂಭಿಸುತ್ತದೆ. ಎಷ್ಟು ಬೆಲೆ ಎಂಬುದನ್ನು ಬಿಡುಗಡೆ ಆಗುವ ಸ್ವಲ್ಪ ಮುಂಚೆ ಘೋಷಿಸಲಾಗುತ್ತದೆ.

ಗೂಗಲ್ ಪಿಕ್ಸೆಲ್ 4a ಮೊಬೈಲ್ ಫೋನ್ USನಲ್ಲಿ ಬಿಡುಗಡೆ; ದರ ಇತರ ವಿವರ

ಪಿಕ್ಸೆಲ್ 4a (5G) ಹಾಗೂ ದೊಡ್ಡ ಪರದೆಯ ಮೊಬೈಲ್ ಫೋನ್ ಹಾಗೂ ಪಿಕ್ಸೆಲ್ 5 ಸಹ ಇದೆ. ಆದರೆ ಭಾರತ ಹಾಗೂ ಸಿಂಗಾಪೂರ್ ಮಾರ್ಕೆಟ್ ಗೆ 5G ತಂತ್ರಜ್ಞಾನ ಇರುವ ಪಿಕ್ಸೆಲ್ 5 ಮತ್ತು ಪಿಕ್ಸೆಲ್ 4a (5) ತರುತ್ತಿಲ್ಲ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಪಿಕ್ಸೆಲ್ 4 ಹಾಗೂ 4XL ಅನ್ನು ಗೂಗಲ್ ಭಾರತದಲ್ಲಿ ಬಿಡುಗಡೆ ಮಾಡಿರಲಿಲ್ಲ.

English summary

Google Pixel 4a Mobile Phone Released In USA; Price And Other Details

Most expected Google Pixel 4a mobile phone released in USA. Phone will be launched in India by October. Price and other details here.
Company Search
COVID-19