For Quick Alerts
ALLOW NOTIFICATIONS  
For Daily Alerts

700 ಕೋಟಿ ರುಪಾಯಿ ಮೌಲ್ಯದ ಬೋನಸ್ ಘೋಷಿಸಿದ HCL ಟೆಕ್

By ಅನಿಲ್ ಆಚಾರ್
|

ಮಾಹಿತಿ ತಂತ್ರಜ್ಞಾನ ಸೇವೆ ಒದಗಿಸುವ ಪ್ರಮುಖ ಕಂಪೆನಿ ಎ‌ಚ್ ಸಿಎಲ್ ಟೆಕ್ನಾಲಜೀಸ್ (ಎಚ್ ಸಿಎಲ್) ಸೋಮವಾರ (ಫೆಬ್ರವರಿ 8, 2021) ಸಿಬ್ಬಂದಿಗೆ 700 ಕೋಟಿ ರುಪಾಯಿ ಮೌಲ್ಯದ ಒಂದು ಸಲದ ವಿಶೇಷ ಬೋನಸ್ ಘೋಷಣೆ ಮಾಡಿದೆ. 2020ನೇ ಸಾಲಿಗೆ ಆದಾಯ 10 ಬಿಲಿಯನ್ ಡಾಲರ್ ಮೈಲುಗಲ್ಲು ದಾಟಿದ ಸಾಧನೆಗಾಗಿ ವಿಶ್ವದಾದ್ಯಂತ ಇರುವ ಕಂಪೆನಿ ಸಿಬ್ಬಂದಿಗೆ ಬೋನಸ್ ನೀಡಲು ಕಂಪೆನಿ ನಿರ್ಧಾರ ಮಾಡಿದೆ.

ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿದ ಎಲ್ಲ ಸಿಬ್ಬಂದಿಗೆ ಹತ್ತು ದಿನದ ವೇತನವು ಬೋನಸ್ ಆಗಿ ದೊರೆಯಲಿದೆ. ಡಿಸೆಂಬರ್ 31, 2020ಕ್ಕೆ ಎಚ್ ಸಿಎಲ್ ಪೂರ್ಣಾವಧಿ ಸಿಬ್ಬಂದಿ ಸಂಖ್ಯೆ 1,59,682 ಇತ್ತು. 2020ರ ಕ್ಯಾಲೆಂಡರ್ ವರ್ಷದಲ್ಲಿ ಎಚ್ ಸಿಎಲ್ ಟೆಕ್ನಾಲಜೀಸ್ ಆದಾಯ 10 ಬಿಲಿಯನ್ ಅಮೆರಿಕನ್ ಡಾಲರ್ ದಾಟಿದೆ. ನಿಯಮಿತ ಕರೆನ್ಸಿ ಬೆಳವಣಿಗೆ ವರ್ಷದಿಂದ ವರ್ಷಕ್ಕೆ 3.6% ಆಗಿದೆ.

ವೇತನ ಕಡಿತವಿಲ್ಲ, ಜತೆಗೆ ಬೋನಸ್: ಕೊರೊನಾ ದಿನದ ಕರುಣಾಮಯಿ ಕಂಪೆನಿವೇತನ ಕಡಿತವಿಲ್ಲ, ಜತೆಗೆ ಬೋನಸ್: ಕೊರೊನಾ ದಿನದ ಕರುಣಾಮಯಿ ಕಂಪೆನಿ

ಎಚ್ ಸಿಎಲ್ ಟೆಕ್ನಾಲಜೀಸ್ ಐಪಿಒ ಬಿಡುಗಡೆಯಾದ ಇಪ್ಪತ್ತು ವರ್ಷದೊಳಗೆ ಐತಿಹಾಸಿಕ ಸಾಧನೆ ಮಾಡಿರುವುದು ಸಿಬ್ಬಂದಿಯ ನಿಯಮಿತವಾದ ಸಾಧನೆ ಹಾಗೂ ಅಮೋಘ ಪರಿಶ್ರಮ ಎಂದು ಎಚ್ ಸಿಎಲ್ ಟೆಕ್ ಹೇಳಿಕೆಯಲ್ಲಿ ತಿಳಿಸಿದೆ. ಈ ವಿಶೇಷ ಬೋನಸ್ ಅನ್ನು ಫೆಬ್ರವರಿ 2021ಕ್ಕೆ ಸಿಬ್ಬಂದಿಗೆ ನೀಡಲಾಗುತ್ತದೆ. ಇದಕ್ಕಾಗಿ ಕೆಲವು ದೇಶಗಳಲ್ಲಿ $ 90 ಮಿಲಿಯನ್ ಪೇ ರೋಲ್ ತೆರಿಗೆ ಆಗುತ್ತದೆ ಎನ್ನಲಾಗಿದೆ.

700 ಕೋಟಿ ರುಪಾಯಿ ಮೌಲ್ಯದ ಬೋನಸ್ ಘೋಷಿಸಿದ HCL ಟೆಕ್

ಎಚ್ ಸಿಎಲ್ ಟೆಕ್ನಾಲಜೀಸ್ ಷೇರಿನ ಬೆಲೆ ಕಳೆದ ಒಂದು ವರ್ಷದಲ್ಲಿ 60%ನಷ್ಟು ಏರಿಕೆ ಕಂಡಿದೆ. ಈಗಲೂ ಹಲವು ವಿಶ್ಲೇಷಕರು ಈ ಕಂಪೆನಿ ಷೇರಿನ ಖರೀದಿ ಶಿಫಾರಸು ಮಾಡುತ್ತಿದ್ದಾರೆ.

English summary

HCL Tech Announced One Time Bonus Worth Of Rs 700 Crore To It's Employees

One time bonus worth of Rs 700 crore announced to employees by HCL Technologies on Monday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X