For Quick Alerts
ALLOW NOTIFICATIONS  
For Daily Alerts

ಅಕ್ರಮ ಹಣ ವರ್ಗಾವಣೆ: ಕಾಂಗ್ರೆಸ್ ನೇತೃತ್ವದ ಟ್ರಸ್ಟ್‌ಗಳಿಗೆ ಸಂಕಷ್ಟ

|

ನವದೆಹಲಿ: ಅಕ್ರಮ ಹಣ ವರ್ಗಾವಣೆ, ಆದಾಯ ತೆರಿಗೆ ಕಾಯ್ದೆ ಮತ್ತು ವಿದೇಶಿ ದೇಣಿಗೆಗಳ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ರಾಜೀವ್ ಗಾಂಧಿ ಫೌಂಡೇಶನ್ (ಆರ್‌ಜಿಎಫ್), ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ವಿರುದ್ಧ ತನಿಖೆಯನ್ನು ನಡೆಸಲು ಕೇಂದ್ರ ಗೃಹ ಸಚಿವಾಲಯವು ಅಂತರ ಸಚಿವಾಲಯ ಸಮಿತಿಯನ್ನು ರಚಿಸಿದೆ.

 

'ಪ್ರಧಾನಮಂತ್ರಿ ಪರಿಹಾರ ನಿಧಿಯ ಹಣ ರಾಜೀವ್ ಗಾಂಧಿ ಟ್ರಸ್ಟ್‌ಗೆ ಹೋಗುತ್ತಿತ್ತು''ಪ್ರಧಾನಮಂತ್ರಿ ಪರಿಹಾರ ನಿಧಿಯ ಹಣ ರಾಜೀವ್ ಗಾಂಧಿ ಟ್ರಸ್ಟ್‌ಗೆ ಹೋಗುತ್ತಿತ್ತು'

ಈ ಮೂರು ಟ್ರಸ್ಟ್‌ಗಳಿಗೆ ಯುಪಿಎ ಒಂದು ಮತ್ತು ಎರಡನೇ ಅವಧಿಯಲ್ಲಿ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಕೋಟ್ಯಾಂತರ ರುಪಾಯಿ ಹಣ ವರ್ಗಾವಣೆ ಆಗಿದೆ ಎಂದು ಬಿಜೆಪಿ ಆರೋಪಿಸಿತ್ತು.

ಗೃಹ ಸಚಿವಾಲಯದ ವಕ್ತಾರರು, ಜಾರಿ ನಿರ್ದೇಶನಾಲಯದ (ಇಡಿ) ವಿಶೇಷ ನಿರ್ದೇಶಕರು ಅಂತರ ಸಚಿವಾಲಯ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ ಎಂದು ಹೇಳಿದ್ದಾರೆ. ಕೇಂದ್ರ ತನಿಖಾ ದಳ (ಸಿಬಿಐ) ಕೂಡ ಸಮಿತಿಯ ಭಾಗವಾಗಲಿದೆ.

ಕಾಂಗ್ರೆಸ್ ಮುಖಂಡರ ನೇತೃತ್ವ

ಕಾಂಗ್ರೆಸ್ ಮುಖಂಡರ ನೇತೃತ್ವ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಪಿ ಚಿದಂಬರಂ ಅವರು ರಾಜೀವ್ ಗಾಂಧಿ ಫೌಂಡೇಶನ್ ಟ್ರಸ್ಟಿಗಳಾಗಿದ್ದು, ಜೂನ್ 1991 ರಲ್ಲಿ ಸ್ಥಾಪಿಸಲಾಗಿತ್ತು. ಸೋನಿಯಾ ಗಾಂಧಿ ಆರ್‌ಜಿಎಫ್ ಮತ್ತು ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ. ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್‌ನ ಕಾರ್ಯಗಳನ್ನೂ ಅವರು ನೋಡಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಆರೋಪಿಸಿತ್ತು

ಕಾಂಗ್ರೆಸ್ ಆರೋಪಿಸಿತ್ತು

ಪ್ರಸ್ತುತ ಕೊರೊನಾ ಪಿಎಂ ರಿಲೀಫ್ ಪಂಡ್‌ನಿಂದ ಬಿಜೆಪಿ ಹಣ ದುರುಪಯೋಗ ಪಡಿಸಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಕಾಂಗ್ರೆಸ್ ನಡೆಸುವ ಟ್ರಸ್ಟ್‌ಗಳಿಗೆ ಯುಪಿಎ ಒಂದು ಮತ್ತು ಎರಡನೇ ಅವಧಿಯಲ್ಲಿ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಕೋಟ್ಯಾಂತರ ರುಪಾಯಿ ಹಣ ವರ್ಗಾವಣೆ ಆಗಿದೆ ಎಂದು ಬಿಜೆಪಿ ಆರೋಪಿಸಿತ್ತು.

ಲಜ್ಜೆಗೆಟ್ಟ ವಂಚನೆ
 

ಲಜ್ಜೆಗೆಟ್ಟ ವಂಚನೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯ ಹಣವನ್ನು ಆರ್‌ಜಿಎಫ್‌ಗೆ ದೇಣಿಗೆ ನೀಡಿದೆ ಎಂದು ಆರೋಪಿಸಿದ್ದರು ಕಾಂಗ್ರೆಸ್ ಲಜ್ಜೆಗೆಟ್ಟ ವಂಚನೆ ಮಾಡಿದೆ ಎಂದು ಆರೋಪಿಸಿದ್ದರು.

ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಹಣವನ್ನು ದಾನ ಮಾಡುತ್ತಿತ್ತು

ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಹಣವನ್ನು ದಾನ ಮಾಡುತ್ತಿತ್ತು

ಪಿಎಂಎನ್‌ಆರ್‌ಎಫ್, ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಬದಲು, ಯುಪಿಎ ವರ್ಷಗಳಲ್ಲಿ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಹಣವನ್ನು ದಾನ ಮಾಡುತ್ತಿತ್ತು. ಪಿಎಂಎನ್‌ಆರ್‌ಎಫ್ ಮಂಡಳಿಯಲ್ಲಿ ಸೋನಿಯಾ ಗಾಂಧಿ ಇದ್ದರು. ಅವರೇ ಆರ್‌ಜಿಎಫ್‌ಗೆ ಅಧ್ಯಕ್ಷರಾಗಿದ್ದರು ಎಂದು ನಡ್ಡಾ ಆರೋಪಿಸಿದ್ದರು.

English summary

Government Panel to Handle Investigations Against 3 Gandhi Family Trusts

PM Care Fund Illegal Money Transfer: Home Ministry Investigation On Congress Led Trusts
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X