For Quick Alerts
ALLOW NOTIFICATIONS  
For Daily Alerts

ಎಚ್‌ಡಿಎಫ್‌ಸಿ ನಿವ್ವಳ ಲಾಭ ಶೇ.16 ಹೆಚ್ಚಳ: ರೂ 3,700 ಕೋಟಿಗೆ ಏರಿಕೆ

|

ದೇಶದ ಅತಿದೊಡ್ಡ ಸಾಲ ನೀಡುವ ಸಂಸ್ಥೆಯಾದ ಎಚ್‌ಡಿಎಫ್‌ಸಿ ಲಿಮಿಟೆಡ್ ಮಾರ್ಚ್ 2022 ತ್ರೈಮಾಸಿಕದಲ್ಲಿ ತನ್ನ ಸ್ವತಂತ್ರ ನಿವ್ವಳ ಲಾಭದಲ್ಲಿ 16 ಶೇಕಡಾ ಏರಿಕೆ ಕಂಡಿದೆ. ಇದರ ಒಟ್ಟು ನಿವ್ವಳ ಮೌಲ್ಯವು 3,700 ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದೆ.

 

ಕಂಪನಿಯು ಹಿಂದಿನ ವರ್ಷದ ಅವಧಿಯಲ್ಲಿ 3,180 ಕೋಟಿ ರೂ.ಗಳ ನಿವ್ವಳ ಲಾಭವನ್ನು ದಾಖಲಿಸಿತ್ತು. ಮಾರ್ಚ್ 2022 ರ ತ್ರೈಮಾಸಿಕದಲ್ಲಿ ಒಟ್ಟು ಆದಾಯವು ಹಿಂದಿನ ವರ್ಷದ ಅವಧಿ ಆದಾಯ 11,707.53 ಕೋಟಿ ರೂಪಾಯಿಗಳಿಂದ 12,308.46 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಲಿಮಿಟೆಡ್ ತಿಳಿಸಿದೆ.

 

ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ದರ ಪರಿಷ್ಕರಣೆ: ಇಲ್ಲಿದೆ ಮಾಹಿತಿಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ದರ ಪರಿಷ್ಕರಣೆ: ಇಲ್ಲಿದೆ ಮಾಹಿತಿ

2021-22ರ ಪೂರ್ಣ ವರ್ಷದಲ್ಲಿ, ಕಂಪನಿಯ ನಿವ್ವಳ ಲಾಭವು 2020-21ರಲ್ಲಿ ರೂ 12,027 ಕೋಟಿಗಿಂತ ರೂ 13,742 ಕೋಟಿಗಳಿಗೆ ಏರಿದೆ. Q4 FY22 ರ ಅವಧಿಯಲ್ಲಿ ನಿವ್ವಳ ಲಾಭವು 21.6 ಶೇಕಡಾ ಏರಿಕೆಯಾಗಿ 6,892 ಕೋಟಿ ರೂ.ಗಳಿಗೆ ತಲುಪಿದೆ. ಇನ್ನು Q4 FY21 ರಲ್ಲಿ 5,669 ಕೋಟಿ ರೂ ಆದಾಯ ದೊರೆತಿತ್ತು.

 ಎಚ್‌ಡಿಎಫ್‌ಸಿ ನಿವ್ವಳ ಲಾಭ ಶೇ.16 ಹೆಚ್ಚಳ: ರೂ 3,700 ಕೋಟಿಗೆ ಏರಿಕೆ

ಆದರೆ ತ್ರೈಮಾಸಿಕದಲ್ಲಿ ಆದಾಯವು ಒಂದು ವರ್ಷದ ಹಿಂದೆ ರೂ.35,754 ಕೋಟಿಯಿಂದ ರೂ.35,060 ಕೋಟಿಗೆ ಇಳಿದಿದೆ. ಕಂಪನಿಯ ಮಂಡಳಿಯು ಹಣಕಾಸು ವರ್ಷ 2022ರಲ್ಲಿ ಪ್ರತಿ ಈಕ್ವಿಟಿ ಷೇರಿಗೆ 30 ರೂಪಾಯಿಗಳ ಲಾಭಾಂಶವನ್ನು ಶಿಫಾರಸು ಮಾಡಿದೆ ಎಂದು ಎಚ್‌ಡಿಎಫ್‌ಸಿ ಹೇಳಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ದರ ಪರಿಷ್ಕರಣೆ: ಇಲ್ಲಿದೆ ಮಾಹಿತಿಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ದರ ಪರಿಷ್ಕರಣೆ: ಇಲ್ಲಿದೆ ಮಾಹಿತಿ

ಎಚ್‌ಡಿಎಫ್‌ಸಿ ಷೇರುಗಳು ಬಿಎಸ್‌ಇಯಲ್ಲಿ ಮಧ್ಯಾಹ್ನದ ಸೆಷನ್‌ನಲ್ಲಿ ರೂ 2253.55 ರಂತೆ ವಹಿವಾಟು ನಡೆಸಿದೆ. ಕೊನೆಯಲ್ಲಿ 1,400.25 ರೂಪಾಯಿಯಂತೆ ವಹಿವಾಟು ಅಂತ್ಯಗೊಳಿಸಿದೆ. ಇಂದಿನ ವಹಿವಾಟು ಅಂತ್ಯದ ವೇಳೆ ನಿನ್ನೆಯ ಕೊನೆಯ ವಹಿವಾಟಿಗಿಂತ ಎಚ್‌ಡಿಎಫ್‌ಸಿ ಷೇರು ಶೇಕಡ 1.13ರಷ್ಟು ಏರಿಕೆ ಕಂಡಿದೆ.

English summary

HDFC Q4 Net Profit Rises 16 Pc, To Rs 3,700 Cr

The country's largest mortgage lender HDFC Ltd on Monday reported a 16 per cent rise in its standalone net profit to Rs 3,700 crore in the March 2022 quarter.
Story first published: Monday, May 2, 2022, 19:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X