For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ ತಿಂಗಳಲ್ಲಿ 1.03 ಲಕ್ಷ ಕೋಟಿ ರುಪಾಯಿ ಜಿಎಸ್‌ಟಿ ಸಂಗ್ರಹ

|

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹವು ಸತತ 2ನೇ ತಿಂಗಳು 1 ಲಕ್ಷ ಕೋಟಿ ರುಪಾಯಿ ದಾಟಿದ್ದು, ಕಳೆದ ಡಿಸೆಂಬರ್‌ನಲ್ಲಿ 1.03 ಲಕ್ಷ ಕೋಟಿ ರುಪಾಯಿ ತೆರಿಗೆ ಸಂಗ್ರಹವಾಗಿದೆ.

ಕೇಂದ್ರ ಸರ್ಕಾರದ ಉತ್ತೇಜನಕಾರಿ ಕ್ರಮಗಳಿಂದ ಜಿಎಸ್‌ಟಿ ಸಂಗ್ರಹದ ಮೊತ್ತವು 2ನೇ ಬಾರಿಗೆ 1 ಲಕ್ಷ ಕೋಟಿ ರುಪಾಯಿ ಗಡಿದಾಟಿದ್ದು, ಡಿಸೆಂಬರ್‌ನಲ್ಲಿ 9 ಪರ್ಸೆಂಟ್ ಏರಿಕೆಯಾಗಿ 1,03,184 ಕೋಟಿ ರುಪಾಯಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ತೆರಿಗೆ ಸಂಗ್ರಹವು 94,726 ಕೋಟಿ ರುಪಾಯಿಯಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ 16 ಪರ್ಸೆಂಟ್ ಹೆಚ್ಚಳವಾಗಿದೆ.

ಡಿಸೆಂಬರ್ ತಿಂಗಳಲ್ಲಿ 1.03 ಲಕ್ಷ ಕೋಟಿ ರುಪಾಯಿ ಜಿಎಸ್‌ಟಿ ಸಂಗ್ರಹ

ಕಳೆದ ತಿಂಗಳು ಒಟ್ಟು 1,03,184 ಕೋಟಿ ರುಪಾಯಿ ಜಿಎಸ್‌ಟಿ ಸಂಗ್ರಹವಾಗಿದ್ದು, ಇದರಲ್ಲಿ CGST 19,962 ಕೋಟಿ ರುಪಾಯಿ, SGST 26,792 ಕೋಟಿ ರುಪಾಯಿ, IGST 48,099 ಕೋಟಿ ರುಪಾಯಿ(ಆಮದು ಮೇಲಿನ ಸುಂಕ 20,948 ಕೋಟಿ ರು.) ಮತ್ತು ಸೆಸ್ 8,331 ಕೋಟಿ ರುಪಾಯಿ ಸಂಗ್ರಹವಾಗಿದೆ.

1 ಲಕ್ಷ ಕೋಟಿ ದಾಟಿದ ನವೆಂಬರ್ ತಿಂಗಳ GST ಸಂಗ್ರಹ1 ಲಕ್ಷ ಕೋಟಿ ದಾಟಿದ ನವೆಂಬರ್ ತಿಂಗಳ GST ಸಂಗ್ರಹ

ನವೆಂಬರ್ ತಿಂಗಳ ಜಿಎಸ್‌ಟಿಆರ್ 3ಬಿ ರಿಟನ್ಸ್ ಸಲ್ಲಿಕೆಗಳ ಸಂಖ್ಯೆಯು ಡಿಸೆಂಬರ್ ಅಂತ್ಯದ ವೇಳೆಗೆ 81.21 ಲಕ್ಷಕ್ಕೆ ತಲುಪಿದೆ. ಕಳೆದ ತಿಂಗಳು ಸಂಗ್ರಹವಾದ ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ 2ನೇ ಸ್ಥಾನ ಪಡೆದಿದೆ.

English summary

GST Collection Crossed 1 lakh Crore Rupees In December

GST revenue collection remained above 1.03 lakh crore in december. It is a second month in a row crossed 1 lakh crore
Story first published: Thursday, January 2, 2020, 9:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X