For Quick Alerts
ALLOW NOTIFICATIONS  
For Daily Alerts

ಗೂಗಲ್ ಸೇವೆಯಲ್ಲಿ ವಿಶ್ವದಾದ್ಯಂತ ವ್ಯತ್ಯಯ; ಕಾರಣ ತಿಳಿಯಲು ತನಿಖೆ

|

ಗೂಗಲ್ ನಿಂದ ಒದಗಿಸುವ ಜಿಮೇಲ್, ಗೂಗಲ್ ಡ್ರೈವ್, ಗೂಗಲ್ ಡಾಕ್ಸ್ ಮತ್ತು ಇತರ ಸೇವೆಗಳಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ ಗಂಭೀರ ಸಮಸ್ಯೆ ಆಗಿದೆ. ಇಮೇಲ್ ಕಳಿಸಲು ಆಗುತ್ತಿಲ್ಲ ಹಾಗೂ ಎಲ್ಲ ಫೀಚರ್ ಗಳ ಸಹಿತ ಫೈಲ್ ಗಳನ್ನು ಅಪ್ ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ದೂರಿದ್ದಾರೆ.

 

ಇದರ ಜತೆಗೆ ಡಾಕ್ಸ್ ಹಾಗೂ ಗೂಗಲ್ ಮೀಟ್ ಬಳಸಲು ಸಹ ಸಮಸ್ಯೆ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಸಮಸ್ಯೆಗಳಿಗೆ ಕಾರಣ ಏನು ಎಂದು ಗೂಗಲ್ ನಿಂದ ಪರಿಶೀಲಿಸಲಾಗುತ್ತಿದೆ. ಈ ಸೇವೆಗಳಲ್ಲಿ ಸಮಸ್ಯೆ ಆಗಿರುವುದಕ್ಕೆ ಕಾರಣ ಏನು ಎಂಬ ಮಾಹಿತಿ ಇನ್ನೂ ಗೊತ್ತಾಗಬೇಕಿದೆ ಎಂದು ತಿಳಿಸಲಾಗಿದೆ.

ಗೂಗಲ್ ಸಿಬ್ಬಂದಿಗೆ ಮುಂದಿನ ವರ್ಷದ ಜೂನ್ ತನಕ ವರ್ಕ್ ಫ್ರಮ್ ಹೋಮ್

ಈ ಸಮಸ್ಯೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು 8/20//20, 1.30ಕ್ಕೆ ನೀಡುತ್ತೇವೆ. ಆಗ ಸಮಸ್ಯೆ ನಿವಾರಣೆ ಆಗಬಹುದು ಎಂದು ನಿರೀಕ್ಷಿಸುತ್ತಿದ್ದೇವೆ ಎಂದು ಗೂಗಲ್ ಪ್ರತಿಕ್ರಿಯೆ ನೀಡಿದೆ. ಇಮೇಲ್ ಗೆ ಅಟ್ಯಾಚ್ ಮೆಂಟ್ ಮಾಡುವುದಕ್ಕೆ ಸಮಸ್ಯೆಯಾಗುತ್ತಿದೆ ಎಂದು ಕೆಲವು ಬಳಕೆದಾರರು ಹೇಳಿದ್ದಾರೆ.

ಗೂಗಲ್ ಸೇವೆಯಲ್ಲಿ ವಿಶ್ವದಾದ್ಯಂತ ವ್ಯತ್ಯಯ; ಕಾರಣ ತಿಳಿಯಲು ತನಿಖೆ

ಗೂಗಲ್ ಸೇವೆಯಲ್ಲಿ ಸಮಸ್ಯೆ ಇರುವುದರಿಂದ ವಿಶ್ವದ ಕೆಲವು ಭಾಗಗಳಲ್ಲಿ #Gmail ಟ್ರೆಂಡಿಂಗ್ ಆಗಿದೆ. ಜಿಮೇಲ್ ಜತೆಗೆ ಗೂಗಲ್ ಡ್ರೈವ್, ಗೂಗಲ್ ಡಾಕ್ಸ್, ಗೂಗಲ್ ಮೀಟ್ ಕೂಡ ಜಾಗತಿಕವಾಗಿ ಕಾರ್ಯ ನಿರ್ವಹಣೆ ಡೌನ್ ಆಗಿದೆ. ಗುರುವಾರ ಬೆಳಗ್ಗೆಯಿಂದ ಹಲವು ಬಳಕೆದಾರರು ಗೂಗಲ್ ಡ್ರೈವ್ ಗೆ ಫೈಲ್ ಗಳನ್ನು ಅಪ್ ಲೋಡ್ ಮಾಡುತ್ತಿದ್ದಾರೆ. ಗೂಗಲ್ ಡಾಕ್ಸ್ ಗೆ ಮಾಹಿತಿ ಬರೆಯುತ್ತಿದ್ದಾರೆ ಅಥವಾ ಗೂಗಲ್ ಮೀಟ್ ಬಳಸಿ ವಿಡಿಯೋ ಕಾಲ್ ಮಾಡಿ ದೂರು ವರದಿ ಮಾಡುತ್ತಿದ್ದಾರೆ.

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ವಿಶ್ವದಾದ್ಯಂತ ವರ್ಕ್ ಫ್ರಮ್ ಹೋಮ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ತನ್ನ ಸೇವೆಗಳನ್ನು ಮತ್ತೆ ಮೊದಲಿನಂತೆ ಮಾಡಲು ಗೂಗಲ್ ಸಕ್ರಿಯವಾಗಿ ತೊಡಗಿಕೊಂಡಿದೆ. ಈ ಸಮಸ್ಯೆಗೆ ಕಾರಣ ಏನು ಎಂಬುದನ್ನು ತಿಳಿಯಬೇಕಿದೆ.

English summary

Google Service Glitches Around The World; Users Cannot Send Mails

Google company services face glitches around the world. People complain about cannot send mails and also other services not available.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X