For Quick Alerts
ALLOW NOTIFICATIONS  
For Daily Alerts

HCL ಟೆಕ್ನಾಲಜೀಸ್ Q3 ನಿವ್ವಳ ಲಾಭ 16 ಪರ್ಸೆಂಟ್ ಏರಿಕೆ

|

ಹೆಚ್‌ಸಿಎಲ್ ಟೆಕ್ನಾಲಜೀಸ್ ಡಿಸೆಂಬರ್ 31ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಏಕೀಕೃತ ಲಾಭದಲ್ಲಿ 16 ಪರ್ಸೆಂಟ್ ಏರಿಕೆ ದಾಖಲಿಸಿದೆ. ಶುಕ್ರವಾರ 2019-20ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ವರದಿ ಬಿಡುಗಡೆಗೊಳಿಸಿದ್ದು, ನಿವ್ವಳ ಲಾಭ 3,037 ಕೋಟಿ ರುಪಾಯಿ ಹೆಚ್ಚಾಗಿದೆ.

ಇಟಿ ನೌ ಸಮೀಕ್ಷೆಯ ಪ್ರಕಾರ ವಿಶ್ಲೇಷಕರು ಹೆಚ್‌ಸಿಎಲ್ ಟೆಕ್ನಾಲಜೀಸ್ ನಿವ್ವಳ ಲಾಭ 2,757.90 ಕೋಟಿ ರುಪಾಯಿ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅಂದಾಜಿನ ಪ್ರಮಾಣಕ್ಕಿಂತ ಕಂಪನಿಯ ನಿವ್ವಳ ಲಾಭವು ಹೆಚ್ಚಾಗಿದೆ. ಜೊತೆಗೆ ಪರಿಶೀಲನೆಯಲ್ಲಿರುವ ಆದಾಯವು 15.5 ಪರ್ಸೆಂಟ್ ಹೆಚ್ಚಾಗಿದ್ದು, 18,135 ಕೋಟಿ ರುಪಾಯಿಗೆ ಮುಟ್ಟಿದೆ.

HCL ಟೆಕ್ನಾಲಜೀಸ್ Q3 ನಿವ್ವಳ ಲಾಭ 16 ಪರ್ಸೆಂಟ್ ಏರಿಕೆ

'' ನಾವು ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಉತ್ತಮ ಕಾರ್ಯಕ್ಷಮತೆಯನ್ನು ಮುಂದುವರಿಸುತ್ತೇವೆ ಮತ್ತು ಈಗ ಈ ತ್ರೈಮಾಸಿಕದಲ್ಲಿ 10 ಬಿಲಿಯನ್ ಡಾಲರ್ ಆದಾಯ ದರವನ್ನು ದಾಟಿದ್ದೇವೆ. ನಮ್ಮ ಆದಾಯವು ಸ್ಥಿರ ಕರೆನ್ಸಿ ಪರಿಭಾಷೆಯಲ್ಲಿ 16.4 ಪರ್ಸೆಂಟ್ ಹೆಚ್ಚಾಗಿದೆ ಮತ್ತು ನಾವು 20.2 ಪರ್ಸೆಂಟ್‌ರಷ್ಟು EBITಯನ್ನು ನೀಡಿದ್ದೇವೆ. ಪ್ರಾರಂಭದ ಎರಡು ತ್ರೈಮಾಸಿಕದಲ್ಲಿ ಹೆಚ್‌ಸಿಎಲ್ ಸಾಫ್ಟವೇರ್ ಈಗಾಗಲೇ 4,600 ಗ್ರಾಹಕರನ್ನು ಆನ್‌ಬೋರ್ಡ್ ಮಾಡಿದೆ'' ಎಂದು ಹೆಚ್‌ಸಿಎಲ್ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಆಗಿರುವ ಸಿ. ವಿಜಯ್ ಕುಮಾರ್ ಹೇಳಿದ್ದಾರೆ.

2019-20ರ ಹಣಕಾಸು ವರ್ಷದಲ್ಲಿ ಕಂಪನಿಯು ಸ್ಥಿರವಾದ ಕರೆನ್ಸಿ ಪರಿಭಾಷೆಯಲ್ಲಿ 16.5 ಪರ್ಸೆಂಟ್‌ನಿಂದ 17ರವರೆಗೆ ಆದಾಯದ ಬೆಳವಣಿಗೆಯನ್ನು ಕಂಡರೆ, ಆಪರೇಟಿಂಗ್ ಮಾರ್ಜಿನ್ 19 ರಿಂದ 19.50 ವ್ಯಾಪ್ತಿಯಲ್ಲಿದೆ.

English summary

HCL Q3 Profit Rises 16 Percent

HCL Technologies on Friday reported 16.31 per cent year-on-year (YoY) rise in consolidated profit at Rs 3,037 crore for the quarter ended December 31
Story first published: Saturday, January 18, 2020, 10:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X