August 2022 GST collection : ಆಗಸ್ಟ್ ಜಿಎಸ್‌ಟಿ ಸಂಗ್ರಹ YoYಕ್ಕೆ ಶೇ.28ರಷ್ಟು ಏರಿಕೆ
ಆಗಸ್ಟ್ ತಿಂಗಳಿನಲ್ಲಿ ಒಟ್ಟು ಜಿಎಸ್‌ಟಿ 1,43,612 ಕೋಟಿ ರೂಪಾಯಿ ಸಂಗ್ರಹವಾಗಿದೆ. ವರ್ಷದಿಂದ ವರ್ಷಕ್ಕೆ ಶೇಕಡ 28ರಷ್ಟು ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.
ಕಳೆದ ಆರು ತಿಂಗಳಿನಿಂದ ಮಾಸಿಕ ಜಿಎಸ್‌ಟಿ ಸಂಗ್ರಹವು 1.4 ಲಕ್ಷ ಕೋಟಿ ರೂಪಾಯಿಗಿಂತ ಅಧಿಕವಾಗಿದೆ. ಐಜಿಎಸ್‌ಟಿಯಲ್ಲಿ 29,524 ಕೋಟಿ ರೂಪಾಯಿ ಸಿಜಿಎಸ್‌ಟಿ ಹಾಗೂ 25,119 ಕೋಟಿ ರೂಪಾಯಿ ಎಸ್‌ಜಿಎಸ್‌ಟಿ ಆಗಿದೆ. ಸಾಮಾನ್ಯ ಸೆಟಲ್‌ಮೆಂಟ್ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ 54,234 ಕೋಟಿ ರೂಪಾಯಿ ಸಿಜಿಎಸ್‌ಟಿ ಮತ್ತು 56,070 ಕೋಟಿ ರೂಪಾಯಿ ಎಸ್‌ಜಿಎಸ್‌ಟಿ ಲಭ್ಯವಾಗಲಿದೆ.
ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಕೆ ಮಾಡಿದಾಗ ಈ ವರ್ಷದ ಆಗಸ್ಟ್‌ನಲ್ಲಿ ಸರಕು ಸಾಮಾಗ್ರಿಗಳ ಆಮದಿನಿಂದಾಗಿ ಶೇಕಡ 57ರಷ್ಟು ಆದಾಯ ಸಂಗ್ರಹವಾಗಿದೆ. ಸ್ಥಳೀಯ ವಹಿವಾಟಿನಿಂದ (ಸೇವೆಯನ್ನು ಸೇರಿ) ಆದಾಯವು ಶೇಕಡ 19ರಷ್ಟು ಹೆಚ್ಚಳವಾಗಿದೆ.

ಇ ವೇ ಬಿಲ್‌ಗಳ ಬಗ್ಗೆ ಕೇಂದ್ರ ಸರ್ಕಾರ ಹೇಳುವುದೇನು?
"ಆರ್ಥಿಕವಾಗಿ ಕಂಡ ಚೇತರಿಕೆಯು ಜಿಎಸ್‌ಟಿ ಆದಾಯ ಸಂಗ್ರಹದ ಮೇಲೆ ಉತ್ತಮ ಪರಿಣಾಮ ಉಂಟು ಮಾಡಿದೆ. 2022ರ ಜುಲೈ ತಿಂಗಳಿನಲ್ಲಿ 7.6 ಕೋಟಿ ಇ ವೇ ಬಿಲ್‌ಗಳು ಜನರೇಟ್ ಮಾಡಲಾಗಿದೆ. ಇದು 2022ರ ಜೂನ್ ತಿಂಗಳಿಗಿಂತ ಸುಮಾರು 7.4 ಕೋಟಿ ಅಧಿಕವಾಗಿದೆ. ಹಾಗೆಯೇ 2021ರ ಜೂನ್ ತಿಂಗಳಿಗಿಂತ ಶೇಕಡ 19ರಷ್ಟು ಹೆಚ್ಚಾಗಿದೆ. 2021ರ ಜೂನ್ ತಿಂಗಳಿನಲ್ಲಿ ಇವೇ ಬುಲ್‌ಗಳು 6.4 ಕೋಟಿ ಜನರೇಟ್ ಆಗಿತ್ತು," ಎಂದು ಕೇಂದ್ರ ಹಣಕಾಸು ಸಚಿವಾಲಯವು ಮಾಹಿತಿಯನ್ನು ನೀಡಿದೆ.
ಜುಲೈ ತಿಂಗಳಿನಲ್ಲಿ 1.49 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹ ಮಾಡಲಾಗಿದೆ. ಜುಲೈ 2017ರಲ್ಲಿ ಜಿಎಸ್‌ಟಿ ಪರಿಚಯ ಮಾಡಿದ ಬಳಿಕ 2022ರ ಜುಲೈ ತಿಂಗಳಿನಲ್ಲಿ ಎರಡನೇ ಬಾರಿಗೆ ಭಾರೀ ಪ್ರಮಾಣದಲ್ಲಿ ಜಿಎಸ್‌ಟಿ ಸಂಗ್ರಹವಾಗಿದೆ.