For Quick Alerts
ALLOW NOTIFICATIONS  
For Daily Alerts

ಜಿಎಸ್‌ಟಿ ಪರಿಹಾರ ಪಾವತಿ ವಿಚಾರ: ಕೇಂದ್ರದ ಮೇಲೆ ಸಿದ್ದರಾಮಯ್ಯ ವಾಗ್ದಾಳಿ

|

ರಾಜ್ಯಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರ ಪಾವತಿಸುವುದನ್ನು ನಿಲ್ಲಿಸುವ ಕೇಂದ್ರದ ಕ್ರಮ ಒಕ್ಕೂಟ ವ್ಯವಸ್ಥೆಗೆ ಮರಣ ಶಾಸನ ಆಗಲಿದೆ ಮತ್ತು ರಾಜ್ಯಗಳನ್ನು ದಿವಾಳಿಯತ್ತ ಮುಖ ಮಾಡುವಂತೆ ಮಾಡಲಿದೆ ಎಂದು ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅನೇಕ ರಾಜ್ಯಗಳಲ್ಲಿ ಜನರು ಸಂಪನ್ಮೂಲ ಬಿಕ್ಕಟ್ಟಿನಿಂದ ಬಳಲುತ್ತಿರುವ ಕಾರಣ ಕೇಂದ್ರವು ರಾಜ್ಯಗಳಿಗೆ ಎಲ್ಲಾ ಬಗೆಯ ಬೆಂಬಲವನ್ನು ನೀಡಬೇಕು ಮತ್ತು ಆದಾಯವನ್ನು ಹೆಚ್ಚಿಸಲು ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಕಳಪೆ ತೆರಿಗೆ ಸಂಗ್ರಹ: ಹಣಕಾಸಿನ ಕೊರತೆ 6.62 ಲಕ್ಷ ಕೋಟಿ ರುಗೆ ಏರಿಕೆಕಳಪೆ ತೆರಿಗೆ ಸಂಗ್ರಹ: ಹಣಕಾಸಿನ ಕೊರತೆ 6.62 ಲಕ್ಷ ಕೋಟಿ ರುಗೆ ಏರಿಕೆ

ರಾಜ್ಯಗಳು ಅಭಿವೃದ್ಧಿಯತ್ತ ಗಮನ ಹರಿಸಲು ಸರ್ಕಾರವು ಜಿಎಸ್ಟಿ ಪರಿಹಾರವನ್ನು ಪಾವತಿಸಬೇಕೆಂದು ಒತ್ತಾಯಿಸುವುದಾಗಿ ಸಿದ್ದರಾಮಯ್ಯ ಗುರುವಾರ ಹೇಳಿದರು.

ಕೈಗಳನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ.

ಕೈಗಳನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ.

ಆರ್ಥಿಕ ಮಂದಗತಿಯಿಂದ ಅಥವಾ ಕೋವಿಡ್ -19 ರ ಕಾರಣದಿಂದಾಗಿ ಆದಾಯದ ಕುಸಿತವನ್ನು ಉಲ್ಲೇಖಿಸಿ ಕೇಂದ್ರವು ಹಣವನ್ನು ರವಾನಿಸುವ ಕೈಗಳನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಏಕೆಂದರೆ ರಾಜ್ಯಗಳಿಗೆ ಜಿಎಸ್ಟಿ ಪಾಲನ್ನು ನೀಡುವುದು ಕೇಂದ್ರದ ಬದ್ಧತೆಯಾಗಿದೆ ಎಂದು ಅವರು ಹೇಳಿದರು.

ಹೌಸಿಂಗ್ ಯೂನಿಯನ್ ಗಳಿಗೆ ಸಹಾಯ ಮಾಡುವುದು

ಹೌಸಿಂಗ್ ಯೂನಿಯನ್ ಗಳಿಗೆ ಸಹಾಯ ಮಾಡುವುದು

ಬಂಡವಾಳಶಾಹಿಗಳಿಗೆ ಮತ್ತು ಕಾರ್ಪೊರೇಟ್ ವಲಯಕ್ಕೆ ಅಪಾರ ಪ್ರಮಾಣದ ಭೂಮಿಯನ್ನು ಖರೀದಿಸಲು ಸಹಾಯ ಮಾಡುವ ಉದ್ದೇಶದಿಂದ ಬಿಜೆಪಿ ಭೂ ಸುಧಾರಣಾ ಕಾಯ್ದೆಯ ಸುಗ್ರೀವಾಜ್ಞೆಯನ್ನು ಮಂಡಿಸುತ್ತಿದೆ ಎಂದು ಅವರು ಆರೋಪಿಸಿದರು. ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿನ ಹೌಸಿಂಗ್ ಯೂನಿಯನ್ ಗಳಿಗೆ ಸಹಾಯ ಮಾಡುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಪರಿಹಾರವನ್ನು ನೀಡಲು ಸಾಧ್ಯ ಆಗದಿರಬಹುದು

ಪರಿಹಾರವನ್ನು ನೀಡಲು ಸಾಧ್ಯ ಆಗದಿರಬಹುದು

ರಾಜ್ಯಗಳಿಗೆ ಪಾವತಿ ಮಾಡಬೇಕಿರುವ ಸರಕು ಮತ್ತು ಸೇವಾ ತೆರಿಗೆ (GST) ಪರಿಹಾರವನ್ನು ನೀಡಲು ಸಾಧ್ಯ ಆಗದಿರಬಹುದು ಎಂದು ಕೇಂದ್ರ ಸರ್ಕಾರವು ಸಂಸದೀಯ ಸಮಿತಿಗೆ ಹೇಳಿದೆ.

ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆ

ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆ

ಮುಂಬರುವ ದಿನಗಳಲ್ಲಿ ರಾಜ್ಯಗಳಿಗೆ ನೀಡಬೇಕಾಗಿರುವ ಜಿಎಸ್ ಟಿ ಪರಿಹಾರವನ್ನು ಪೂರ್ತಿಯಾಗಿ ಪಾವತಿಸಲು ಕೇಂದ್ರಕ್ಕೆ ಸಾಧ್ಯವಾಗದಿರಬಹುದು. ಕೊರೊನಾ ಬಿಕ್ಕಟ್ಟಿನಿಂದ ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆ ಆಗಿದೆ ಎಂದು ಸರ್ಕಾರದಿಂದ ಹೇಳಿರುವುದಾಗಿ ವರದಿ ಆಗಿದೆ.

English summary

GST Relief Issue: Former Chief Minister Siddaramaiah Attacks On Center

GST Relief Issue: Former Chief Minister Siddaramaiah Attacks On Center
Story first published: Saturday, August 1, 2020, 11:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X