ಲಾಕ್‌ಡೌನ್ ಅವಧಿಯಲ್ಲಿ ಬುಕ್ಕಿಂಗ್ ಮಾಡಲಾದ ವಿಮಾನ ಟಿಕೆಟ್‌ಗಳ ಹಣ ಮರುಪಾವತಿ

ಲಾಕ್ ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್ ಗಳ ಹಣವನ್ನು ಪೂರ್ತಿಯಾಗಿ ಮರುಪಾವತಿ ಮಾಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.

ಮೊದಲ ಹಂತದ ಲಾಕ್ ಡೌನ್ ನಿಂದ ಮೇ.3 ವರೆಗೆ ಕಾಯ್ದಿರಿಸಲಾದ ಟಿಕೆಟ್ ಗಳಿಗೆ ಪ್ರಯಾಣಿಕರು ಕೇಳಿದಲ್ಲಿ, ರದ್ದತಿ ಶುಲ್ಕವಿಲ್ಲದೇ ಪೂರ್ಣ ಹಣವನ್ನು ವಾಪಸ್ ನೀಡಲಾಗುತ್ತದೆ. ಮಾ.25 ರಿಂದ ಏ.14 ಅವಧಿಗೆ ಟಿಕೆಟ್ ಬುಕ್ ಮಾಡಿದ್ದರೆ ಏರ್‌ಲೈನ್ಸ್‌ ನಿಂದ ಪೂರ್ತಿ ಹಣವನ್ನು ವಾಪಸ್ ನೀಡಲಾಗುತ್ತದೆ. ಟಿಕೆಟ್ ರದ್ದುಗೊಳಿಸಲು ಮನವಿ ಮಾಡಿದ ಮೂರು ವಾರಗಳಲ್ಲಿ ಮರುಪಾವತಿ ಹಣ ಖಾತೆಗೆ ಸೇರಲಿದೆ ಎಂದು ಸಚಿವಾಲಯ ತಿಳಿಸಿದೆ.

ಲಾಕ್‌ಡೌನ್ ಅವಧಿಯಲ್ಲಿ ಬುಕ್ಕಿಂಗ್ ಮಾಡಲಾದ ವಿಮಾನ ಟಿಕೆಟ್ ಹಣ ವಾಪಸ್

''ಕೊರೊನಾವೈರಸ್ ಎದುರಿಸಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಾಡಿದ ಕಾರಣ ರದ್ದಾದ ವಿಮಾನಗಳಿಗೆ ಮರುಪಾವತಿ ಮಾಡುವ ಬಗ್ಗೆ ವಾಯು ಪ್ರಯಾಣಿಕರಿಂದ ಕುಂದುಕೊರತೆಗಳನ್ನು ಸ್ವೀಕರಿಸಲಾಗಿದೆ. ಲಾಕ್‌ಡೌನ್ ಕಾರಣದಿಂದಾಗಿ ಅಮಾನತುಗೊಂಡ ವಿಮಾನಗಳಿಗಾಗಿ ಬುಕ್ ಮಾಡಲಾದ ದೇಶೀಯ ಮತ್ತು ಅಂತರರಾಷ್ಟ್ರೀಯ ಟಿಕೆಟ್‌ಗಳಿಗೆ ಮರುಪಾವತಿ ಮಾಡುವ ಬಗ್ಗೆ ಸಲಹೆಗಳನ್ನು ನೀಡಲಾಗಿದೆ ''ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ದೇಶಿಯ ವಿಮಾನಯಾನ ಸಂಸ್ಥೆಗಳು ಮರುಪಾವತಿ ಮಾಡಲು ಒಪ್ಪದೇ ಮುಂದಿನ ಬಾರಿಯ ವಿಮಾನ ಪ್ರಯಾಣದ ವೇಳೆ (ಹೊಂದಾಣಿಕೆ)ಇದನ್ನು ಬಳಕೆ ಮಾಡಿಕೊಳ್ಳಬೇಕೆಂದು ಹೇಳುತ್ತಿವೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಮಾನಯಾನ ಸಚಿವಾಲಯ ಸ್ಪಷ್ಟನೆ ನೀಡಿದೆ.

ಲಾಕ್ ಡೌನ್ ಅವಧಿಯಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಬಗ್ಗೆ ಚರ್ಚಿಸಲು ಹಿರಿಯ ವಾಯುಯಾನ ಸಚಿವಾಲಯದ ಅಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿಮಾನಯಾನ ಅಧಿಕಾರಿಗಳನ್ನು ಬುಧವಾರ ಭೇಟಿಯಾಗಿ ಚರ್ಚಿಸಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+