For Quick Alerts
ALLOW NOTIFICATIONS  
For Daily Alerts

ಕ್ರಿಪ್ಟೋಕರೆನ್ಸಿ- ಹ್ಯಾಕರ್ಸ್‌ಗೆ ಸಿಕ್ಕಷ್ಟು ಸೀರುಂಡೆ; ಲೂಟಿಯಾದ ಹಣವೆಷ್ಟು?

|

ಕೆಲ ವರ್ಷಗಳಿಂದ ಬಲೂನಿನಂತೆ ಊದಿಕೊಂಡಿದ್ದ ಕ್ರಿಪ್ಟೋಕರೆನ್ಸಿಯ ಹವಾ ಈ ವರ್ಷ ಠುಸ್ ಆಗಿ ಹೋಗಿದೆ. ಕ್ರಿಪ್ಟೋ ಕಾಲ ಬಂತು ಎಂದು ಮುಗಿಬಿದ್ದು ಹೂಡಿಕೆ ಮಾಡಿರುವ ಜನರು ಕೋಟಿಕೋಟಿಯಷ್ಟು ಹಣ ಕಳೆದುಕೊಂಡಿದ್ದಾರೆ. ಆದರೆ ಹ್ಯಾಕರ್ಸ್ ಪಾಲಿಗೆ ಕ್ರಿಪ್ಟೋಕರೆನ್ಸಿಗಳು ಚಿನ್ನದ ಮೊಟ್ಟೆಗಳನ್ನಿಡುವ ಕೋಳಿಗಳಂತಾಗಿವೆ.

ಒಂದು ವರದಿ ಪ್ರಕಾರ ಈ ವರ್ಷ ವಿವಿಧ ಕ್ರಿಪ್ಟೋಕರೆನ್ಸಿಗಳಿಂದ ಹ್ಯಾಕರ್‌ಗಳು ಲೂಟಿ ಮಾಡಿದ ಹಣ 3 ಬಿಲಿಯನ್ ಡಾಲರ್ (ಸುಮಾರು 25 ಸಾವಿರ ಕೋಟಿ ರೂಪಾಯಿ) ಹಣ ಎಂದು ಹೇಳಲಾಗುತ್ತಿದೆ. ಇತ್ತೀಚೆಗಂತೂ ಕ್ರಿಪ್ಟೋಗಳ ಹ್ಯಾಕಿಂಗ್ ಇನ್ನೂ ಹೆಚ್ಚಾಗಿದೆ. ಕಳೆದ 10-12 ದಿನಗಳಲ್ಲೇ 718 ಮಿಲಿಯನ್ ಡಾಲರ್, ಅಂದರೆ ಸುಮಾರು 6 ಸಾವಿರ ಕೋಟಿ ರೂಪಾಯಿಯಷ್ಟು ಹಣವನ್ನು ಹ್ಯಾಕರ್‌ಗಳು ಲಪಟಾಯಿಸಿರುವುದು ತಿಳಿದುಬಂದಿದೆ.

ಭಾರತದ ನೇರ ಹಣ ವರ್ಗಾವಣೆ ವ್ಯವಸ್ಥೆಯನ್ನು ಹಾಡಿಹೊಗಳಿದ ಐಎಂಎಫ್ಭಾರತದ ನೇರ ಹಣ ವರ್ಗಾವಣೆ ವ್ಯವಸ್ಥೆಯನ್ನು ಹಾಡಿಹೊಗಳಿದ ಐಎಂಎಫ್

ಒಂದು ವರ್ಷದಲ್ಲಿ 3 ಬಿಲಿಯನ್ ಡಾಲರ್‌ಗಳಷ್ಟು ಹಣವನ್ನು ಹ್ಯಾಕ್ ಮಾಡಿ ಲಪಟಾಯಿಸಿರುವುದು ಇದೇ ಮೊದಲು. ಆ ಮಟ್ಟಿಗೆ ಇದು ದಾಖಲೆ ಎನಿಸಿದೆ.

