For Quick Alerts
ALLOW NOTIFICATIONS  
For Daily Alerts

2020ರ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ಕಡಿತ ಸಾಧ್ಯತೆ

|

ದೇಶದಲ್ಲಿನ ಮಂದಗತಿಯ ಆರ್ಥಿಕತೆಗೆ ಚುರುಕು ಮುಟ್ಟಿಸಲು 2020ರ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ಕಡಿತಗೊಳಿಸುವ ಸಾಧ್ಯತೆ ಇದೆ. ಜನರಲ್ಲಿ ಬಳಕೆಯ ಪ್ರಮಾಣವನ್ನು ಹೆಚ್ಚಿಸಲು ಮತ್ತು ಬೆಳವಣಿಗೆ ದರವನ್ನು ಪುನರುಜ್ಜೀವನಗೊಳಿಸಲು ತೆರಿಗೆ ಕಡಿತಕ್ಕೆ ಕೇಂದ್ರ ಚಿಂತನೆ ನಡೆಸಿದೆ.

 

2020ರಲ್ಲಿ ಮಂಡಿಸಲಾಗುವ ಬಜೆಟ್ ಕುರಿತು ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿದ್ಧತೆ ನಡೆಸುತ್ತಿದ್ದಾರೆ. ಯಾವುದೇ ವಿನಾಯಿತಿಗಳಿಲ್ಲದ ಸಮರೀತಿಯ ತೆರಿಗೆ ದರ, ಹೆಚ್ಚಿನ ಆದಾಯ ಗಳಿಸುವವರಿಗೆ ಹೊಸ ರೀತಿಯ ತೆರಿಗೆ ಹಾಗೂ ಕಾರ್ಪೋರೇಟ್ ತೆರಿಗೆಗೆ ಅನುಗುಣವಾಗಿ ವೈಯಕ್ತಿಕ ಆದಾಯ ತೆರಿಗೆಯನ್ನು ಕಡಿತಗೊಳಿಸುವ ಪ್ರಸ್ತಾಪಗಳನ್ನು ಬಜೆಟ್‌ಗೆ ಮುಂಚಿತವಾಗಿ ಪರಿಶೀಲಿಸಲಾಗುತ್ತಿದೆ.

2020ರ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ಕಡಿತ ಸಾಧ್ಯತೆ

ಈ ವಿಚಾರವಾಗಿ ಉನ್ನತ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಪ್ರಸ್ತಾಪಗಳನ್ನು ಹಣಕಾಸು ಸಚಿವಾಲಯ ಪರವಾಗಿ ಮತ್ತು ವಿರುದ್ಧವಾಗಿ ವಾದಗಳನ್ನು ಮಂಡಿಸಲಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಬಜೆಟ್ ಮಂಡಿಸಲಾಗುತ್ತದೆ.

'' ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಲಾಗುತ್ತದೆ. ಅಂತಹ ಯಾವುದೇ ಕ್ರಮವನ್ನು ಲಾಭದ ಹಿನ್ನೆಲೆಯಲ್ಲಿ ಪರಿಶೀಲಿಸುವ ಅಗತ್ಯವಿರುತ್ತದೆ. ಅದು ಒಟ್ಟಾರೆ ಆರ್ಥಿಕತೆಗೆ ತರುವ ವೆಚ್ಚಕ್ಕೆ ತಗುಲುತ್ತದೆ'' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದಾಯ ತೆರಿಗೆ ಕಡಿತಕ್ಕೆ ಪರ್ಯಾಯವೆಂದರೆ ಪಿಎಂ-ಕಿಸಾನ್‌ನಂತಹ ಯೋಜನೆಗಳ ಮೂಲಕ ನೇರವಾಗಿ ಜನರ ಕೈನಲ್ಲಿ ಹೆಚ್ಚಿನ ಹಣವನ್ನು ಇಡುವುದು ಅಥವಾ ಮೂಲ ಸೌಕರ್ಯಗಳ ಮೇಲಿನ ವೆಚ್ಚವನ್ನು ಹೆಚ್ಚಿಸುವುದು. ಇದರಿಂದ ಆದಾಯ ತೆರಿಗೆ ಪಾವತಿಸುವ 30 ಮಿಲಿಯನ್ ವ್ಯಕ್ತಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

English summary

Government Eyes On Income Tax Cuts: Budget 2020

Government eyes ways of boosting consumption and reviving growth planning to cut income tax
Story first published: Thursday, December 26, 2019, 12:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X