For Quick Alerts
ALLOW NOTIFICATIONS  
For Daily Alerts

ಹೆಚ್‌ಸಿಎಲ್‌ನ 16,000 ಉದ್ಯೋಗಿಗಳಿಗ ವಿಶೇಷ ಭತ್ಯೆ: 20,000 ಮಂದಿ ನೇಮಕದ ಗುರಿ

|

ದೇಶದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಎಚ್‌ಸಿಎಲ್ ಟೆಕ್ನಾಲಜೀಸ್ ಉದ್ಯೋಗಿಗಳಿಗೆ ಗುಡ್‌ನ್ಯೂಸ್ ಇಲ್ಲಿದೆ. ಕಂಪನಿಯು ಪ್ರತಿಭಾವಂತ ಜನರನ್ನು ಉತ್ತೇಜಿಸಲು ವಿಶೇಷ ಯೋಜನೆಯನ್ನು ಸಿದ್ಧಪಡಿಸಿದೆ. ಈ ಮೂಲಕ ಸುಮಾರು 16,000 ಉದ್ಯೋಗಿಗಳ ಸಿಟಿಸಿಗೆ ವಿಶೇಷ ಭತ್ಯೆಯನ್ನು ಸೇರಿಸಲಾಗಿದೆ.

HDFC ಬ್ಯಾಂಕ್ ಮೊಬೈಲ್ ATM: ನಿಮ್ಮ ಮನೆ ಬಾಗಿಲಿಗೆ ಬರಲಿದೆ ಹಣHDFC ಬ್ಯಾಂಕ್ ಮೊಬೈಲ್ ATM: ನಿಮ್ಮ ಮನೆ ಬಾಗಿಲಿಗೆ ಬರಲಿದೆ ಹಣ

ವಿಶೇಷ ಭತ್ಯೆಗೆ ಆಯ್ಕೆಗೊಂಡ ಉದ್ಯೋಗಿಗಳ ಸಿಟಿಸಿಯಲ್ಲಿ ಶೇಕಡಾ 25 ರಿಂದ 30ರಷ್ಟು ಅವರ ಕೌಶಲ್ಯಗಳ ಅಡಿಯಲ್ಲಿ ವಿಶೇಷ ಭತ್ಯೆ ನೀಡಲಾಗುತ್ತಿದೆ.

ಹೆಚ್‌ಸಿಎಲ್‌ನ 16,000 ಉದ್ಯೋಗಿಗಳಿಗ ವಿಶೇಷ ಭತ್ಯೆ

ಕಂಪನಿಯ ನಿರ್ವಹಣೆಯ ಪ್ರಕಾರ, ಅವರು ಕಳೆದ ಮೂರು ವರ್ಷಗಳಿಂದ ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಭತ್ಯೆಯ ಸೇರ್ಪಡೆಯು ಅರ್ಹ ಜನರ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳವನ್ನು ಕಂಡಿದೆ. 18 ತಿಂಗಳ ದತ್ತಾಂಶವನ್ನು ಆಧರಿಸಿ, ಈ ಆಯ್ಕೆ ಮಾಡಲಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 20,000 ಮಂದಿಯನ್ನು ನೇಮಕ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಎಚ್‌ಸಿಎಲ್ ಟೆಕ್ನಾಲಜೀಸ್ ಈಗಾಗಲೇ ಘೋಷಿಸಿದೆ. ಕಳೆದ ಹಣಕಾಸು ವರ್ಷದಲ್ಲಿ 14,000 ಮಂದಿ ನೇಮಕ ಮಾಡಿಕೊಳ್ಳಲಾಗಿತ್ತು. ಕೊರೊನಾವೈರಸ್ ಸಾಂಕ್ರಾಮಿಕ, ವೀಸಾ ನೀತಿ ಬದಲಾವಣೆ ನಡುವೆ ವಿದೇಶದಲ್ಲೂ ಹೊಸ ನೇಮಕಾತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮಾನವ ಸಂಪನ್ಮೂಲ ಅಧಿಕಾರಿ ಅಪ್ಪಾರಾವ್ ಹೇಳಿದರು.

English summary

HCL Pays 16k Employees Up to 30 Percent Of CTC As Skill Based Allowance

HCL Tech has paid nearly 16,000 employees 25-30% of their cost-to-company (CTC) as skill-based allowance, which was introduced three years ago.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X