For Quick Alerts
ALLOW NOTIFICATIONS  
For Daily Alerts

ವೇತನ ಕಡಿತವಿಲ್ಲ, ಜತೆಗೆ ಬೋನಸ್: ಕೊರೊನಾ ದಿನದ ಕರುಣಾಮಯಿ ಕಂಪೆನಿ

|

ಕೊರೊನಾ ವೈರಸ್ ಹೊಡೆತಕ್ಕೆ ಹಲವು ಘಟಾನುಘಟಿ ಕಂಪೆನಿಗಳು ಉದ್ಯೋಗಿಗಳಿಗೆ ವೇತನ ಕಡಿತ ಮಾಡಿವೆ. ಹಲವು ಕಡೆ ಉದ್ಯೋಗ ಕಡಿತವಾಗಿದೆ. ಆದರೆ ಭಾರತದ ಮೂರನೇ ಅತಿ ದೊಡ್ಡ ಸಾಫ್ಟ್ ವೇರ್ ಸೇವೆ ಒದಗಿಸುವ ಸಂಸ್ಥೆ ಎಚ್ ಸಿಎಲ್ ಟೆಕ್ನಾಲಜೀಸ್ ಕಂಪೆನಿಯ 1,50,000 ಲಕ್ಷ ಸಿಬ್ಬಂದಿಗೆ ಯಾವುದೇ ವೇತನ ಕಡಿತ ಮಾಡಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ, ಈಗಾಗಲೇ ಮಾತು ನೀಡಿರುವಂತೆ ಕಳೆದ ವರ್ಷದ ಬೋನಸ್ ಕೊಡುವುದಾಗಿ ತಿಳಿಸಿದೆ.

ಹೊಸಬರಿಗಾಗಿ ಈಗಾಗಲೇ ನೀಡಿರುವ ಹದಿನೈದು ಸಾವಿರ ಜಾಬ್ ಆಫರ್ ಗಳನ್ನು ಮಾನ್ಯ ಮಾಡಲಾಗುವುದು ಎಂದು ಎಚ್ ಸಿಎಲ್ ತಿಳಿಸಿದೆ. "ನಮಗೆ ಈ ವರೆಗೆ ಯಾವ ಪ್ರಾಜೆಕ್ಟ್ ಕ್ಯಾನ್ಸಲ್ ಆಗಿಲ್ಲ. ಆದರೆ ಹೊಸ ಪ್ರಾಜೆಕ್ಟ್ ಗಳು ಸ್ವಲ್ಪ ತಡವಾಗಿವೆ. ಆದರೆ ನಮಗೆ ಹಲವು ಅವಕಾಶಗಳು ಕಾಣುತ್ತಿದೆ. ನಮ್ಮ ಕಂಪೆನಿಯಲ್ಲಿ ಐದು ಸಾವಿರ ಹುದ್ದೆಗಳಿವೆ. ಕೆಲವು ಕಡೆ ನೇಮಕಾತಿ ಮಾಡುತ್ತಿದ್ದೇವೆ" ಎಂದು ತಿಳಿಸಲಾಗಿದೆ.

ಬೋನಸ್ ತಡೆ ಹಿಡಿಯುವ ಆಲೋಚನೆ ಇಲ್ಲ

ಬೋನಸ್ ತಡೆ ಹಿಡಿಯುವ ಆಲೋಚನೆ ಇಲ್ಲ

ಎಚ್ ಸಿಎಲ್ ಕಂಪೆನಿಯ ವಾರ್ಷಿಕ ಅಪ್ರೈಸಲ್ ಪ್ರಕ್ರಿಯೆ ಜುಲೈ ತಿಂಗಳ ಸಮೀಪದಲ್ಲಿ ಇದ್ದು, ಆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಲಾಗಿದೆ. ಕೆಲಸ ಬಿಡುವವರ ಪ್ರಮಾಣದಲ್ಲಿ ಶೇಕಡಾ ಐವತ್ತರಷ್ಟು ಕಡಿಮೆ ಆಗಿದೆ ಎಂದು ತಿಳಿಸಲಾಗಿದೆ. ಇನ್ನು ಸಿಬ್ಬಂದಿಯ ವೇತನ ಕಡಿತ ಅಥವಾ ಬೋನಸ್ ತಡೆ ಹಿಡಿಯುವ ಆಲೋಚನೆ ಕಂಪೆನಿಗೆ ಇಲ್ಲ ಎನ್ನಲಾಗಿದೆ.

