For Quick Alerts
ALLOW NOTIFICATIONS  
For Daily Alerts

ಏರ್‌ ಇಂಡಿಯಾ ಸಂಪೂರ್ಣ ಪಾಲು ಮಾರಾಟಕ್ಕೆ ಬಿಡ್ ಆಹ್ವಾನಿಸಿದ ಕೇಂದ್ರ ಸರ್ಕಾರ

|

ತೀವ್ರ ನಷ್ಟಕ್ಕೆ ತುತ್ತಾಗಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಸಂಪೂರ್ಣ ಪಾಲನ್ನು ಮಾರಾಟ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. 2018 ರಲ್ಲಿ ಒಂದೇ ಒಂದು ಬಿಡ್ ಅನ್ನು ಸೆಳೆಯಲು ವಿಫಲವಾದ ನಂತರ ಏರ್ ಇಂಡಿಯಾದ ತನ್ನ ಸಂಪೂರ್ಣ ಪಾಲನ್ನು ಮಾರಾಟಕ್ಕೆ ಮುಂದಾಗಿದೆ.

ಸೋಮವಾರ ಬಿಡುಗಡೆಯಾದ ಏರ್ ಇಂಡಿಯಾದ ಆಸಕ್ತಿಯ ಅಭಿವ್ಯಕ್ತಿಗಳನ್ನು ಆಹ್ವಾನಿಸುವ ದಾಖಲೆ ಪ್ರಕಾರ ಏರ್ ಇಂಡಿಯಾ ಜೊತೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ 50 ಪರ್ಸೆಂಟ್ ಪಾಲುದಾರಿಕೆ ಹೊಂದಿರುವ ಏರ್ ಇಂಡಿಯಾ ಎಸ್‌ಎಟಿಎಸ್ ಏರ್‌ಫೋರ್ಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮಾರಾಟಕ್ಕೂ ಸರ್ಕಾರ ಮುಂದಾಗಿದ್ದು, ಬಿಡ್‌ ಮಾಡಲು ಆಹ್ವಾನಿಸಿದೆ.

ಏರ್‌ ಇಂಡಿಯಾ ಸಂಪೂರ್ಣ ಪಾಲು ಮಾರಾಟಕ್ಕೆ ಬಿಡ್ ಆಹ್ವಾನಿಸಿದ ಸರ್ಕಾರ

2018 ರಲ್ಲಿ ಕೇಂದ್ರ ಸರ್ಕಾರ ಏರ್ ಇಂಡಿಯಾದಲ್ಲಿ 76 ಪರ್ಸೆಂಟ್ ಪಾಲನ್ನು ಮಾರಾಟ ಮಾಡಲು ಮತ್ತು ಅದರ ಸಾಲದ ಸುಮಾರು 50,000 ಕೋಟಿ ರುಪಾಯಿ ಹಣವನ್ನು ತೀರಿಸಲು ಪ್ರಯತ್ನಿಸಿತ್ತು, ಈ ಸಮಯದಲ್ಲಿ ಸಂಭಾವ್ಯ ಖರೀದಿದಾರರು ತುಂಬಾ ಕಠಿಣವೆಂದು ಹಿಂದೆ ಸರಿದಿದ್ದರು. ಆದರೆ ಈಗ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಸರ್ಕಾರ ಮುಂದಾಗಿದೆ.

ಏರ್‌ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎರಡೂ ಸಂಸ್ಥೆಗಳ ಒಟ್ಟು ಸಾಲ 60,074 ಕೋಟಿ ಇದ್ದು, ಬಿಡ್ ಮಾಡಿ ಖರೀದಿಸುವವರು 23,286 ಕೋಟಿ ಸಾಲ ಹೊರೆ ಹೊರಬೇಕಾಗುತ್ತದೆ. ಉಳಿದ 27,000 ಕೋಟಿ ಸಾಲವನ್ನು ಸರ್ಕಾರವೇ ಭರಿಸಲಿದೆ.

ಈ ಬೃಹತ್ ಬಿಡ್ ಪ್ರಕ್ರಿಯೆಗೆ ಮಾರ್ಚ್‌ 17 ಕೊನೆಯ ದಿನಾಂಕವಾಗಿದೆ. ಬಿಡ್‌ನ ಅಂತಿಮ ಫಲಿತಾಂಶ ಮಾರ್ಚ್‌ 31ರೊಳಗೆ ಹೊರಬೀಳಲಿದೆ.

English summary

Govt Sell Entire Stake In Air India

The government on Monday announced plans to sell its entire stake in Air India
Story first published: Monday, January 27, 2020, 13:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X