For Quick Alerts
ALLOW NOTIFICATIONS  
For Daily Alerts

ಸಣ್ಣ ಪ್ರಮಾಣದ ಜಿಎಸ್ ಟಿ ಪಾವತಿದಾರರಿಗೆ QRMP ಯೋಜನೆ ಶುರು

|

ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಪದ್ಧತಿ ಅಡಿಯಲ್ಲಿ ಸರ್ಕಾರದಿಂದ ಕ್ವಾರ್ಟರ್ಲಿ ರಿಟರ್ನ್ ಫೈಲಿಂಗ್ ಅಂಡ್ ಮಂತ್ಲಿ ಪೇಮೆಂಟ್ ಟ್ಯಾಕ್ಸಸ್ (QRMP) ಯೋಜನೆಯನ್ನು ಸಣ್ಣ ತೆರಿಗೆ ಪಾವತಿದಾರರಿಗಾಗಿ ಪರಿಚಯಿಸಲಾಗಿದೆ.

ಅರ್ಹತೆ: ತೆರಿಗೆದಾರರ ಸರಾಸರಿ ವಾರ್ಷಿಕ ವಹಿವಾಟು ಈ ಹಿಂದಿನ ಆರ್ಥಿಕ ವರ್ಷದಲ್ಲಿ 5 ಕೋಟಿ ರುಪಾಯಿ ಇರಬೇಕು. ಮತ್ತು ನವೆಂಬರ್ 30, 2020ರೊಳಗೆ ಯಾರು ತಮ್ಮ ರಿಟರ್ನ್ ಫೈಲ್ ಮಾಡಿರುತ್ತಾರೋ ಅವರು ಈ ಯೋಜನೆಗೆ ಅರ್ಹರು.

ಆಧಾರ್ ಇಲ್ಲದ ಜಿಎಸ್ ಟಿ ನೋಂದಣಿಗೆ ಹೊಸ ನಿಯಮ

ಈ ಯೋಜನೆ ಅಡಿಯಲ್ಲಿ ನೋಂದಾಯಿತ ತೆರಿಗೆದಾರರು ಮೂರು ತಿಂಗಳಿಗೊಮ್ಮೆ ರಿಟರ್ನ್ಸ್ ಫೈಲ್ ಮಾಡಬಹುದು ಮತ್ತು ತಿಂಗಳ ತೆರಿಗೆಯನ್ನು ಸಲ್ಲಿಸಬಹುದು. ಇದು ಜನವರಿ 1, 2021ರಿಂದ ಜಾರಿಗೆ ಬರುತ್ತದೆ. ಡಿಸೆಂಬರ್ 5ರಿಂದ QRMP ಆರಂಭವಾಗಿದೆ. 5 ಕೋಟಿ ರುಪಾಯಿಯೊಳಗೆ ವಹಿವಾಟು ಇರುವವರು GSTR-1 ಅಥವಾ GSTR-3B ರಿಟರ್ನ್ಸ್ ಅನ್ನು ತ್ರೈಮಾಸಿಕವಾಗಿ ಜನವರಿಯಿಂದ ಮಾರ್ಚ್ ಅವಧಿಗೆ ಫೈಲ್ ಮಾಡಲು ಶುರು ಮಾಡಬಹುದು.

ಸಣ್ಣ ಪ್ರಮಾಣದ ಜಿಎಸ್ ಟಿ ಪಾವತಿದಾರರಿಗೆ QRMP ಯೋಜನೆ ಶುರು

 

ಜಿಎಸ್ ಟಿ ಪಾವತಿಯನ್ನು ಚಲನ್ ಮೂಲಕವಾಗಿ ತಿಂಗಳಿಗೆ ತಿಂಗಳಿಗೆ ಎಂಬ ಆಧಾರದಲ್ಲಿ ಪಾವತಿಸಬಹುದು. ಒಂದೋ ಸೆಲ್ಫ್ ಅಸೆಸ್ ಮೆಂಟ್ ತಿಂಗಳ ಜವಾಬ್ದಾರಿ ಮೂಲಕ ಅಥವಾ ಆ ಹಿಂದಿನ GSTR-3B ಜವಾಬ್ದಾರಿಯ 35%ನಷ್ಟು ನಿವ್ವಳ ನಗದು ಲೆಕ್ಕಕ್ಕೆ ಗಣನೆಗೆ ತೆಗೆದುಕೊಳ್ಳಬಹುದು. GSTR-1 ಮತ್ತು GSTR-3B ಎರಡನ್ನೂ ಎಸ್ಸೆಮ್ಮೆಸ್ ಮೂಲಕ ಫೈಲ್ ಮಾಡಬಹುದು.

English summary

Government Launched QRMP Scheme For Small GST Tax Payers

Central government on December 5th launched QRMP (Quarterly Return And Monthly Payment) scheme for small GST tax payers.
Company Search
COVID-19