For Quick Alerts
ALLOW NOTIFICATIONS  
For Daily Alerts

ಡೊನಾಲ್ಡ್ ಟ್ರಂಪ್ 3 ಗಂಟೆ ಭೇಟಿಗೆ ಗುಜರಾತ್ ಸರ್ಕಾರಕ್ಕೆ ಎಷ್ಟು ಕೋಟಿ ಖರ್ಚು?

|

ಗುಜರಾತ್ ನ ಅಹ್ಮದಾಬಾದ್ ನಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಂದ ಹಾಗೆ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್. ಮಹಾತ್ಮ ಗಾಂಧಿ ಅವರ ಜನ್ಮ ಸ್ಥಳಕ್ಕೆ ಡೊನಾಲ್ಡ್ ಟ್ರಂಪ್ ಭೇಟಿ ನೀಡಲಿದ್ದಾರೆ. ನಿಮಗೆ ನೆನಪಿರಲಿ, ಮೋದಿ ಪ್ರಧಾನಿಯಾದ ಮೇಲೆ ಚೀನಾ, ಜಪಾನ್ ಹಾಗೂ ಇಸ್ರೇಲ್ ನಾಯಕರು ಸಹ ಅಹ್ಮದಾಬಾದ್ ಗೆ ಭೇಟಿ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಸಾಗಿಬರುವ ಹಾದಿಯುದ್ದಕ್ಕೂ 400 ಮೀಟರ್ ಗೋಡೆ ನಿರ್ಮಿಸಿ, ಕೊಳೆಗೇರಿಗಳು ಕಣ್ಣಿಗೆ ಬೀಳದಂತೆ ಮಾಡಲು ಪ್ರಯತ್ನ ನಡೆದಿದೆ ಎಂಬ ಮಾತಿದೆ. ಅಮೆರಿಕ ಅಧ್ಯಕ್ಷರ ಭೇಟಿ ಸಲುವಾಗಿ ಸಿದ್ಧತೆಗೆ ಅಹ್ಮದಾಬಾದ್ ಅಧಿಕಾರಿಗಳು 80ರಿಂದ 85 ಕೋಟಿ ರುಪಾಯಿ ಖರ್ಚು ಮಾಡುವ ಅಂದಾಜಿದೆ.

 

ನರೇಂದ್ರ ಮೋದಿ ನನ್ನ ಸ್ನೇಹಿತ, ಭಾರತಕ್ಕೆ ಹೋಗಲು ಎದುರು ನೋಡುತ್ತಿದ್ದೇನೆ: ಟ್ರಂಪ್

ಗುಜರಾತ್ ನ ಅಧಿಕಾರಿಗಳು ನೀಡುವ ಮಾಹಿತಿಯಂತೆ, ಡೊನಾಲ್ಡ್ ಟ್ರಂಪ್ ಮೂರು ಗಂಟೆಗಳ ಕಾಲ ಅಹ್ಮದಾಬಾದ್ ನಲ್ಲಿ ಇರಬಹುದು. ಸರಿ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತಿದ್ದಾರಲ್ಲ, ಗುಜರಾತ್ ನ ಗೃಹ ಸಚಿವಾಲಯದ 1.5% ವಾರ್ಷಿಕ ಬಜೆಟ್ ಗೆ ಇದು ಸಮ.

ಟ್ರಂಪ್ 3 ಗಂಟೆ ಭೇಟಿಗೆ ಗುಜರಾತ್ ಸರ್ಕಾರಕ್ಕೆ ಎಷ್ಟು ಕೋಟಿ ಖರ್ಚು?

12 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನೇಮಿಸುವ ನಿರೀಕ್ಷೆ ಇದೆ. ಆದ್ದರಿಂದ ಒಟ್ಟು ವೆಚ್ಚದಲ್ಲಿ ಭದ್ರತೆಗೆ ಸಂಬಂಧಿಸಿದ ಖರ್ಚೇ ಒಟ್ಟು ವೆಚ್ಚದ ಅರ್ಧದಷ್ಟಾಗಲಿದೆ ಎನ್ನಲಾಗುತ್ತಿದೆ. ಇನ್ನು ಅಹ್ಮದಾಬಾದ್ ಪಾಲಿಕೆಯಿಂದ ಹೊಸ ಕ್ರಿಕೆಟ್ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆ ವಿಸ್ತರಣೆ ಮತ್ತಿತರ ಮೂಲಸೌಕರ್ಯಕ್ಕಾಗಿ 30 ಕೋಟಿ ರುಪಾಯಿಯಷ್ಟು ಖರ್ಚು ಮಾಡಲಾಗಿದೆ.

1,10,000 ಮಂದಿ ವೀಕ್ಷಕರ ಸಾಮರ್ಥ್ಯದ ಮೊಟೇರಾ ಕ್ರೀಡಾಂಗಣದ ಉದ್ಘಾಟನೆ ಆಗುತ್ತಿದ್ದು, ವಿಶ್ವದ ಅತ್ಯಂತ ದೊಡ್ಡ ಕ್ರೀಡಾಂಗಣ ಎಂಬ ಶ್ರೇಯ ಹೊಂದಿದ್ದ ಮೆಲ್ಬೋರ್ನ್ ದಾಖಲೆಯನ್ನು ಅಳಿಸಿಹಾಕಲಿದೆ.

ಇನ್ನು ನಗರದ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ 6 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. ಟ್ರಂಪ್ ಪಾಲ್ಗೊಳ್ಳುವ ಕಾರ್ಯಕ್ರಮದ ವೆಚ್ಚ ಕೂಡ ದೊಡ್ಡ ಮಟ್ಟದ್ದಾಗಿರುತ್ತದೆ. ಅಂದ ಹಾಗೆ ಉತ್ತರಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ಗೆ ಕೂಡ ಟ್ರಂಪ್ ಭೇಟಿ ನೀಡುವ ಸಾಧ್ಯತೆ ಇದೆ.

English summary

Gujarat Government Spending Crores Of Rupees For Trump Visit

American president Donald Trump will visit Gujarat. For preparation how much money Gujarat government spending?
Story first published: Tuesday, February 18, 2020, 19:52 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more