For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲಿ ಅರ್ಧದಷ್ಟು ಕಾರ್ಮಿಕರು ಜೀವನೋಪಾಯವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ : ಐಎಲ್‌ಒ

|

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಜಾಗತಿಕವಾಗಿ ಕಾರ್ಮಿಕರ ಅರ್ಧದಷ್ಟು ಭಾಗವನ್ನು ಪ್ರತಿನಿಧಿಸುವ ಸುಮಾರು 1.6 ಬಿಲಿಯನ್ ಅನೌಪಚಾರಿಕ ಕಾರ್ಮಿಕರು ತಕ್ಷಣ ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಬುಧವಾರ ತಿಳಿಸಿದೆ.

 

ಕಳೆದ ತ್ರೈಮಾಸಿಕಕ್ಕಿಂತ ಎರಡನೇ ತ್ರೈಮಾಸಿಕದಲ್ಲಿ ಒಟ್ಟು ಕೆಲಸದ ಸಮಯವು 10.5 ಪರ್ಸೆಂಟ್ ಕಡಿಮೆಯಾಗಲಿದ್ದು, 305 ಮಿಲಿಯನ್ ಪೂರ್ಣ ಸಮಯದ ಉದ್ಯೋಗಗಳಿಗೆ ಸಮನಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಅಮೆರಿಕಾ, ಯುರೋಪ್ ಮತ್ತು ಮಧ್ಯ ಏಷ್ಯಾದ ಅತಿದೊಡ್ಡ ಕುಸಿತದ ಮುನ್ಸೂಚನೆಯಾಗಿದೆ ಎಂದು ಐಎಲ್ಒ ಹೇಳಿದೆ.

 
ವಿಶ್ವದಲ್ಲಿ ಅರ್ಧದಷ್ಟು ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿ: ILO

ಏಪ್ರಿಲ್ 7 ರಂದು ಐಎಲ್ಒ ಅಂದಾಜಿಸಿದ್ದ ಪ್ರಕಾರ 195 ಮಿಲಿಯನ್ ಕಾರ್ಮಿಕರ ಶ್ರಮಕ್ಕೆ ಸಮನಾದ ಕೆಲವು ಇಲ್ಲದಂತಾಗುತ್ತದೆ ಅಥವಾ ವಿಶ್ವಾದ್ಯಂತ 6.7 ಪರ್ಸೆಂಟ್ ಗಂಟೆಗಳು ತಗ್ಗುತ್ತದೆ ಎಂದು ಹೇಳಿತ್ತು. ಸುಮಾರು 436 ಮಿಲಿಯನ್ ಉದ್ಯಮಗಳು, ವ್ಯವಹಾರಗಳು ಅಥವಾ ಸ್ವಯಂ ಉದ್ಯೋಗಿಗಳು "ಹೆಚ್ಚಿನ ಅಪಾಯಗಳನ್ನು" ಎದುರಿಸುತ್ತಾರೆ ಎಂದು ಸಂಸ್ಥೆ ಹೇಳಿದೆ.

ಈಗಾಗಲೇ, ವಿಶ್ವದ ಎರಡು ಶತಕೋಟಿ ಅನೌಪಚಾರಿಕ ಕಾರ್ಮಿಕರ ವೇತನವು ಮೊದಲ ತಿಂಗಳಲ್ಲಿ ಜಾಗತಿಕ ಸರಾಸರಿ ಅಂದಾಜು 60 ಪರ್ಸೆಂಟ್‌ನಷ್ಟು ಕುಸಿದಿದೆ, ಪ್ರತಿ ಪ್ರದೇಶದಲ್ಲಿ ಬಿಕ್ಕಟ್ಟು ತೆರೆದುಕೊಂಡಿದೆ ಎಂದು ಐಎಲ್ಒ ತಿಳಿಸಿದೆ. ಜಾಗತಿಕವಾಗಿ 3.3 ಶತಕೋಟಿ ಅನೌಪಚಾರಿಕ ಕಾರ್ಮಿಕರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಎಂದು ಹೇಳಿದೆ.

English summary

Half Of The Global Workforce Danger Of Losing Their Livelihoods

Almost half of the global labour force, are in immediate danger of losing their livelihoods due to the coronavirus pandemic, said ILO on Wednesday.
Story first published: Friday, May 1, 2020, 11:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X