ಯಾವುದೇ ಬಿಕ್ಕಟ್ಟಿನಲ್ಲಿ ಸಿಬ್ಬಂದಿಯ ವೇತನ ಮುಟ್ಟಿಲ್ಲ

ಯಾವುದೇ ಬಿಕ್ಕಟ್ಟಿನಲ್ಲಿ ಸಿಬ್ಬಂದಿಯ ವೇತನ ಮುಟ್ಟಿಲ್ಲ

ಕಳೆದ ಹನ್ನೆರಡು ತಿಂಗಳಲ್ಲಿ ಸಿಬ್ಬಂದಿ ಏನು ಕೆಲಸ ಮಾಡಿದ್ದಾರೋ ಅದಕ್ಕೆ ಪ್ರತಿಯಾಗಿ ಬೋನಸ್ ಕೊಡ್ತೀವಿ. ನಮ್ಮವರ ಶ್ರಮಕ್ಕೆ ಪ್ರತಿಫಲ ನೀಡಲು ನಾವು ಬದ್ಧರಾಗಿದ್ದೇವೆ. ಈ ಹಿಂದೆ 2008ರ ಬಿಕ್ಕಟ್ಟಿನಲ್ಲಿ, ಅದಕ್ಕೂ ಮುಂಚಿನ ಯಾವುದೇ ಬಿಕ್ಕಟ್ಟಿನಲ್ಲಿ ಕಂಪೆನಿಯು ಸಿಬ್ಬಂದಿಯ ವೇತನ ಮುಟ್ಟಿಲ್ಲ. ಇನ್ನು ಮುಂದೆಯೂ ಅದೇ ಸಿದ್ಧಾಂತ ಪಾಲಿಸುತ್ತೇವೆ ಎಂದು ಕಂಪೆನಿ ಪರವಾಗಿ ತಿಳಿಸಲಾಗಿದೆ.

ಟಾಪ್ ಐದು ಕಂಪೆನಿಗಳಿಗಿಂತ ಬೆಳವಣಿಗೆ ವೇಗ ಹೆಚ್ಚು

ಟಾಪ್ ಐದು ಕಂಪೆನಿಗಳಿಗಿಂತ ಬೆಳವಣಿಗೆ ವೇಗ ಹೆಚ್ಚು

ಟಾಪ್ ಐದು ಕಂಪೆನಿಗಳಿಗೆ ಹೋಲಿಸಿದರೆ ಕಳೆದ ಆರ್ಥಿಕ ವರ್ಷದಲ್ಲಿ ಎಚ್ ಸಿಎಲ್ ಟೆಕ್ನಾಲಜಿ 16.7 ಪರ್ಸೆಂಟ್ ನೊಂದಿಗೆ ಬೆಳವಣಿಗೆ ವೇಗ ಹೆಚ್ಚಾಗಿದೆ. ಆದಾಯ 9.94 ಬಿಲಿಯನ್ ಅಮೆರಿಕನ್ ಡಾಲರ್ ಇದೆ. ಕೊರೊನಾದ ಕಾರಣಕ್ಕೆ ಇರುವ ಅನಿಶ್ಚಿತತೆಯಿಂದ ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆಯ ಅಂದಾಜು ಮಾಡಿಲ್ಲ.

English summary

HCL Technology Company Honoring Promised Bonus To Employees

India's third largest software service company HCL technologies honoring promised bonus to employees.
Story first published: Thursday, May 21, 2020, 12:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X