ಕ್ರಿಪ್ಟೋ ಹ್ಯಾಕರ್ಸ್‌ಗೆ ಸಿಕ್ಕಷ್ಟು ಸೀರುಂಡೆ; ಲೂಟಿಯಾದ ಹಣವೆಷ್ಟು?

ಗಮನಿಸಬೇಕಾದ ಅಂಶ ಎಂದರೆ ಹ್ಯಾಕರ್‌ಗಳ ದಾಳಿಗೆ ಅತಿಹೆಚ್ಚು ಗುರಿಯಾಗಿರುವುದು ಡೀಸೆಂಟ್ರಲೈಸ್ಡ್ ಫೈನಾನ್ಸ್ (ಡೀಫೈ) ತಂತ್ರಜ್ಞಾನ ಉಪಯೋಗಿಸುವ ಕ್ರಿಪ್ಟೋಕರೆನ್ಸಿಗಳೆಯೇ. ರೋಮಿನ್ ನೆಟ್ವರ್ಕ್‌ನಿಂದಲೇ ಅತಿ ಹೆಚ್ಚು ಹಣವನ್ನು ಹ್ಯಾಕರ್‌ಗಳು ಲೂಟಿ ಮಾಡಿದ್ದಾರೆ. ವರ್ಮ್‌ಹೋಲ್, ನೊಮಾಡ್ ಬ್ರಿಡ್ಜ್, ವಿಂಟರ್‌ಮ್ಯೂಟ್, ಬೈನಾನ್ಸ್ ಬ್ರಿಡ್ಜ್, ಹಾರ್ಮೊನಿ ಬ್ರಿಡ್ಜ್ ಮೊದಲಾದ ಕ್ರಿಪ್ಟೋಗಳು ಹ್ಯಾಕರ್ಸ್ ದಾಳಿಗೆ ಹೆಚ್ಚು ತುತ್ತಾಗಿವೆ.

ಡೀಫೈ ಪ್ರೋಟೋಕಾಲ್‌ಗಳು ಸಾಫ್ಟ್‌ವೇರ್ ಆಧಾರಿತ ಅಲ್ಗಾರಿದಂ ಬಳಸುತ್ತವೆ. ಕೇಂದ್ರೀಯ ಮಧ್ಯಸ್ತಿಕೆಯನ್ನು (ಸೆಂಟ್ರಲ್ ಇಂಟರ್‌ಮೀಡಿಯರಿ) ಬಳಸದೆಯೇ ಕ್ರಿಪ್ಟೋ ಹೂಡಿಕೆದಾರರು ಡಿಜಿಟಲ್ ಲೆಡ್ಜರ್‌ಗಳಲ್ಲಿ ವಹಿವಾಟು ನಡೆಸಲು ಈ ತಂತ್ರಜ್ಞಾನ ಅನುಕೂಲ ಮಾಡಿಕೊಡುತ್ತದೆ. ಆದರೆ, ಇದರಲ್ಲಿರುವ ಕೆಲ ಭದ್ರತಾ ಲೋಪ, ಕೋಡಿಂಗ್ ದೌರ್ಬಲ್ಯವನ್ನು ಹ್ಯಾಕರ್‌ಗಳು ಸುಲಭವಾಗಿ ದುರ್ಬಳಕೆ ಮಾಡುವುದನ್ನು ಕಲಿತುಬಿಟ್ಟಿದ್ದಾರೆ.

ಡೀಸೆಂಟ್ರಲೈಸ್ಡ್ ಫೈನಾನ್ಸ್‌ನ ತಂತ್ರಜ್ಞಾನದಲ್ಲಿರುವ ಈ ಭದ್ರತಾ ಲೋಪವನ್ನು ಸರಿಪಡಿಸುವ ಕೆಲಸ ಅಗಬೇಕಿದೆ.

English summary

Hackers Record Loot over 3 billion USD Of Cryptocurrencies This Year

Hackers are said to have targeted cryptocurrencies and looted over 3 billion USD this year. This is a record loot according to a report.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X